ರಾಜಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಅಭಿನಯದ ’ಬಧಾಯೀ ದೋ’: ಪ್ರೇಮಿಗಳ ತಿಂಗಳು ಫೆಬ್ರವರಿಯಲ್ಲಿ ಬಿಡುಗಡೆ

ರಾಜಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಅಭಿನಯದ ಅಪ್ ಕಮಿಂಗ್ ’ಬಧಾಯಿ ದೋ’ ಫಿಲ್ಮಿನ ಹೊಸ ರಿಲೀಸ್ ಡೇಟ್ ಘೋಷಣೆ ಆಗಿದೆ .
ಈ ಮಾಹಿತಿಯನ್ನು ಫಿಲ್ಮ್ ನ ಮೇಕರ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಹೇಳಿಕೆಯಲ್ಲಿ ಜಾರಿಗೊಳಿಸಿದ್ದಾರೆ. ಮೊದಲಿಗೆ ಮುಂದಿನ ವರ್ಷ ೨೦೨೨ರ ಜನವರಿ ೨೮ರಂದು ಈ ಫಿಲ್ಮ್ ರಿಲೀಸ್ ಎನ್ನಲಾಗಿತ್ತು .ಆದರೆ ಈಗ ಫೆಬ್ರವರಿ ೪ ರಂದು ಬಿಡುಗಡೆಯಾಗಲಿದೆ.
’ಜಂಗ್ಲಿ ಪಿಕ್ಚರ್’ ಪೋಸ್ಟ್ ಶೇರ್ ಮಾಡುತ್ತಾ ಈ ಮಾತನ್ನು ಹೇಳಿದೆ. ಇದೀಗ ಈ ಫಿಲ್ಮ್ ಪ್ರೇಮಿಗಳ ತಿಂಗಳು ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಇದಕ್ಕಿಂತ ಒಳ್ಳೆಯ ತಾರೀಕು ತಿಂಗಳ ಆರಂಭದಲ್ಲಿ ಬೇರೆ ಸಿಗಲಾರದು ಎಂದಿದ್ದಾರೆ ಮೇಕರ್ಸ್. ಜಂಗ್ಲಿ ಪಿಕ್ಚರ್ಸ್ ನ ಪ್ರೊಡಕ್ಷನ್ ನಲ್ಲಿ ತಯಾರಾಗಿರುವ ಫಿಲ್ಮನ್ನು ಹರ್ಷವರ್ಧನ್ ಕುಲಕರ್ಣಿ ನಿರ್ದೇಶಿಸಿದ್ದಾರೆ. ಈ ಫಿಲ್ಮ್ ನಲ್ಲಿ ರಾಜಕುಮಾರ್ ಮತ್ತು ಭೂಮಿಯ ಹೊರತಾಗಿ ಸೀಮಾ ಪಹವಾ,ಶೀಬಾ ಚಡ್ಡಾ, ಲವ್ಲೀನ ಮಿಶ್ರಾ, ನಿತೇಶ್ ಪಾಂಡೆ, ಶಶಿಭೂಷಣ್ ಮೊದಲಾದ ಕಲಾವಿದರಿದ್ದಾರೆ.

ಇಮ್ರಾನ್ ಹಾಶ್ಮೀ ಶೀಘ್ರವೇ ಹಾಲಿವುಡ್ ಪ್ರಾಜೆಕ್ಟ್ ನಲ್ಲಿ ಅಭಿನಯಿಸುವ ಸಿದ್ಧತೆ

ಇಮ್ರಾನ್ ಹಾಶ್ಮೀ ಈ ದಿನಗಳಲ್ಲಿ ರಿಲೀಸ್ ಆಗಿರುವ ತನ್ನ ಫಿಲ್ಮ್ ಆಙಃಃUಏ ನ್ನು ಮುಂದಿಟ್ಟು ಸುದ್ದಿಯಲ್ಲಿದ್ದಾರೆ.
ಇತ್ತೀಚಿನ ಸುದ್ದಿಯಂತೆ ಇಮ್ರಾನ್ ಹಾಶ್ಮಿ ಅವರನ್ನು ಬಾಲಿವುಡ್ ಪ್ರಾಜೆಕ್ಟ್ ಗಾಗಿ ಅಪ್ರೋಚ್ ಮಾಡಲಾಗಿದೆ. ಮೇಕರ್ಸ್ ಈ ದಿನಗಳಲ್ಲಿ ಇಮ್ರಾನ್ ಹಾಶ್ಮಿ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ .


ಈ ಬಗ್ಗೆ ಇಮ್ರಾನ್ ಹಾಶ್ಮಿ ಹೇಳುತ್ತಾರೆ-
“ಹೌದು, ಹಾಲಿವುಡ್ ನ ಅವಕಾಶವು ನನ್ನನ್ನು ಹುಡುಕಿಕೊಂಡು ಬಂದಿದೆ .ಆದರೆ ನಾನು ಇದನ್ನು ಗುಪ್ತವಾಗಿರಿಸಲು ಇಚ್ಚಿಸಿದ್ದೇನೆ. ಸರಿಯಾದ ಸಮಯ ಬಂದಾಗ ಎಲ್ಲವನ್ನೂ ತಿಳಿಸುವೆ” ಎಂದು.
ಇಮ್ರಾನ್ ಹಾಶ್ಮೀ ಅವರಿಗೆ ಖುಷಿಯ ಸಂಗತಿ ಎಂದರೆ ಅವರ ಅಭಿಮಾನಿಗಳು ಫಿಲ್ಮ್ ಆಥಿbbuಞ ತುಲನೆಯನ್ನು ಹಾಲಿವುಡ್ ನ ಫಿಲ್ಮ್ ಜೊತೆಗೆ ಮಾಡಿರುವುದು. ಇದರಲ್ಲಿ ಅಂತಾರಾಷ್ಟ್ರೀಯ ಮಾನದಂಡದ ಆಧಾರದಲ್ಲಿ ಕಥೆಯೂ ಇದೆಯಂತೆ. ಹಿಂದಿ ಫಿಲ್ಮ್ ನಲ್ಲಿ ಮೊದಲ ಬಾರಿಗೆ ಯಹೂದಿಗಳ ಪೌರಾಣಿಕ ಕಥೆಯ ಮೇಲೆ ಬೆಳಕು ಚೆಲ್ಲಲಾಗಿದೆ . ಈ ಫಿಲ್ಮ್ ನ ಕಾರಣವೇ ಇಂಟರ್ನ್ಯಾಷನಲ್ ಪ್ರಾಜೆಕ್ಟ್ ಗಾಗಿ ಇಮ್ರಾನ್ ಹಾಶ್ಮಿ ಅವರನ್ಬು ಅಪ್ರೋಚ್ ಮಾಡಲಾಗಿದೆಯಂತೆ.

ಅಭಿಮಾನಿಗಳಿಗೆ ನಟಿ ಭೂಮಿ ಪೆಡ್ನೇಕರ್ ಸೀರೆಯಲ್ಲಿ ಬಹಳ ಚೆಂದ ಕಾಣುತ್ತಾರಂತೆ

ನಟಿ ಭೂಮಿ ಪೆಡ್ನೇಕರ್ ಈ ದಿನಗಳಲ್ಲಿ ತನ್ನ ಅಪ್ ಕಮಿಂಗ್ ಫಿಲ್ಮ್ ’ಗೋವಿಂದಾ ಮೇರಾ ನಾಮ್’ ಇದರ ಲುಕ್ಕ್ ಮುಂದಿಟ್ಟು ಸುದ್ದಿಯಲ್ಲಿದ್ದಾರೆ.
ಫಿಲ್ಮ್ ನ ವಿಷಯವಾಗಿ ಭೂಮಿ ಹೇಳುತ್ತಾರೆ- “ಜನರಿಗೆ ನಾನು ಸೀರೆಯಲ್ಲಿ ಬಹಳ ಚಂದ ಕಾಣುತ್ತೇನೆ ಅಂತೆ. ಇದು ನಿಜಕ್ಕೂ ನನಗೆ ಬಹಳ ದೊಡ್ಡ ಕಾಂಪ್ಲಿಮೆಂಟ್ ಆಗಿದೆ .ಅವಕಾಶ ಸಿಕ್ಕಿದಾಗಲೆಲ್ಲ ನಾನು ಇನ್ನು ಮುಂದೆ ಸೀರೆಯಲ್ಲಿ ಇರಲು ಇಷ್ಟಪಡುತ್ತೇನೆ .

ನನಗೆ ಅದೃಷ್ಟ ಅಂದರೆ ನನ್ನ ಹಲವು ಫಿಲ್ಮ್ ಗಳಲ್ಲಿ ನನಗೆ ಸೀರೆ ಧರಿಸುವ ಅವಕಾಶಗಳು ಸಿಕ್ಕಿತ್ತು. ಅಭಿಮಾನಿಗಳು ನಾನು ಸೀರೆಯಲ್ಲಿ ಇರುವುದನ್ನು ಕಾಣೋದಕ್ಕೆ ಇಷ್ಟಪಟ್ಟಿರುವುದು ನನಗೆ ಖುಷಿಯಾಗಿದೆ. ನನ್ನ ’ಪತಿ-ಪತ್ನಿ ಔರ್ ವೋ’ ಫಿಲ್ಮ್ ನ ಲುಕ್ ಗೆ ಕೂಡಾ ಬಹಳ ಪ್ರೀತಿ ದೊರಕಿದೆ. ಜನ ನನ್ನನ್ನು ಈ ಫಿಲ್ಮ್ ನ ಲುಕ್ಕ್ ಗೆ ಹೆಚ್ಚು ಇಷ್ಟಪಟ್ಟಿದ್ದಾರೆ.ಆದರೆ ಆ ಎರಡು ಪಾತ್ರಗಳೂ ಬೇರೆ ಬೇರೆ. ಸೀರೆಯ ಕುರಿತಾದ ನನ್ನ ಪ್ರೀತಿ ನನ್ನ ಸಿನೆಮಾ ಪಯಣದ ಜೊತೆಯಲ್ಲೇ ಸಾಗಿದೆ. ಇದಕ್ಕೆ ಮುಖ್ಯ ಕಾರಣ ನನ್ನ ಅಭಿಮಾನಿಗಳು ನನ್ನನ್ನು ಸೀರೆಯಲ್ಲಿ ನೋಡಲು ಇಚ್ಚಿಸಿರುವುದು .’ಗೋವಿಂದಾ ನಾಮ್ ಮೇರಾ’ ಇದರಲ್ಲಿ ಆಡಿಯನ್ಸ್ ಗೆ ನನ್ನ ಲುಕ್ಕ್ ಈಗಲೇ ಇಷ್ಟೊಂದು ಇಷ್ಟ ಆಯಿತು ಎಂದರೆ ನನ್ನ ಅಭಿಮಾನಿಗಳಿಗೆ ಸೀರೆಯ ಕುರಿತು ಗೌರವ ಹೆಚ್ಚಾಗಿದೆ ಎಂದರ್ಥ.” ಗೋವಿಂದಾ ನಾಮ್ ಮೇರಾ ಇದರಲ್ಲಿ ಭೂಮಿ- ವಿಕ್ಕಿ ಕೌಶಲ್ ಜೊತೆಗಿದ್ದಾರೆ .ಈ ಫಿಲ್ಮ್ ೧೦ ಜೂನ್ ೨೦೨೨ರಂದು ರಿಲೀಸ್ ಆಗಲಿದೆ. ಈ ಫಿಲ್ಮ್ ನಲ್ಲಿ ನಟಿ ಕಿಯಾರಾ ಆಡ್ವಾಣಿ ಕೂಡ ಇದ್ದಾರೆ.