ರಾಜಕೀಯ ಲಾಭಕ್ಕಾಗಿ ಅಶಾಂತಿ ಹಾಗು ದ್ವೇಷÀವನ್ನು ಹುಟ್ಟುಹಾಕಲಾಗುತ್ತಿದೆಃ ಸಿ.ಎ.ಗಂಟೆಪ್ಪಗೋಳ

ವಿಜಯಪುರ, ಜು.23-ಕಳೆದ ಕೆಲವು ವಷರ್Àಗಳಿಂದ ದೇಶದಲ್ಲಿ ಹಾಗೂ ನಾಡಿನಲ್ಲಿ ಮನುಷÀ್ಯ ಮನುಷÀ್ಯರ ನಡುವೆ ಮತ್ತು ಧರ್ಮ ಧರ್ಮಗಳ ನಡುವೆ ರಾಜಕೀಯ ಲಾಭಕ್ಕಾಗಿ ಕಲಹ? ಅಶಾಂತಿ ಹಾಗು ದ್ವೇಷÀವನ್ನು ಹುಟ್ಟುಹಾಕಲಾಗುತ್ತಿದೆ. ನಾಡಿನ ಜನರಲ್ಲಿ ಸಹೋದರತ್ವ? ಸಹಬಾಳ್ವೆ ಮತ್ತು ಸಹಾರ್ದತೆಯನ್ನು ಕಾಪಾಡುವ ಸಲುವಾಗಿ ವಿಜಯಪುರ ನಗರದಲ್ಲಿ ಹೊಸದಾಗಿ ಅಸ್ವಿತ್ವಕ್ಕೆ ಬಂದಿರುವ ರಾಷ್ಟ್ರೀಯ ಸೌಹಾರ್ದ ವೇದಿಕೆಯ ಉದ್ಘಾಟನಾ ಸಮಾರಂಭವು ಇದೇ ರವಿವಾರ ದಿನಾಂಕ 24.07.2022 ರಂದು ನಗರದ ಕಂದಗಲ್ ಶ್ರೀ ಹಣಮಂತರಾಯ ರಂಗಮಂದಿರದಲ್ಲಿ ನೆರವೇರಲಿದೆ ಎಂದು ರಾಷ್ಟ್ರೀಯ ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಿ.ಎ.ಗಂಟೆಪ್ಪಗೋಳ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಖ್ಯಾತ ಮಠಾಧೀಶರು ಹಾಗು ಃಂಒಅಈ ಸಂಸ್ಥೆಯ ರಾಷ್ಟ್ರೀಯ ಲಿಂಗಾಯತ ಮೋರ್ಚಾದ ಅಧಕ್ಷರು ಆಗಿರುವ ಲಾತೂರು ಜಿಲ್ಲೆಯ ಉಸ್ತೂರಿಯ ಕೋರ್ಣೇಶ್ವರ ಸಂಸ್ಥಾನ ಮಠದ ಪೀಠಾದ್ಯಕ್ಷರಾಗಿರುವ ಪೂಜ್ಯ ಶ್ರೀ ವಿಶ್ವನಾಥ ಕೋರ್ಣೋಶ್ವರ ಸ್ವಾಮಿಜಿಯವರು ಉದ್ಘಾಟಿಸಲಿದ್ದಾರೆ ಎಂದರು.
ಈ ಸಂದರ್ಭ ಸಂಚಾಲಕರಾದ ಶ್ರೀಮತಿ ರಾಜೇಶ್ವರಿ ಹಿಪ್ಪರಗಿ ಮಾತನಾಡಿ, ಬೆಲೆ ಹೆಚ್ಚಳಿಕೆ, ಸೇರಿದಂತೆ ಜನಸಾಮಾನ್ಯರಿಗೆ ಭದ್ರತೆ ಸಿಗುತ್ತಿಲ್ಲ. ಯಾರು ಧ್ವನಿ ಎತ್ತುತ್ತಾರೋ ಅವರನ್ನು ಜೈಲಿಗೆ ಅಟ್ಟುತ್ತಿದ್ದಾರೆ. ನಾವು ಇನ್ನುಮುಂದೆ ಸುಮ್ಮನೆ ಕೂಡುವುದಿಲ್ಲ. ಜನರಲ್ಲಿ ಜಾಗೃತಿ ಮೂಡಿಸಲು ಸನ್ನದ್ಧರಾಗಿದ್ದೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಫಯಾಜ ಕಲಾದಗಿ ಮಾತನಾಡಿ, ಉದ್ಘಾಟನಾ ಸಮಾರಂಭರ ನಿಮಿತ್ಯ “ಸೌಹಾರ್ದತೆಯತ್ತ ಭಾರತ” ಎನ್ನುವ ಚಿಂತನಾಗೋಷ್ಟಿಯಲ್ಲಿ ಕಲಬುರಗಿಯ ಖ್ಯಾತ ಚಿಂತಕರು ಹಾಗು ಬರಹಗಾರರಾಗಿರುವ ಪೆÇ್ರ. ಆರ್ ಕೆ ಹುಡಗಿಯವರು ಮಾತನಾಡಲಿದ್ದಾರೆ. ಅವರೊಂದಿಗೆ ಕಲಬುರಗಿಯ ಇನ್ನೊಬ್ಬ ಚಿಂತಕರಾಗಿರುವ ಪೆÇ್ರ. ಪ್ರಭು ಖಾನಾಪುರೆಯವರು ಕೂಡ ಅಥಿತಿಗಳಾಗಿ ಮಾತನಾಡಲಿದ್ದಾರೆ.
ಸಮಾರಂಭದಲ್ಲಿ ಚಿಂತಕರು? ಬರಹಗಾರು ಹಾಗು ಸೌಹಾರ್ದ ವೇದಿಕೆಯ ಪದಾಧಿಕಾರಿಗಳಾಗಿರುವ ಡಾ. ಜೆ ಎಸ್ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ಗೌರವಾದ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಶ್ರೀ ವಸಂತ ಮುಳಸಾವಳಗಿಯವರು ವಹಿಸಿಕೊಳ್ಳಲಿದ್ದಾರೆ. ಅತಿಥಿಯಾಗಿ ನಿರ್ದೇಶಕರು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಫಾದರ್ ಟಿವೋಲ್ ಮಚಾಳೋ, ಪ್ರಗತಿಪರ ಒಕ್ಕೂಟಗಳ ಅಧ್ಯಕ್ಷರಾದ ಭೀಮಶಿ ಕಲಾದಗಿ, ಪ್ರಗತಿಪರ ಚಿಂತಕರಾದ ರಿಯಾಜ ಫಾರೂಕಿ ಭಾಗವಹಿಸಲಿದ್ಧಾರೆ.
ವೇದಿಕೆಯ ಉಪಾದ್ಯಕ್ಷರಾದ ಮೋಹನ್ ಹಿಪ್ಪರಗಿಯವರು ಸ್ವಾಗತಿಸಲಿದ್ದು ಸಮಾರಂಭವನ್ನು ವೇದಿಕೆಯ ಖಜಾಂಚಿಯಾದ ವಿ.ಎ.ಪಾಟೀಲರು ಸೇರಿದಂತೆ ಇನ್ನುಳಿದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳು ಫಯಾಜ್ ಕಲಾದಗಿ, ನಿರ್ದೇಶಕರಾದ, ಬಾಳು ಜೇವೂರ, ಜಿ ಜಿ ಗಾಂಧಿ, ಬಸವರಾಜ್ ಬಿ ಕೆ, ಬಾಳು ಜೇವೂರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.