ರಾಜಕೀಯ ಮುಖ್ಯವಲ್ಲ, ನನ್ನ ಕಾರ್ಯಕರ್ತರ ಯೋಗಕ್ಷೇಮಮುಖ್ಯ


ಸಂಜೆವಾಣಿ ವಾರ್ತೆ
ಕುರುಗೋಡು.ನ.16   ನನಗೆ ರಾಜಕೀಯ ಮುಖ್ಯವಲ್ಲ, ಬದಲಾಗಿ ನನ್ನ ಬೆಳೆವಣಿಗೆಗೆ ಕಾರಣರಾದ ನನ್ನ ಕಾರ್ಯಕರ್ತರು ಹಾಗು ಹಿತೈಷಿಗಳ ಆರೋಗ್ಯಮುಖ್ಯ ಎಂದು ಕುರುಗೋಡು ಕ್ಷೇತ್ರದ ಮಾಜಿಶಾಸಕ ಎನ್.ಸೂರ್ಯನಾರಾಯಣರೆಡ್ಡಿ ಹೇಳಿದರು.
ಅವರು ಪಟ್ಟಣದ ಕಾಂಗ್ರೆಸ್ ಧುರೀಣ ವೆಂಕಟೇಶಗೌಡ ಇವರ ನಿವಾಸದಲ್ಲಿ  ಕುರುಗೋಡು ತಾಪಂ.ಮಾಜಿ ಸದಸ್ಯೆ ಯಲ್ಲಾಪುರ ಗಾಳೆಮ್ಮನವರ ಆರೊಗ್ಯ ಮತ್ತು ಯೋಗಕ್ಷೇಮ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ನನ್ನ ಬೆಳೆವಣಿಗೆಗೆ ನನ್ನ ಕಾರ್ಯಕರ್ತರು, ಹಿತೈಷಿಗಳು ಹಾಗು ಅಭಿಮಾನಿಗಳೇ ಕಾರಣ.  ಆದ್ದರಿಂದ ಅವರ ಕುಂದು-ಕೊರತೆ, ಕಷ್ಟ-ಸುಖಗಳನ್ನು ವಿಚಾರಿಸುವುದು ನನ್ನ ದರ್ಮ. ಆದ್ದರಿಂದ ಕುರುಗೋಡು ತಾಪಂ ಮಾಜಿ ಸದಸ್ಯೆ ಗಾಳೆಮ್ಮನವರ ಆರೋಗ್ಯವನ್ನು ವಿಚಾರಿಸಲು ಕುರುಗೋಡಿಗೆ ಬಂದಿರುವೆ. ಆದರೆ ನಾನು ಯಾವುದೇ ರಾಜಕೀಯ ಉದ್ದೇಶಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಮಾತ್ರವಲ್ಲದೆ ಡಿಸೆಂಬರ್ 5 ರಂದು ನನ್ನ 69ನೇ ಹುಟ್ಟುಹಬ್ಬವನ್ನು ಕಾರ್ಯಕರ್ತರು ಹಾಗು ಹಿತೆಷಿಗಳ ಒತ್ತಾಯದಂತೆ ಕುರುಗೋಡು ಆರಾದ್ಯದೈವ ಶ್ರೀದೊಡ್ಡಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ ಹಾಗು ವಿಶೇಷ ಪೂಜೆಸಲ್ಲಿಸುವುದರ ಮೂಲಕ ಆಚರಿಸಲಾಗುವುದು ಎಂದು ನುಡಿದರು.
ಕುರುಗೋಡು ಕಾಂಗ್ರೆಸ್ ಮುಖಂಡ ಡಿ.ನಾಗೇಶ್ವರರಾವ್ ಮತ್ತು ಮುಷ್ಟಗಟ್ಟೆ ಹನುಮಂತಪ್ಪ ಮಾತನಾಡಿ ಕುರುಗೋಡು ಕ್ಷೇತ್ರದ ಮಾಜಿಶಾಸಕ ಎನ್.ಸೂರ್ಯನಾರಾಯಣರೆಡ್ಡಿಯವರ 69ನೇ ಹುಟ್ಟುಹಬ್ಬವನ್ನು ಡಿ.5 ರಂದು ಆಚರಿಸವ ಪ್ರಯುಕ್ತ ರೈತಸಮುದಾಯಭವನದಲ್ಲಿ ನೆರೆದ ಭಕ್ತರಿಗೆ, ಕಾರ್ಯಕರ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು ಎಲ್ಲಾ ಕಾರ್ಯಕರ್ತರು ಅಂದು ಬೆಳಿಗ್ಗೆ ಆಗಮಿಸಬೇಕೆಂದು ನುಡಿದರು.
ಪತ್ರಿಕಾಗೊಷ್ಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಎನ್.ಸೂರ್ಯನಾರಾಯಣರೆಡ್ಡಿಯವರ ಹಿತೈಷಿಗಳು ಇದ್ದರು.