ರಾಜಕೀಯ ಮೀರಿ ಒಗ್ಗಟ್ಟಾದರೆ ಸಮಾಜ ಅಭಿವೃದ್ಧಿ :ದರ್ಶನಾಪುರ

ಶಹಾಪುರ :ಜು.30: ವೀರಶೈವ ಲಿಂಗಾಯತ ಸಮುದಾಯ ಸವಾಲುಗಳನ್ನು ಎದುರಿಸಿದೆ. ಸಮಾಜವು ಎಲ್ಲದಕ್ಕೂ ಮೀರಿ ಒಗ್ಗಟ್ಟಾದರೆ ಸಮಾಜದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಫಕೀರೇಶ್ವರ ಮಠದಲ್ಲಿ ಆಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು…ಯುವ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು ನಾವು ಸನ್ಮಾನಕ್ಕೆ ಒಳಪಡುವುದುರ ಸಂದೇಶ ಏನೆಂದರೆ ಸಮಾಜದ ರಕ್ಷ ಕವಚ ಮತ್ತು ಜವಾಬ್ದಾರಿಯ ಮಾಲೆ ಅಂತ ನನ್ನ ಭಾವನೆ, ಮತಕ್ಷೇತ್ರ ಅಷ್ಟೇ ಅಲ್ಲದೇ ಸಚಿವನಾದ ಬಳಿಕ ರಾಜ್ಯದ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಆದರೆ ನನ್ನ ಕ್ಷೇತ್ರದ ಜನತೆಯನ್ನು ಯಾವತ್ತು ಮರೆಯೋದಿಲ್ಲಾ. ಪೂಜ್ಯರ ಆಶೀರ್ವಾದ ಮತ್ತು ತಮ್ಮೆಲ್ಲರ ಬೆಂಬಲದಿಂದ ಸಚಿವನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ.
ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಆಕಸ್ಮಿಕವಾಗಿ ನಾನು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದು, ಜನತೆ ನನಗೆ ಎಲ್ಲಿಲ್ಲದ ಪ್ರೀತಿ ತೋರಿಸಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನಗರಕ್ಕೆ ಐಟಿಐ ಕಾಲೇಜು, ಆಸ್ಪತ್ರೆಯ ಮಂಜೂರು ಮಾಡಿಸಲಾಗಿದೆ. ಸತತ ಪ್ರಯತ್ನ ಮಾಡಿ ನಗರಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಿದ ತೃಪ್ತಿ ಇದೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ಅತ್ಯವಶ್ಯಕವಿದ್ದು ಅದಕ್ಕಾಗಿ ಹೆಚ್ಚು ಒತ್ತು ನೀಡಲಾಗುವುದು.
ಕಳೆದ 30 ವರ್ಷಗಳ ಶಹಾಪುರ ನಗರಕ್ಕೂ ಈಗಿನ ನಗರಕ್ಕೂ ವ್ಯತ್ಯಾಸವಿದೆ. ಈಗ ನಮ್ಮದೇ ಸರ್ಕಾರವಿದ್ದು, ಹೆಚ್ಚು ಅನುದಾನ ತಂದು ನಗರವನ್ನೂ ಜನತೆಗೆ ಅವಶ್ಯಕತೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪೂಜ್ಯ ವೇದಮೂರ್ತಿ
ಬಸವಯ್ಯ ಶರಣರು, ಪೂಜ್ಯ ಗುರುಪಾದ ಮಹಾಸ್ವಾಮಿಗಳು, ಪೂಜ್ಯ ಸಿದ್ದೇಶ್ವರ ಸ್ವಾಮಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಸಿದ್ದಲಿಂಗಪ್ಪ ಆನೇಗುಂದಿ, ಸುರೇಂದ್ರ ಪಾಟೀಲ್ ಗುಂಡಪ್ಪ ತುಂಬಿಗಿ, ಸಮಾಜದ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ, ಶರಣು ಗದ್ದುಗೆ, ಮಹೇಶ ಆನೆಗುಂಡಿ, ಸಿದ್ದು ಆರಭೋಳ, ರಾಜು ಆನೆಗುಂದಿ, ಅರವಿಂದ ಉಪ್ಪಿನ್, ನೀಲಪ್ಪ ಚೌದ್ರಿ, ಮಲ್ಲು ಮುಂಡಾಸ್ ಸೇರಿದಂತೆ ಸಮಾಜದ ಅನೇಕ ಹಿರಿಯರು ಮುಖಂಡರು ಯುವಕರು ಇದ್ದರು.
ಕೈಗಾರಿಕ ವಸಾಹತು ಪ್ರಾರಂಭಕ್ಕೆ ಭರವಸೆ : ಹುಬ್ಬಳ್ಳಿ: ಬೆಳಗಾವಿ, ಚಾಮರಾಜನಗರ, ಚಿತ್ರದುರ್ಗ, ಚಿತ್ತಾಪುರ ಸೇರಿದಂತೆ 6-7 ಕಡೆಗಳಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸುವ
ಉದ್ದೇಶವಿದ್ದು, ಮತಕ್ಷೇತ್ರದಲ್ಲಿಯೂ ವ್ಯವಸ್ಥೆ ಮಾಡಿ ಮುಂದಿನ ದಿನಗಳಲ್ಲಿ ಪ್ರಾರಂಭ ಮಾಡಿ ಸಣ್ಣ ಉದ್ದಿಮೆದಾರರಿಗೆ ಅವಕಾಶಮಾಡಿಕೊಡುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ
ಸಚಿವನಾಗಿ ಜವಾಬ್ದಾರಿ ಹೆಚ್ಚಿದೆ ಸಚಿವನಾದ ಬಳಿಕ ಜವಾಬ್ದಾರಿ ಹೆಚ್ಚಿದೆ. ಆಸಕ್ತಿಯಿಂದ ಕೆಲಸ ಮಾಡುವೆ. ಈ ಹಿಂದೆ ಇಂಧನ ಖಾತೆ ಸಚಿವನಾಗಿ ಕೆಲಸ ಮಾಡಿದ್ದು, ಈಗ ಸಣ್ಣ ಕೈಗಾರಿಕಾ ಸಚಿವನಾಗಿದ್ದೇನೆ ಹೆಚ್ಚು ಶ್ರಮ, ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಹೆಸರು ತರುವ ಕೆಲಸ ಮಾಡುತ್ತೇನೆ ಎಂದು ನುಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮತ್ತು ಭಾರತಿ ದರ್ಶನಾಮರ ದಂಪತಿಗಳಿಗೆ ಸನ್ಮಾನಿಸಲಾಯಿತು.
ಜಲಾಧಾರ ಯೋಜನೆ ಮೂಲಕ ಕುಡಿಯುವ ನೀರು ಸುಮಾರು 1600 ಕೋಟಿ ರೂ. ವೆಚ್ಚದಲ್ಲಿ ಜಲಾಧಾರ ಯೋಜನೆಯ ಮುಖಾಂತರ ರಾಯಚೂರ ಮತ್ತು ಯಾದಗಿರಿ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಯೋಜನೆ, ಮುಂದಿನ ದಿನಗಳಲ್ಲಿ ಪಾರಂಭಗೊಳ್ಳಲಿದೆ ಎಂದು ತಿಳಿಸಿದರು.ಬೇಡಿಕೆ ಈಡೇರಿಕೆಗೆ ಸಚಿವರಿಗೆ ಮನವಿ : ಸಮಾಜಕ್ಕೆ ನಿವೇಶನವನ್ನು ಅತಿ ಮಂಜೂರಾಗಿರುವ ಕಡಿಮೆ ದರದಲ್ಲಿ ನೋಂದಣಿ ಮಾಡಿಕೊಡಬೇಕು. ವೀರಶೈವ ಲಿಂಗಾಯತ ವಸತಿ ನಿಲಯ ಸ್ಥಾಪಿಸಲು ಕಟ್ಟಡಕ್ಕಾಗಿ ಸರ್ಕಾರದಿಂದ ಮಂಜೂರಿ ಮಾಡಬೇಕು. ಮತ್ತು ಸಮಾಜಕ್ಕಾಗಿ ರುದ್ರಭೂಮಿ ಒದಗಿಸಿಕೊಡುವಂತೆ ಮನವಿ ಪತ್ರ ನೀಡಿದರು.