ರಾಜಕೀಯ ಬೇರೆಸದಿರಿ ಎಂದ 
 ಕಳಕಪ್ಪ ಕಂಬಳಿ ಮಾಡಿದ ತಪ್ಪೇನು?


ರುದ್ರಪ್ಪ ಭಂಡಾರಿ 
ಕುಕನೂರು, ಫೆ.27: ಹಾಲುಮತ ಸಮಾಜದ ಮುಖಂಡ ಹಾಗೂ ಬಿಜೆಪಿಯ ಹಿಂದುಳಿದ ವಗ೯ಗಳ ನಾಯಕ ಕಳಕಪ್ಪ ಕಂಬಳಿ ಅವರ ವಿರುದ್ದ ಅದೇ ಹಾಲುಮತ ಸಮಾಜದವರು ಮಾಧ್ಯಮ ಗಳ ಮೂಲಕ ಸಮರ ನಡೆಸಿರುವುದು ಸಾವ೯ಜನಿಕ ವಲಯದಲ್ಲಿ ತೀವ್ರ ಚೆಚೆ೯ಯಾಗುತ್ತಿವೆ. ಕೆಲವೇ ವರುಷ ಗಳ  ಹಿಂದೆ ಕಾಂಗ್ರೆಸ್ ನ  ರಾಯರೆಡ್ಡಿ ಜೊತೆಗೆ ನಿಕಟ ಸಂಪಕ೯ ವಿರಿಸಿ ನಂತರ ಬದಲಾದ ರಾಜಕೀಯ ವಿದ್ಯ ಮಾನಗಳಿಂದ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ, ನಂತರ ಶಾಸಕ ಹಾಗೂ ಸಚಿವ ಹಾಲಪ್ಪ ಆಚಾರ ಅವರ  ಮೂಲಕ ಬಿಜೆಪಿ ಪಾಳಯ ದಲ್ಲಿ ಗುರುತಿಸಿಕೊಂಡು ರಾಜಕೀಯ ಹಾಗೂ ಸಾಮಾಜಿಕ ಸೇವೆ ಗೈಯುತ್ತಿರುವುದು , ಎಲ್ಲ ಸಮಾಜದವರ ಸಾಮಾಜಿಕ, ಧಾಮಿ೯ಕ ಕಾಯ೯ಗಳಲ್ಲಿ ಮುಂಚೂಣಿಯಲ್ಲಿ ನಿಂತು ದಾನ ಧಮ೯ಗಳನ್ನೂ ನೆರವೇರಿಸಿ ಕೊಡುತ್ತಿದ್ದಾರೆ. ಕಳೆದ ಬಾರಿ ಕೊರಾನ್ನಾ ಸಂದಭ೯ದಲ್ಲು ಕ್ಷೇತ್ರದ ಜನರಿಗೆ ಆಹಾರ ಕಿಟ್ ,ಮಾಸ್ಕ್, ಸಾನಿಟರ್ ಮುಂತಾದ ಅವಶ್ಯಕ ವಸ್ತುಗಳನ್ನು  ತಮ್ಮ ಕೈಲಾದ ಮಟ್ಟಿಗೆ ವಿತರಿಸುವ ಮೂಲಕ ಎಲ್ಲರ ಅಭಿಮಾನಕ್ಕೆ ಪಾತ್ರ ರಾಗಿದ್ದಾರೆ,  ಆದರೂ ಸಹ ಇದನ್ನು ಸಹಿಸದೆ ಕೆಲವರು ಅನಗತ್ಯ ವಿಷಯ ವನ್ನು ಚುನಾವಣೆ ಸಂದಭ೯ದಲ್ಲಿ ಕುರುಬ ಸಮಾಜದ ಮುಖಂಡರು ಪರಸ್ಪರ ಮಾಧ್ಯಮಗಳ ಮೂಲಕ ಬೀದಿಗೆ ಬಂದಿರುವುದು ವಿಪಯ೯ಸ.     ಏನಿದು ರಂಪಾಟ : ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವಂತೆ ಕಳೆದ ವಾರ ಯಲಬುರ್ಗಾ ದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಹಾಗೂ ಹಾಲುಮತ ಸಮಾಜದ ಸಮಾವೇಶ  ಸಮಾರಂಭದಲ್ಲಿ ಬೆಂಗಳೂರಿನ ಕಾಂಗ್ರೆಸ್ ಮುಖಂಡ ,ಶಾಸಕ ಬಿರತಿ ಸುರೇಶ್ ಅವರು ಪಕ್ಷಾತೀತ ಸಮಾರಂಭದಲ್ಲಿ ಕಾಂಗ್ರೆಸ್ ನ ಸಿದ್ದರಾಮಯ್ಯ ಈ ಮುಖ್ಯಮಂತ್ರಿ ಯಾಗಬೇಕೆಂದರೆ  ಹಾಗೂ ಯಲಬುರ್ಗಾ ದಿಂದ ಬಸವರಾಜ್ ರಾಯರೆಡ್ಡಿ ಅವರನ್ನು ಶಾಸಕರನ್ನಾಗಿ ಗೆಲ್ಲಿಸಬೇಕೆಂದು ಬಹಿರಂಗ ಸಭೆಯಲ್ಲಿ ಮಾಡಿದ ಭಾಷಣವೇ ಬಿಜೆಪಿ ಪಾಳೆಯದ ಹಾಲುಮತ ಸಮಾಜದ ಕಳಕಪ್ಪ ಕಂಬಳಿ ಹಾಗೂ ಬಿಜೆಪಿ ಹಿಂದುಳಿದ ಮೋಚಾ೯ ಅಧ್ಯಕ್ಷ ಮಂಜುನಾಥ್ ಗಟ್ಟೆಪ್ಪ ನವರೂ ಸೇರಿದಂತೆ ಹಲವರು ಬೈರ್ತಿ ಸುರೇಶ್ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇದು ಪಕ್ಷಾತೀತ ಕಾಯ೯ಕ್ರಮ ರಾಯರೆಡ್ಡಿ ಯವರ ಹೆಸರು ಬಳಕೆ ಬೇಡ ಎಂದು ಹೇಳಿದ್ದೆ ನಿತ್ಯ ರಂಪಾಟಕ್ಕೆ ಕಾರಣ ಎಂಬುದು ಸ್ಪಷ್ಟ. ಕಳಕಪ್ಪ ಕಂಬಳಿ ಮಾಧ್ಯಮ ಮೂಲಕ ಹೈಲೈಟ್ ಆಗಿದ್ದು ಸಹ ಎದುರಾಳಿ ಕಾಂಗ್ರೆಸ್ ಟೀಮು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂಬುದು ನಿವಿ೯ವಾದ. ವಿಲನ್ ಗೆ ಯತ್ನ :  ಹಾಲುಮತ ಸಮಾಜದ ಮತ್ತೊಬ್ಬ ಬಿಜೆಪಿ ಲೀಡರ್ ಗಟ್ಟಿಪ್ಪ ನವರ್ ಸಹ ವೇದಿಕೆಯಲ್ಲಿ ಗದ್ದಲದಲ್ಲಿ ಪಾಲ್ಗೊಂಡಿದ್ದನ್ನೂ  ಸಹ  ಸ್ವತ: ಗಟ್ಟೆಪ್ಪ ನವರೇ ಪತ್ರ ಕತ೯ರಿಗೇ ಪ್ರತಿಕ್ರಿಯಿಸಿದ್ದರು. ಆದ್ರೆ ಇವರ ಬಗ್ಗೆ ಯಾರು ದುಸರಾ ಮಾತಾಡುತ್ತಿಲ್ಲ. ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ರಾಶಿ ಎನ್ನುವಂತೆ ಕಂಬಳಿಯವರನ್ನು ಮಾತ್ರ ವಿಲನ್ ಮಾಡಿ ಉಳಿದ ಹಾಲುಮತ ಸಮಾಜದ ಬಿಜೆಪಿ ಲೀಡರ್ ಗಳು ತೆಪ್ಪಗೆ ಕೂತಿರುವುದು ಅನುಮಾನಕ್ಕೆ ಆಸ್ಪದ ವಾಗಿದೆ. ಕಂಬಳಿ ಕಾಂಗ್ರೆಸ್ ತೊರೆದ ನಂತರ ನಿಗಿ ನೀಗಿ ಕೆಂಡ ಕಾರುತ್ತಿದ್ದ ಕಾಂಗ್ರೆಸ್ಸಿಗರು ಈಗ ಟಿಕಿಸುತ್ತ ತೇಜೋವಧೆ ಪ್ರಯತ್ನ ಗಳನ್ನೂ ನಡೆಸುತ್ತಿರುವುದು ಸಂಗೊಳ್ಳಿ ರಾಯಣ್ಣ ಕಾಯ೯ಕ್ರಮ ನೆಪ ವಾಯಿತೆ? ಎಂದು ಹಲವರ ಪ್ರಶ್ನೆ. ಗಮನಿಸಬಹುದಾಗಿದೆ. ಈ ಬಗ್ಗೆ ಯಲಬುಗಾ೯- ಕುಕನೂರ್ ದಲ್ಲಿ ಪ್ರೆಸ್ ಮೀಟ್ ನಡೆದು ಹಾದಿ ಬೀದಿಚಚೆ೯ಗಳು ಮುಗಿಯುತ್ತಿಲ್ಲ. ಕಂಬಳಿ  ವಿರುದ್ದ ಸಮಾಜದ ಹಿರಿಯರು ಮುಗಿ ಬಿದ್ದು ಈಗ ಬಿಸಿ  ರಕ್ತದ ಯುವಕರು ಹಾದಿ ಬೀದಿ ವಾಕ್ಸಮರಕ್ಕೆ ಇಳಿದಿದ್ದಾರೆ. ಆದರೆ ಕಂಬಳಿಯವರ ಬೆನ್ನಿಗೆ ಬಿಜೆಪಿ ಮುಖಂಡರಾಗಲಿ ಹಾಲುಮತ ಸಮಾಜದ ಇತರೆ ಮುಖಂಡರಾಗಲಿ   ಸೊಲ್ಲು ಎತ್ತುತ್ತಿಲ್ಲ.ಸಂಗೊಳ್ಳಿ ರಾಯಣ್ಣ ನ ಕಾಯ೯ಕ್ರಮದ ಕ್ರಾಂತಿ ಇನ್ನೂ ಎಲ್ಲಿಯವರೆಗೆ ತಲುಪುತ್ತದೆ ಕಾದು ನೋಡಬೇಕಿದೆ.                                                       
ಕಳಕಪ್ಪ ಜೆಡ್ ಪೀ ಮೆಂಬರ್ ಆಗೋಕೆ ಬಿಡಿ. ಎಂದು ಕುಕನೂರಿನ ಸುದ್ದಿ ಗೋಷ್ಠಿಯಲ್ಲಿ ಪತ್ರಿಕಾ ಮಿತ್ರ ರೊಬ್ಬರು ಕಂಬಳಿ ಟೀಕಿಸುವ ಮುಖಂಡರಿಗೆ ಅಲವತ್ತು ಕೊಂಡ ಪ್ರಸಂಗ ನಡೆಯಿತು. ಈ ಕೋರಿಕೆ ಲೆಕ್ಕಿಸದೆ ಟೀಕಿಸುವ ಭರಾಟೆ ಜೋರಾಯಿತು ಇದು ಕೆಲ ಸಮಯ ಅಚ್ಚರಿಗೆ ಕಾರಣವಾಯಿತು