ರಾಜಕೀಯ ಬಿಟ್ಟು ಚಿಕಿತ್ಸೆ ನೀಡಿ

ಕಲಬುರಗಿ:ಮೇ.1: ಲಾಕ್ ಡೌನ್ ಒಂದು ಕಡೆ ಜನರ ಜೀವ ಹಿಂಡುತ್ತಿದ್ದರೆ ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಅದೆಷ್ಟೋ ಜೀವಗಳು ಹಾರಿ ಹೋಗುತ್ತಿದ್ದು ಕೂಡಲೇ ಆಸ್ಪತ್ರೆಯ ವೈದ್ಯರು ರಾಜಕೀಯ ಬಿಟ್ಟು ಚಿಕಿತ್ಸೆ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಸರಕಾರಿ ಹಾಗೂ ಖಾಸಗಿ ವೈದ್ಯರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮನವಿ ಮಾಡಿರುವ ಅವರು ಸಾಮಾಜಿಕ ಜಾಲತಾಣಗಳನ್ನು ನೋಡಿದರಂತೂ ಕನ್ನಡಿಗರೇ ಹರಿ ಬಿಟ್ಟ ಅದೆಷ್ಟೋ ಆಡಿಯೋ ವಿಡಿಯೋಗಳು ರಾರಾಜಿಸುತ್ತಿವೆ. ಮನುಷ್ಯನ ಮನಸ್ಸು ಇಷ್ಟೊಂದು ಕುಗ್ಗುತ್ತಿದೆಯೇ ಎಂದು ಅನುಮಾನ ಶುರುವಾಗುತ್ತಿದೆ. ದಯಮಾಡಿ ಸರಕಾರಗಳು ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡಬೇಡಿ. ಜನರ ಆರೋಗ್ಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬೇಡಿ ನಿಮಗೆ ನಮ್ಮ ಸಂಘಟನೆಯ ವತಿಯಿಂದ ಕೈ ಮುಗಿದುಕೊಳ್ಳುತ್ತೇವೆ ಎಂದು ಹೇಳಿದರು ಮಕ್ಕಳು, ಮಹಿಳೆಯರು ಅನಾಥರಾಗುತ್ತಿದ್ದಾರೆ. ಅನೇಕರು ಹಾದಿ ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕು. ನಿಮಗೆ ಜನಪ್ರತಿನಿಧಿಗಳು ಮತ ಹಾಕಿಲ್ವ ಎಂದು ಪ್ರಶ್ನಿಸಿದರು ? ಆದರೆ ನೀವು ಈಗ ಮಾಡುತ್ತಿರುವುದು ನಂಬಿಕೆ ದ್ರೋಹ, ಜನ ಸಾಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತುಕೊಳ್ಳುವ ಜಾಣತನ ಬಿಟ್ಟು ಅವರ ಬದುಕು ಅವರಿಗೆ ಬಿಟ್ಟು ಕೊಡಿ ಎಂದು ಅವರು ಮನವಿ ಮಾಡಿಕೊಂಡರು. ಕೂಡಲೇ ರಾಜಕಾರಣಿಗಳು ರಾಜಕೀಯ ಬಿಟ್ಟು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.