ರಾಜಕೀಯ ಬಿಟ್ಟರೂ ಸಹಕಾರ ಕ್ಷೇತ್ರ ಬಿಡಲಾರೆ

ಕೋಲಾರ,ಮೇ,೨೪- ನಾನು ರಾಜಕೀಯ ಬಿಟ್ಟರೂ ಸಹಕಾರ ಕ್ಷೇತ್ರವನ್ನು ಬಿಡುವುದಿಲ್ಲ. ಸಹಕಾರವೇ ನನ್ನ ಜನ್ಮ , ಸಹಕಾರವೇ ನನ್ನ ಕರ್ಮವೂ ಅಗಿದೆ. ಸಹಕಾರ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಿದ್ದಷ್ಟು ರಾಜಕೀಯದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗದು ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತಿಳಿಸಿದರು.
ತಮ್ಮ ಗೃಹ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡುತ್ತಾ ಸಹಕಾರ ಕ್ಷೇತ್ರದಲ್ಲಿ ನಾನು ಕಳೆದ ೪೦ ವರ್ಷಗಳಿಂದ ಸಾರ್ವಜನಿಕರಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಅರ್ಥಿಕವಾಗಿ ಇಪ್ಕೋ ಸೇವಾಸಂಸ್ಥೆಯಿಂದ ನೆರವು ನೀಡುತ್ತಾ ಬರುತ್ತಿದ್ದೇನೆ ಎಂದರು.
ಕಳೆದ ೪೦ ವರ್ಷಗಳಿಂದ ಕ್ರಿಪ್ಕೋ ನಿರ್ದೇಶಕನಾಗಿ ಮುಂದುವರೆದಿದ್ದೇನೆ, ೨ ಭಾರಿ ಅಧ್ಯಕ್ಷನಾಗಿದ್ದೇನೆ, ಸುಮಾರು ದೇಶಗಳಲ್ಲಿ ಈ ಕಂಪನಿಯ ವ್ಯವಹಾರಗಳಿದೆ ಎಂದ ಅವರು ಕ್ರಿಪ್ಕೋ ಕಂಪನಿಯಿಂದಲೂ ರೈತರಿಗೆ ಹಲವು ರೀತಿಯಲ್ಲಿ ನೆರವು ನೀಡುತ್ತಾ ಬರುತ್ತಿದ್ದೇನೆಂದರು.
ರಾಸಾಯಾನಿಕ ಗೊಬ್ಬರಗಳು, ಬಿತ್ತನೆ, ಔಷಧಿಗಳು,ಕೃಷಿ ಉಪಕರಣ ಯಂತ್ರಗಳು, ಮಾರುಕಟ್ಟೆ ವ್ಯವಸ್ಥೆಗಳ ಬಗ್ಗೆ ಹಲವು ಸೌಲಭ್ಯಗಳನ್ನು ಕೃಷಿ ಕ್ಷೇತ್ರದಲ್ಲಿ ಕಲ್ಪಿಸಿರುವುದಾಗಿ ವಿವರಿಸಿದ ಅವರು ನಕಲಿ ಗೊಬ್ಬರ ಬಿತ್ತನೆಗೆ ಸಂಬಂಧಿಸಿದಂತೆ ಅಂಥಹವರನ್ನು ಹಿಡಿದು ನೇಣಿಗೆ ಹಾಕಬೇಕು, ನಕಲಿ ಕಂಪನಿಗಳಿಂದ ಎಷ್ಟು ಮಂದಿ ರೈತರ ಮನೆ ಹಾಳಾಗಲಿದೆ ಎಂಬುವುದು ಹೇಸಿಗೆ ತಿನ್ನು ಮಂದಿಗೆ ಎಲ್ಲಿ ಅರ್ಥವಾಗುತ್ತೇ ಎಂದು ಕಿಡಿ ಕಾರಿದರು, ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ಅವಕಾಶ ಮಾಡಿ ಕೊಡಿ ಎಂದಾಗ ನಾನು ಸಮ್ಮತಿಸಿ ಸಿದ್ದರಾಮಯ್ಯ ಅವರ ಪರವಗಿ ಅನಿಲ್ ಕುಮಾರ್, ನಸ್ಸೀರ್ ಆಹಮದ್ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದೆ. ಅದರೆ ಚುನಾವಣೆ ಇನ್ನು ೧೫-೨೦ ದಿನ ಇರುವಾಗ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿದಾಗ ನಾನು ಏನು ಮಾಡಲು ಸಾಧ್ಯ, ಚುನಾವಣೆಗೆ ನಾನು ಯಾವ ಸಿದ್ದತೆ ಮಾಡಿ ಕೊಂಡಿರಲಿಲ್ಲ ಹಾಗಾಗಿ ನಾನು ಸ್ವರ್ಧಿಸದೆ ತಟಸ್ಟನಾಗಿದ್ದೆ. ಪಕ್ಷದ ಹೈಕಮಾಂಡ್ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಿ ಪಕ್ಷದ ಪರವಾಗಿ ಕೆಲಸ ಮಾಡಲು ಮನವಿ ಮಾಡಿದಾಗ ಚುನಾವಣೆಯಲ್ಲಿ ಎಲ್ಲರೂ ಪ್ರಮಾಣಿಕವಾಗಿ ಕೆಲಸ ಮಾಡಿ ಸುಮಾರು ೩೩ ಸಾವಿರ ಅಂತರದಲ್ಲಿ ಮತ ಪಡೆದು ಯಶಸ್ವಿಯಾಗಿದ್ದೇವೆ ಎಂದರು.
ಅದರೆ ರಮೇಶ್ ಕುಮಾರ್ ಅವರು ಚುನಾವಣೆಯಲ್ಲಿ ಸೋಲನ್ನಾಪ್ಪಿದ್ದು ನನಗೆ ಭಾರಿ ನೋವುಂಟಾಗಿದೆ. ವೆಂಕಟಶಿವಾರೆಡ್ಡಿಯವರು ನನ್ನ ಸ್ನೇಹಿತ ನಾನು ಅವರು ಇಬ್ಬರು ಕಾಲೇಜಿನ ಗೆಳೆಯರು ಅಗಿನಿಂದಲೇ ಅವರು ನನ್ನ ಪ್ರತಿಸ್ವರ್ಧಿಯಾಗಿದ್ದರು ಎಂದು ಕಾಲೇಜಿನ ದಿನಗಳನ್ನು ಹಂಚಿ ಕೊಂಡರು,
ರಾಜ್ಯದಲ್ಲಿ ಸಚಿವ ಸ್ಥಾನಗಳ ಹಂಚಿಕೆಯಾಗುತ್ತಿದೆ. ದೇವನಹಳ್ಳಿ ಕ್ಷೇತ್ರದಿಂದ ಸ್ವರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಹಿರಿಯ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಪ್ರಥಮ ಸಚಿವ ಸಂಪುಟದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎರಡನೇ ಹಂತದಲ್ಲಿ ಕೃಷ್ಣ ಬೈರೇಗೌಡರಿಗೆ ಹಾಗೂ ಚಿಂತಾಮಣಿಯ ಶಾಸಕರಾದ ಡಾ. ಸಿ. ಸುಧಾಕರ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಅವರದು ಮೊದಲಿನಿಂದಲೂ ಕಾಂಗ್ರೇಸ್ ಕುಟುಂಬವೆಂದು ಗುರುತಿಸಿ ಕೊಂಡಿದೆ ಎಂದು ನೆನಪಿಸಿ ಕೊಂಡರು,
ನಂತರ ಹಲವಾರು ತಾಂತ್ರಿಕ ಕಾರಣಗಳಿಂದ ಕುಂಟುತ್ತಾ ಸಾಗಿ ಬಂದು ಸರ್ಕಾರ ಬದಲಾದ ಮೇಲೆ ಸ್ಥಗಿತ ಗೊಂಡಿತ್ತು ಮತ್ತೇ ನಾನು ಶಾಸಕನಾದ ಮೇಲೆ ಇತರೆ ಶಾಸಕರೊಂದಿಗೆ ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚುವರಿ ಹಣ ಮಂಜೂರು ಮಾಡಿಸಿದ್ದೇವು. ಈಗಾ ಯೋಜನೆಯು ಪೂರ್ಣಗೊಂಡಿದ್ದು ಜೂನ್ ಅಂತ್ಯದೊಳಗೆ ಲೋಕಾರ್ಪಣೆ ಮಾಡಲು ಸಿದ್ದತೆ ಮಾಡಲಾಗಿದೆ. ಸಧ್ಯದಲ್ಲಿಯೇ ಕೋಲಾರ ಜಿಲ್ಲೆಯ ಶಾಸಕರ ನಿಯೋಗದೊಂದಿಗೆ ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ಅವರನ್ನು ಆಹ್ವಾನಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು,