ರಾಜಕೀಯ ಬಳಸಿ ಸಮಾಜ ಒಡಕು-ಖಂಡನೆ

ಚಿಕ್ಕಬಳ್ಳಾಪುರ.ಮಾ೬:ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸದಲ್ಲಿ ಎಂದೂ ಬಲಿಜ ಸಮುದಾಯದಲ್ಲಿ ಇಬ್ಬಾಗದ ಮಾತಿರಲಿಲ್ಲ. ಆದರೆ ಈಗ ಕೆಲವು ಮುಖಂಡರು ಸ್ವ ಹಿತಾಸಕ್ತಿ, ರಾಜಕೀಯ ಕಾರಣಕ್ಕಾಗಿ ಸಮಾಜದಲ್ಲಿ ಒಡಕನ್ನು ಉಂಟು ಮಾಡುತ್ತಿರುವುದು ಖಂಡನೀಯ ಎಂದು ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಅಸಮಾಧಾನವ್ಯಕ್ತಪಡಿಸಿದರು.
ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ವರ್ಷ ಬಿ.ಜೆ.ಪಿ .ಸರಕಾರ ಯೋಗಿ ನಾರೇಯಣ ಯತೀಂದ್ರರ ಜಯಂತಿಯನ್ನು ಸರಕಾರಿ ಕಾರ್ಯಕ್ರಮ ಎಂದು ಘೋಷಣೆ ಮಾಡಿದೆ. ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಹೋರಾಟದ ಮೂಲಕ ಸರಕಾರಿ ಸೌಲಭ್ಯ ಪಡೆದುಕೊಳ್ಳಬೇಕು. ಯಾವುದೇ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಿದರೆ ಮನೆ ಬಾಗಿಲಿಗೆ ಬಂದು ಸೌಲಭ್ಯ ಕೊಡುವುದಿಲ್ಲ. ಸಮುದಾಯದ ಕೆಲ ವ್ಯಕ್ತಿಗಳು ಸ್ವಹಿತಾಸಕ್ತಿ ದೃಷ್ಟಿಯಿಂದ ಸರಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಹೇಳಿಕೆ ನೀಡಿರುವುದು ವಿಷಾದಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿಸರು.
ಬಲಿಜ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ೧೯೯೪ರಲ್ಲಿ ವೀರಪ್ಪ ಮೋಯ್ಲಿ ರದ್ದುಗೊಳಿಸಿದರು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಸಮುದಾಯದ ೭ ಶಾಸಕರು, ಇಬ್ಬರು ಮಂತ್ರಿಗಳು ಇದ್ದರು ಯಾಕೆ ಧ್ವನಿ ಎತ್ತಲಿಲ್ಲ. ಆಗ ಆದ ನೋವು ಯಾರಿಗೂ ಅರ್ಥವಾಗಲಿಲ್ಲವೇ. ಎಸ್.ಎಂ.ಕೃಷ್ಣ, ಕುಮಾರಸ್ವಾಮಿ ಕಾಲದಲ್ಲೂ ಕಿಮ್ಮತ್ತು ಸಿಗಲಿಲ್ಲ, ಆನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ೨ಎ ಮೀಸಲಾತಿ ಕಲ್ಪಿಸಿದ್ದರು. ಮುಂದಿನ ದಿನಗಳಲ್ಲಿ ಬೇಡಿಕೆಗಳು ಈಡೇರುವ ವಿಶ್ವಾಸ ಇದೆ ಎಂದು ಹೇಳಿದರು.
೨ಎ ಮೀಸಲಾತಿ ವಿದ್ಯಾಭ್ಯಾಸಕ್ಕೆ ಸಿಮೀತವಾ ಗಿತ್ತು. ವೀರಪ್ಪ ಮೊಯ್ಲಿ ಅವರು ತೆಗೆದು ಹಾಕಿ ದ್ದರು. ಆ ನಂತರ ಪಿಸಿ ಮೋಹನ್, ಸುಧಾಕರ್ ನೇತೃತ್ವದಲ್ಲಿ ಸಿಎಂ ಬಳಿಗೆ ನಿಯೋಗ ತೆರಳಿದ ಕಾರಣ ೨ಎ ಮೀಸಲಾತಿ ಕಲ್ಪಿಸಿದರು. ಮಂಡಳಿ ಸ್ಥಾಪಿಸಲು, ಎರಡು ಎಕರೆ ಜಾಗ ನೀಡಲು ಭರವಸೆ ನೀಡಿದ್ದರು. ಬಿಜೆಪಿ ಸರಕಾರದ ಮೇಲೆ ನಂಬಿಕೆಯಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಬೇಡಿಕೆಗಳು ಈಡೇರಿಸುವ ನಂಬಿಕೆಯಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಜಾರಿಗೊಳಿಸುವ ಮೊದಲು ಸಾಧಕ ಬಾಧಕಗಳನ್ನು ಚರ್ಚಿಸ ಬೇಕಾಗಿದೆ. ಆನಂತರ ಸದನದಲ್ಲಿ ಚರ್ಚಿಗೆ ಇಟ್ಟು ಅನುಮೋಧನೆ ನೀಡಬೇಕಾಗಿದೆ. ಇದನ್ನು ಮಾಡಿಸುವುದಾಗಿ ಸುಧಾಕರ್ ಅವರು ಭರವಸೆ ನೀಡಿದ್ದು ಬೇಡಿಕೆ ಈಡೇರು ತ್ತದೆ. ಬಹಿಷ್ಕಾರದ ಹೇಳಿಕೆ ನೀಡಿದ್ದವರು ಎಂದೂ ಸಮುದಾಯದ ಪರ ಧ್ವನಿ ಎತ್ತಿದವರಲ್ಲ ಎಂದು ಕಿಡಿಕಾರಿದರು.
ಬಲಿಜ ಸಮುದಾಯದ ತಾಲೂಕು ಗೌವಾಧ್ಯಕ್ಷ ಗೋವಿಂದಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಆಡಳಿತ ನಡೆಸಿದೆ. ಸಮುದಾಯಕ್ಕೆ ಸೌಲಭ್ಯಗಳನ್ನು ಹೋರಾಟ ನಡೆಸಿಲ್ಲ ಎಂದು ದೂರಿದರು. ಕಲ್ಪಿಸುವಲ್ಲಿ ವಿಫಲವಾಗಿದೆ ಆರೋಪಿಸಿದರು.
ಮಾ.೭ರಂದು ಯೋಗಿ ನಾರೇಯಣ ಯತೀಂದ್ರ ಅವರ ಜಯಂತಿಯನ್ನು ಸರಕಾರದಿಂದ ಆಚರಿಸಲು ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಘೋಷಣೆ ಮಾಡಿದರು, ಎಲ್ಲಾರು ಒಗ್ಗಟಿನಿಂದ ಜಯಂತಿ ಆಚರಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಗೋಪಾಲ್, ಲೀಲಾವತಿ, ಮಂಜುನಾಥ್, ಬಾಬು, ನಾಗರಾಜ್, ವೆಂಕಟೇಶ್, ಶ್ರೀಧರ್ ಬಾಬು, ಮುರಳಿ, ಕೃಷ್ಣಮೂರ್ತಿ, ಅನಿಲ್ ಇದ್ದರು.