ರಾಜಕೀಯ ಪ್ರಜ್ಞೆಯತಿಳುವಳಿಕೆ ಹೆಚ್ಚಬೇಕು : ಆವರಗೆರೆ ಚಂದ್ರು ‌

ಹರಿಹರ. ಜೂ 3;  ರಾಜಕೀಯ ಪ್ರಜ್ಞೆ ಸರಿಯಾಗಿ ಅರ್ಥಮಾಡಿಕೊಳ್ಳದೆ ಇರುವ ಕಾರಣ , ಶ್ರಮಿಕರ ಒಗ್ಗಟ್ಟು ಕ್ಷೀಣವಾಗಲು ಪ್ರಮುಖ ಕಾರಣವೆಂದು ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ  ಚಂದ್ರು ಹೇಳಿದರು.ಕಾರ್ಮಿಕರ ದಿನಾಚರಣೆ ಅಂಗವಾಗಿ  ನಗರದ ಹಂಸಾಗರ್ ಕಾಂಪೌಂಡಿನಲ್ಲಿರುವ ಕಮ್ಯುನಿಸ್ಟ್ ಪಕ್ಷದ ಕಾಮ್ರೇಡ್  ಎಂಸಿ ನರಸಿಂಹನ್ ಭವನದ ಆವರಣದಲ್ಲಿ , ಎ.ಐ.ಟಿ.ಯು.ಸಿ. ಹಾಗೂ ಸಿಪಿಐ ತಾಲೂಕು ಮಂಡಳಿಯವರು  ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಒಂದು ಕಾಲದಲ್ಲಿ ತುಂಬಾ ವೈಭವದಿಂದ ಕಾರ್ಮಿಕರು , ಮೇ ದಿನಾಚರಣೆ ಆಚರಣೆ ಮಾಡುತ್ತಿದ್ದರು . ಆದರೆ ಈಗ ಅವು ನೆನಪಿಗೆ ಮಾತ್ರ ಉಳಿದಿವೆ . ಇದನ್ನು ಸರಿಪಡಿಸಿಕೊಂಡು ನಾವು ಮುಂದೆ ಸಾಗಬೇಕಾಗುತ್ತದೆ . ಅಲ್ಲದೆ ನಮ್ಮ ಜೀವನಮಟ್ಟ ಸುಧಾರಿಸಿಕೊಳ್ಳಲು , ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿಸಿಕೊಳ್ಳಲು  ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು .ನಮ್ಮದು ಪ್ರಜಾಪ್ರಭುತ್ವ , ರಾಜ್ಯಪ್ರಭುತ್ವವಲ್ಲ . ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ಯವರನ್ನು ಕರೆಯದೆ , ಅವರನ್ನು ಕೆಡೆಗಣೆಸಿರುವುದು ಕಮ್ಯುನಿಸ್ಟ್ ಪಕ್ಷದಿಂದ ಖಂಡಿಸುತ್ತೇವೆ ಎಂದರು.ಸಭೆಯಲ್ಲಿ ಭಾಗವಹಿಸಿದ್ದ  ಹಿರಿಯ ಕ್ರೀಡಾಪಟು ಹೆಚ್ ನಿಜಗುಣ , ತಾಲೂಕ್ ಪೌರಕಾರ್ಮಿಕ ಸಂಘದ ಅಧ್ಯಕ್ಷ ಸದಾನಂದ ಪೈಲ್ವಾನ್ , ಕನ್ನಡ ಪರ ಸಂಘಟನೆಯ ಎಚ್. ಬಿ. ರುದ್ರಗೌಡ , ಕಾರ್ಮಿಕ ಮುಖಂಡರಾದ ಪರಮೇಶ್ವರಪ್ಪ ಬಣಕಾರ್ , ವೀರಣ್ಣ ಅಂಗಡಿ, ಗಂಗಾಧರ್ ಕೊಟಗಿ , ಕಾರ್ಮಿಕ ದಿನಾಚರಣೆಯ ಶುಭ ಕೋರಿದರು.ಇದೇ ಸಂದರ್ಭದಲ್ಲಿ ಹರಿಹರ ಪಾಲಿ ಫೈಬರ್ ಎಂಪ್ಲಾಯೀಸ್ ಯೂನಿಯನ್ ಗೆ ನಡೆದ ಚುನಾವಣೆಯಲ್ಲಿ ಜಯಶೀಲರಾದ ಎ.ಐ.ಟಿ.ಯು.‌ಸಿ. ಯ ನಾಲ್ಕು ಜನ ಪದಾಧಿಕಾರಿಗಳಿಗೆ , ಆರು ಜನ ಕಾರ್ಯಕಾರಿ ಸಮಿತಿಯವರಿಗೆ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಎಐಟಿಯುಸಿ ತಾಲೂಕ ಅಧ್ಯಕ್ಷರಾದ ಎಚ್ ಕೆ ಕೊಟ್ರಪ್ಪ ವಹಿಸಿಕೊಂಡಿದ್ದರು.ಶಿವಕುಮಾರ್ ಶಿವಾಚಾರ್ಯ, ಬಿ ಹೆಚ್ ಚಂದ್ರಪ್ಪ , ಎನ್.ಪರಮೇಶ್ವರಪ್ಪ , ಎಚ್ ಸಿ ಮೈದೂರು , ಬಿ ಹೆಚ್ ನಾಗರಾಜ್ , ಎನ್‌ಬಿ ಮಂಜುನಾಥ್ ,ಸಿಹೆಚ್ ಚೌಡಪ್ಪ , ಜಾಫರ್ ಸಾಧಿಕ್ , ಆರ್ ಟಿ ವೀರೇಶ್ , ಹೆಚ್. ಹೆಚ್. ಕೃಷ್ಣ , ಜೆ. ರಾಘವೇಂದ್ರ , ಕೃಷ್ಣ , ಆಂಜನೇಯ ,ಮಲ್ಲಾಪುರ , ದೇವರಾಜ್ ನಾಯಕ್ , ಬಿ ಉಮೇಶ್ , ಎಂ.ಜೆ.ವಿನಯ್ , ಜಮಾಲ್ ಸಾಬ್ ರಟ್ಟಿಹಳ್ಳಿ, ಡಿ ಚಂದ್ರಪ್ಪ , ಬಸವನಗೌಡ ಪಾಟೀಲ್ , ಕೆ ಡಿ ಕಿರಣ್ , ವೆಂಕಟೇಶ್ ,ಪ್ರವೀಣ್ ಗಾಟಿನವರ್ , ಅಯೂಬ್ ಅಲಿ ಪಠಾಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.