
(ಸಂಜೆವಾಣಿ ವಾರ್ತೆ)
ಹುಮನಾಬಾದ: ಎ.9:ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ಮೋತಿಲಾಲ್ ಲಂಭಾಣಿ, ನೇತೃತ್ವದಲ್ಲಿ ರಾಜಕೀಯ ಪಕ್ಷದ ಮುಖಂಡರ ಸಭೆ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೋತಿಲಾಲ್ ಅವರು, ರಾಜಕೀಯ ಪಕ್ಷದವರು ಕಡ್ಡಾಯವಾಗಿ ಚುನಾವಣಾ ನೀತಿ ಸಂಹಿತೆ ನಿಯಮಗಳು ತಿಳಿದುಕೊಂಡು ಅನುಸರಿಸಬೇಕು.
ಮೈಕ್ ಪರವಾನಗಿ ಪೆÇಲೀಸ್ ಇಲಾಖೆಯಿಂದ ಪಡೆದುಕೊಳ್ಳಬೇಕು. ನಿಗದಿತ ಸಮಯಕ್ಕೆ ಮಾತ್ರ ಮೈಕ್ ಬಳಕೆ ಮಾಡಬೇಕು, ಪರವಾನಗಿ ರಹಿತ ಯಾವುದೇ ಸಭೆ ಸಮಾರಂಭಗಳು ನಡೆಸುವಂತೆ ಇಲ್ಲ. ಅಲ್ಲದೆ, ಸುಳ್ಳು ದೂರು ನೀಡುವರ ವಿರುದ್ಧ ಕೂಡ ಈ ಬಾರಿ ಕಾನೂನು ಕ್ರಮ ಕೈಗೊಳ್ಳಲು ಚುನಾವಣಾಧಿಕಾರಿಗಳು ಸೂಚನೆ ನೀಡಿದ್ದು, ಯಾವುದೇ ರಾಜಕೀಯ ಪಕ್ಷದವರು ದೂರು ಸಲ್ಲಿಸುವ ಮುನ್ನ
ಖಚಿತ ಮಾಹಿತಿ ಪಡೆದುಕೊಂಡು ದೂರು ನೀಡಬೇಕು. ಅಧಿಕಾರಿಗಳ ಗಮನ ಬೇರೆ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಸುಳ್ಳು ದೂರುಗಳು ನೀಡುತ್ತಿರುವ ಬಗ್ಗೆ ಕಳೆದ ಚುನಾವಣೆಯಲ್ಲಿ ನಡೆದಿದ್ದು, ಈ ಭಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ನಾಮಪತ್ರ ಸಲ್ಲಿಕೆ ಅವಧಿಯ ನಂತರ ನಡೆಯುವ ಲೆಕ್ಕಪತ್ರಗಳು ಮೂರು ದಿನಕ್ಕೆ ಒಂದು ಬಾರಿ ದಾಖಲೆಗಳು ಸಲ್ಲಿಸಬೇಕು ಎಂದ ಅವರು, ನಾಮಪತ್ರ ಸಲ್ಲಿಕೆ, ವಿವಿಧ ಅರ್ಜಿಗಳ ನಮೂನೆಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಬಿಎಸ್ ಪಿ ಅಭ್ಯರ್ಥಿ ಅಂಕುಶ ಗೋಖಲೆ, ಬಿಜೆಪಿ ಮಂಡಲ ಅಧ್ಯಕ್ಷ ಪ್ರಭಾಕರ ನಾಗರಾಳೆ, ಜೆಡಿಎಸ್ ತಾಲೂಕು ಅಧ್ಯಕ್ಷ ಗೌತಮ ಸಾಗರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸ ಮಿಯ್ಯಾ, ರಾಜು ಭಂಡಾರಿ, ಸುಭಾಷ ಕುಂಬಾರ್, ಶಿವಪುತ್ರ ಮಾಳಗೆ, ಎ.ಎಂ ಕುಲಕರ್ಣಿ ಇದ್ದರು.