ರಾಜಕೀಯ ಪಕ್ಷಗಳ ಪ್ರಚಾರ ಬಿರುಸು

ಚಿಕ್ಕಬಳ್ಳಾಪುರ. ಏ ೨೬.ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಅಭ್ಯರ್ಥಿಗಳು ಮತದಾರರ ತರಹ ಕಸರತ್ತು ಮಾಡುತ್ತಿದ್ದು ವಿಜಯಮಾಲೆಯನ್ನು ಧಕ್ಕಿಸಿಕೊಳ್ಳಲು ಅವರವರದೇ ಆದ ರೀತಿಯಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಿಜೆಪಿ ಪಕ್ಷದ ವತಿಯಿಂದ ಡಾ. ಕೆ. ಸುಧಾಕರ್ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಕೆ.ಪಿ. ಬಚ್ಚೇಗೌಡ ಕಾಂಗ್ರೆಸ್ ಪಕ್ಷದಿಂದ ಪ್ರದೀಪ್ ಈಶ್ವರ್ ಅಯ್ಯರ್ ಹಾಗೂ ಆಮ್ ಆದ್ಮಿ ಪಕ್ಷದಿಂದ ಕರುನಾಡ ವಿಭೂಷಣ ಡಾಕ್ಟರ್ ನಂದಿ ಬಾಷಾ ರವರುಗಳು ಪ್ರಮುಖ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದು ಇನ್ನುಳಿದಂತೆ ಒಟ್ಟು ೧೨ ಅಭ್ಯರ್ಥಿಗಳು ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ. ಕೆ. ಸುಧಾಕರ್ ರವರು ನಾಲ್ಕನೇ ಬಾರಿ ವಿಜಯಮಾಲೆ ಹಾಕಿಸಿಕೊಳ್ಳಲು ವಿವಿಧ ರೀತಿಯ ಕಾರ್ಯ ಯೋಜನೆಗಳನ್ನು ರೂಪಿಸಿದ್ದಾರೆ ಕೆ.ಪಿ. ಬಚ್ಚೇಗೌಡ ರವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಎರಡು ಬಾರಿ ಚುನಾವಣೆಯಲ್ಲಿ ಪ್ರಭಾವಗೊಂಡು ಈ ಬಾರಿ ಶತ ಗಥಾಯ ಗೆಲ್ಲಲೇ ಬೇಕೆಂದು ಪ್ರತಿದಿನ ಮತದಾರರ ಮನೆ ತಲುಪುವ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರದೀಪ್ ಈಶ್ವರ್ ಅಯ್ಯರ್ ರವರು ನೀಟ್ ಅಕಾಡೆಮಿ ಅಧ್ಯಕ್ಷರಾಗಿ ವಿಧ್ಯಕ್ಷೇತ್ರದಲ್ಲಿ ಸುಧಾಕರ್ ರವರಿಗೆ ನಾನು ಈ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಎಂದು ಮತದಾರರಲ್ಲಿ ಬಿಂಬಿಸಿಕೊಳ್ಳಲು ಹೊರಟಿದ್ದಾರೆ. . ಇನ್ನುಳಿದಂತೆ ಇತ್ತೀಚೆಗಷ್ಟೇ ಚುನಾವಣಾ ಆಯೋಗದಿಂದ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿರುವ ಆಮ್ ಆದ್ಮಿ ಪಕ್ಷದಿಂದ ಕರುನಾಡ ವಿಭೂಷಣ ಡಾ. ನಂದಿ ಎಂ ಬಾಷಾ ರವರು ಸ್ಪರ್ಧಿಸಿದ್ದು ಹೊಂದಿದ್ದಾರೆ ಇವರು ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಹ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ರಾಜಕೀಯ ಸಾಮಾಜಿಕ ಎರಡು ಕ್ಷೇತ್ರಗಳಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದವರಾಗಿದ್ದಾರೆ.
ಸುಡು ಬಿಸಿಲಿನಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುವುದೇ ಅಭ್ಯರ್ಥಿಗಳಿಗೆ ಹಾಗೂ ಪಾಲ್ಗೊಳ್ಳಲು ಬೆಂಬಲಿಗರಿಗೆ ದುಸಹಸವೆನಿಸುವ ಕಾರ್ಯವಾಗಿದೆ ಈ ಬಾರಿ ಚುನಾವಣೆ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಡಾಕ್ಟರ್ ಕೆ ಸುಧಾಕರ್ ಅವರ ಸ್ಪರ್ಧೆಯಿಂದ ಹೈವೋಲ್ಟೇಜ್ ಕ್ಷೇತ್ರವಾಗಿದ್ದು ರಾಜ್ಯದ ಗಮನಸೆಳೆದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವು ಸಹ ಒಂದಾಗಿರುವುದು ಇತ್ತೀಚಿನ ವಿದ್ಯಮಾನಗಳಿಂದ ಕಂಡುಬಂದಿದೆ.