ರಾಜಕೀಯ ಪಕ್ಷಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಸೂಕ್ತ ಕ್ರಮ

ಲಿಂಗಸುಗೂರ,ಏ.೧೪- ವಿವಿಧ ರಾಜಕೀಯ ಪಕ್ಷಗಳು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಚುನಾವಣಾ ನೀತಿ ನಿಯಮ ಪಾಲನೆ ಅಗತ್ಯವಾಗಿದೆ ಎಂದು ಉಲ್ಲಂಘನೆ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತರು ಹಾಗೂ ಚುನಾವಣಾ ಅಧಿಕಾರಿಯಾದ ಅವಿನಾಶ ಶಿಂದೆ ಸಂಜೀವನ್ ತಿಳಿಸಿದರು.
ಲಿಂಗಸುಗೂರ ಪಟ್ಟಣದ ಸಹಾಯಕ ಆಯುಕ್ತರ ಕಛೇರಿಯಲ್ಲಿ ಏರ್ಪಡಿಸಿದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡುತ್ತಾ, ಚುನಾವಣೆಗೆ ನಾಮಪತ್ರ ತುಂಬುವ ಬಗೆಗೆ ಮಾಹಿತಿಯನ್ನು ಪಡೆಯಬಹುದು ಅಥವಾ ನಿಮ್ಮ ವಕೀಲರ ಮೂಲಕವಾದರು ತುಂಬಬಹುದು ನಾಮಪತ್ರ ಸಲ್ಲಿಸುವಾಗ ಜನಸೇರಿಸುವುದು ಎಲ್ಲಿಂದ ಹೊರಡುವುದು ಸ್ಥಳ ಸಮಯ ಮತ್ತು ದಿನಾಂಕವನ್ನು ನಮೂದಿಸಿ ಪರವಾನಿಗೆಯನ್ನು ಪಡೆದುಕೊಂಡಿರಬೇಕು ನಾಮಪತ್ರ ಸಲ್ಲಿಸುವಾಗ ಸಹಾಯಕ ಆಯುಕ್ತರ ಕಛೇರಿ ಆವರಣದೊಳಗೆ ಮೂರು ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ.
ನಾಮಪತ್ರ ಸಲ್ಲಿಸಲು ಒಳಗಡೆ ೫ಜನರಿಗೆ ಮಾತ್ರ ಅವಕಾಶವಿರುತ್ತದೆ. ಎಪ್ರಿಲ್ ೧೩ರಿಂದ ಎಪ್ರೀಲ್ ೨೦.೨೦೨೩ರವರೆಗೆ ನಾಮಪತ್ರವನ್ನು ಬೆ೧೧ಗಂಟೆಯಿಸಿದ ಮಧ್ಯಾಹ್ನ ೩ಗಂಟೆಯವರೆಗೆ ಸಲ್ಲಿಸಬೇಕು ಚುನಾವಣೆಯಲ್ಲಿ ಬದ್ಧವೈರಿಗಳಂತೆ ವರ್ತಿಸುವುದು ಗಲಾಟೆ ಮಾಡುವುದು ಇತ್ಯಾದಿ ಮಾಡದೆ ಶಾಂತಿಯುತವಾಗಿ ವರ್ತಿಸಬೇಕು ಪ್ರಚಾರ ಮಾಡುವಾಗ ಚುನಾವಣಾ ನಿಯಮದ ಪ್ರಕಾರವೇ ನಡೆಯಬೇಕು ಒಪ್ಪಿಗೆ ಪತ್ರವನ್ನು ಪಡೆಯಬೇಕಾದಲ್ಲಿ ಪಡೆದುಕೊಂಡೆ ಕಾರ್ಯಕ್ರಮ ಆಯೋಜನೆ ಮಾಡಬೇಕು. ಸೇರಿದಂತೆ ವಿವಿಧ ನಿಯಮಗಳ ಬಗೆಗೆ ಮಾಹಿತಿಯನ್ನು ರಾಜಕೀಯ ಮುಖಂಡರ ಗಮನಕ್ಕೆ ತಂದರು.
ನಂತರದಲ್ಲಿ ಭೂಪನಗೌಡ ಕರಡಕಲ್ ಮಾತನಾಡಿ ಕೆಲವೊಮ್ಮೆ ಕಣ್ಣಪ್ಪಿನಿಂದ ಅಚಾತುರ್ಯಗಳು ನಡೆದಿರುತ್ತವೆ. ಅಂತಹ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ ಇದರಿಂದ ಯಾರೋ ಮಾಡಿದೆ ತಪ್ಪಿಗೆ ಆಯಾ ಪಕ್ಷದ ಅಧ್ಯಕ್ಷರು ತೊಂದರೆ ಪಡುವಂತಾಗುತ್ತದೆ ಅದಕ್ಕಾಗಿ ತಪ್ಪು ಯಾರು ಮಾಡಿದಾರೆಂದು ಪರಿಶೀಲಿಸಿ ಕ್ರಮಕೈಗೊಳ್ಳುವುದು ಸೂಕ್ತವೆಂದರು.
ಈ ಸಂದರ್ಭದಲ್ಲಿ ರಾಜಕೀಯ ಮುಖಂಡರುಗಳಾದ ಭೂಪನಗೌಡ ಕರಡಕಲ್, ಮಲ್ಲಿಕಾರ್ಜುನಗೌಡ ಕರಡಕಲ್, ಸಿದ್ದು ಬಡಿಗೇರ, ಅನಿಲ್ ಕುಮಾರ್ ಸೇರಿದಂತೆ ಅಧಿಕಾರಿಗಳಾದ ತಹಸೀಲ್ದಾರ ಜಾಮದಾರ, ಪಿಐ ಸಂಜೀವಕುಮಾರ ಸೇರಿದಂತೆ ಇದ್ದರು.