ರಾಜಕೀಯ ನಾಯಕರ ಇಚ್ಚಾಶಕ್ತಿಯ ಕೊರತೆ ಜನತೆಸಂಕಷ್ಟದಲ್ಲಿ


ಸಂಜೆವಾಣಿ ವಾರ್ತೆ
ಸಂಡೂರು:ಜ;14: ಕೆರೆಗಳಿಗೆ ನೀರು ತುಂಬಿಸುವ ಕೆಲಸ ಇನಾಮ, ಅರಣ್ಯ, ಬಗರಹುಕುಂನ ಭೂಮಿ ಹಂಚುವ ಭರವಸೆಗಳ ತಂತ್ರ ಚುನಾವಣೆ ಸಂದರ್ಭದಲ್ಲಿ ಅಗಬಾರದು, ಪ್ರಾಕೃತಿಕ ಸಂಪತ್ತು ಗಣಿಬಾದಿತ ಪ್ರದೇಶ ಕಲ್ಯಾಣ ಕರ್ನಾಟಕ, ನಂಜುಂಡಪ್ಪ ವರದಿ ಹಿಂದುಳಿದ ತಾಲೂಕಿನ ಹೆಸರಲ್ಲಿ ಹೇರಳ ಅನುದಾನ ಪಡೆಯುವ ಸಂವಿಧಾನಬದ್ಧ ಹಕ್ಕು ಈ ಪ್ರದೇಶದ ಜನರಿಗಿದೆ. ಮೆಟ್ರಿಕಿ, ವಿಠಲಾಪುರ ಗ್ರಾಮ ಪಂಚಾಯಿತಿ ಒಂದರಲ್ಲೇ ಅನುಸೂಚಿತ ಬುಡಕಟ್ಟುಗಳ ಮತ್ತು ಪಾರಂಪರಿಕ ಅರಣ್ಯ ವಾಸಿಗೆ ಅಧಿನಿಯಮ 2006 ಮತ್ತು 2008ರ ಅಡಿಯಲ್ಲಿ346 ಅರ್ಜಿ ಸಲ್ಲಿಕೆಯಾಗಿವೆ. ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ಅಗಿನ ಅರಣ್ಯ ಮಂತ್ರಿ ಅನಂದಸಿಂಗ್ ಹಾಗೂ ಲೋಕಸಭಾ ಸದಸ್ಯ ವೈ.ದೇವೇಂದ್ರಪ್ಪನವರ ನಏತೃತ್ವದಲ್ಲಿ ಸಭೆ ನಡೆಸಿದರು ಇದುವರೆಗೂ ಒಂದು ಅರ್ಜಿಯನ್ನು ಇತ್ಯಾರ್ಥಗೊಳಸಲಿಲ್ಲ ಸಂಡೂರು ತಾಲೂಕಿನಲ್ಲಿ ಪ.ಪಂಗಡದ 1612 ಅರ್ಜಿಗಳು ಸೇರಿದಂತೆ 3750 ಕುಟುಂಬಗಳು ಹಕ್ಕು ಪತ್ರ ಇಲ್ಲದೆ ಸರರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯುವುದು ಸಾಧ್ಯವಾಗುತ್ತಿಲ್ಲ, ಬಗರ್ ಹುಕುಂನ 12000 ಕುಟುಂಬಗಳು ಪರದಾಡುತ್ತಿವೆ. ಬಿಜೆಪಿ ಮತ್ತು ಕಾಂಗ್ರೇಸಿನ ದ್ವೇಶದ ರಾಜಕಾರಣ ರಾಜಕೀಯ ನಾಯಕರ ಇಚ್ಚಾಶಕ್ತಿ ಕೊರತೆ ಸಂಡೂರು ತಾಲೂಕು ಜನತೆ ಸಂಕಷ್ಟದಿಂದ ನರಳುವಂತಾಗಿದೆ ಎಂದು ಸಿ.ಐ.ಟಿ.ಯು. ಜಿಲ್ಲಾ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯನವರು ತಿಳಿಸಿದರು.
ಅವರು ಹೊಸಪೇಟೆ ರಸ್ತೆಯಲ್ಲಿರುವ ಪರಿವೀಕ್ಷಣಾ ಮಂದಿರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ, ಅವರು ಮುಂದುವರೆದು ಬಗರ್ ಹುಕುಂ ಸಾಗುವಳಿ ಭೂ ಮಂಜೂರಾತಿ ಭರವಸೆ ಅಡಿ ಅರ್ಜಿ ಸ್ವೀಕರಿಸಿದೆ ಷರತ್ತು, ನಿಯಮದ ಹೆಸರಲ್ಲಿ ಭೂ ಮಂಜೂರಾತಿ ಸುಮಾರು 3 ದಶಕದಿಂದ ಅರ್ಜಿದಾರರು ಜಾತಕ ಪಕ್ಷಿಯಂತೆ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದರೆ ವಿಲೇವಾರಿಯಾದ ಚೋರನೂರು ಹೋಬಳಿ ವ್ಯಾಪ್ತಿಯ ಸುಮಾರು 597 ಅರ್ಜಿಗಳು ಹಳ್ಳ, ಗುಡ್ಡ, ಗೋಮಾಳ ಇತ್ಯಾದಿ ವಿವಿಧ ವರ್ಗೀಕರಣ ಭೂ ಪ್ರದೇಶದ ಹೆಸರಿನಲ್ಲಿ ಮಂಜೂರಾತಿ ತಿರಸ್ಕರಿಸಿದ್ದು ವಿವರವನ್ನು ಬಹಿರಂಗ ಪಡಿಸುತ್ತಿಲ್ಲವೆಂದು ತಿಳಿಸಿದರು.
ತಾಲೂಕು ಕಾರ್ಯದರ್ಶಿ ಎ. ಸ್ವಾಮಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ತೋರಿಸುವ ಭರವಸೆ ಭೂ ಮಂಜೂರಾತಿ ರೈತರ ಮೂಗಿಗೆ ತುಪ್ಪ ಸವರಿದಂತೆ, ಸಂಡೂರಿನ ಜನತೆ ಜಿ.+2 ವಸತಿ ಯೋಜನೆ ಕುಡಿಯುವ ನೀರು, ಎನ್.ಎಂ.ಡಿ.ಸಿ. ಸ್ಥಳೀಯರಿಗೆ ನೇಮಕಾತಿ, ಗಣಿಕಾರ್ಮಿಕರ ಪುನರ್ವಸತಿ, ನಿವೇಶನ , ಶಿಕ್ಷಣ, ಆರೋಗ್ಯ ಉದ್ಯೋಗ ಜೀವಂತ, ಮೂಲಸೌಕರ್ಯ ಕಲ್ಪಿಸುವ ಒಣ ಭರವಸೆಗಳು ಬಿಸಿಲು ಕುದುರೆಯಾಗಿದೆ ಎಂದು ಆರೋಪಿಸಿದರು. ಸಿ.ಐ.ಟಿ.ಯು. ತಾಲೂಕು ಅಧ್ಯಕ್ಷ ಬಸಯ್ಯ ಸ್ವಾಮಿ ಮಾತನಾಡಿ ಭೂ ಮಂಜೂರಾತಿಗೆ ನಿರ್ಬಂಧ ನಿಯಮ ರಾಳಗುಡ್ಡ, ಗೋಮಾಳ ಕುಮ್ಕಿ ಕಾನ ಬೆಟ್ಟ ಸೊಪ್ಪಿನ ಬೆಟ್ಟ ಇತರೆ ವರ್ಗಗಳ ಜಮೀನು ಮಂಜೂರಾತಿಗೆ ನಿರ್ಬಂಧವಿಧಿಸಿ ಕಿಂದಾಯ ಇಲಾಖೆ ಕಾರ್ಯದರ್ಶಿ 2010 ಮೇ 3 ರಂದು ಹೊರಡಿಸಿದ ತಾತ್ಕಾಲಿಕ ಅದೇಶ 13 ವರ್ಷ ಕಳೆದರು ತೆರವು ಗೊಂಡಿಲ್ಲರೈತರ ಸಾಗುವಳಿ ಜಮೀನು ಕೈ ಬಿಡುತ್ತದೆ. ಸಾಗುವಳಿ ಭೂ ಮಂಜೂರಾತಿ ಕೋರಿದ ಅರ್ಜಿಯ ಅವಧಿ 5 ವರ್ಷ ಮಿರಿದರೆ ನಿಯಮದ ಅನ್ವಯ ವಜಾಗೊಳಿಸುತ್ತದೆ. ಫಾರಂ ನಂ. 50, 53, 57ರ ಅರ್ಜಿ ಅವಧಿ 5 ವರ್ಷಕ್ಕೊಮ್ಮೆ ಮುಕ್ತಾಯವಾಗುತ್ತಿದೆ. ಸರಳ ನಿಯಮಗಳನ್ನು ರೂಪಿಸದೇ ಕಠಿಣ ನಿಯಮವನ್ನು ಹಏರಿ ವಂಚಿಸುತ್ತಿದೆ ಎಂದು ತಿಳಿಸಿದರು.
ಸಂಡೂರು ತಾಲೂಕು ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡ ಎನ್. ಕೃಷ್ಣಪ್ಪ ಮಾತನಾಡಿ ಸಂಡೂರಿನ ಜನಪ್ರತಿನಿಧಿ ಬಗರ್‍ಹುಕುಂ ರೈತರ ಹೆಸರಲ್ಲಿ ನೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಲಿ ವೀರಾವೇಷದ ಭಾಷಣದ ಮೂಲಕ ಜನರನ್ನು ವಂಚಿಸುವುದನ್ನು ಬಿಡಲಿ ಗಣಿ ಬಾಧಿತ ಪ್ರಿಸರ ನಾಶ ಬರಗಾಲ ಪ್ಲೋರೈಡ್ ಸಮಸ್ಯೆಯಿಂದ ಬಳಲುತ್ತಿರುವ ಸಂಡೂರು ತಾಲೂಕಿನ ನ್ಯಾಯಬದ್ಧ ಅನುದಾನ ಮಾನವ ಅಭಿವೃದ್ಧಿಗೆ ಸದ್ಭಳಕೆಯಾಗಬೇಕು ಎಂದು ಭಾರತ ಕಮ್ಯೂನಿಸ್ಟ ಪಕ್ಷ ಮಾಕ್ರ್ಸವಾದಿ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಖಲಂದರ ಭಾಷಾ ಇತರರು ಉಪಸ್ಥಿತರಿದ್ದರು.