
ಸಂಜೆವಾಣಿ ವಾರ್ತೆ
ಸಂಡೂರು: ಮೇ: 15: ವಿಜಯದ ನಂತರ ಪ್ರಥಮವಾಗಿ ಸಂಡೂರಿಗೆ ಅಗಮಿಸಿದ ಶಾಸಕ ಈ.ತುಕರಾಂ ಅವರು ತಮ್ಮನ್ನು ರಾಜಕೀಯಕ್ಕೆ ಪಾದಾರ್ಪಣೆ ಮಾಡಿಸಿದ ಲಾಡ್ ಕುಟುಂಬದ ಹಿರಿಯರು, ವೈದ್ಯರು ಆದ ಡಾ. ಏಕನಾಥ ಲಾಡ್ ಅವರ ಮನೆಗೆ ತೆರಳಿ 4ನೇ ಬಾರಿ ಆಯ್ಕೆಯಾದ ಈ.ತುಕರಾಂ ಅಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ನನಗೆ ರಾಜಕೀಯ ಬದುಕನ್ನು ಕಟ್ಟಿಕೊಟ್ಟು ಬೆನ್ನೆಲುಬಾಗಿ ನಿಂತದ ನನ್ನ ತಂದೆ ಸಮಾನರಾದ ಡಾ. ಏಕನಾಥಲಾಡ್ ಅವರ ಮಾರ್ಗದರ್ಶನದಂತೆ ಇಡೀ ಸಂಡೂರು ಕ್ಷೇತ್ರದ ಸಮಗ್ರ ಅಭಿವೃದ್ದಿಯನ್ನು ಮಾಡುತ್ತಿದ್ದೇನೆ, ಅದು ನಿರಂತರವಾಗಿ ಸಾಗುತ್ತದೆ, ಅಲ್ಲದೆ ಮುಖ್ಯವಾಗಿ ಇಡೀ ಕ್ಷೇತ್ರದ ಜನತೆಯ ಒಲವು, ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸುವ ಮೂಲಕ ಅಶೀರ್ವದಿಸಿದ್ದಾರೆ ಅವರಿಗೆ ಸದಾ ಚಿರಋಣಿಯಾಗಿರುತ್ತೇನೆ, ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸಲು ಎಲ್ಲಾ ರೀತಿಯ ಕಾರ್ಯವನ್ನು ನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಲಾಡ್ ಕುಟುಂಬದ ಕುಡಿಗಳಾದ ವಿಶ್ವಾಸ್ ಲಾಡ್, ಅಕ್ಷಯಲಾಡ್, ಹಾಗೂ ಶ್ರೀಮತಿ ಏಕನಾಥಲಾಡ್ ಅವರು ಈ.ತುಕರಾಂ ಅವರಿಗೆ ಅಶೀರ್ವದಿಸಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವ ನಿಮಗೆ ಪೂರ್ಣ ಸಹಕಾರ ಬೆಂಬಲವಿದೆ ಎನ್ನುವ ಸಂತಸದ ಮಾತುಗಳನ್ನಾಡಿ ಸನ್ಮಾನಿಸಿದರು.