ರಾಜಕೀಯ ಚಾಣಕ್ಯ ಬಿ.ವೈ. ವಿಜಯೇಂದ್ರ ; ರಿತೇಶ ಗುತ್ತೇದಾರ

ಕಲಬುರಗಿ ;ಜ.29: ನಮ್ಮೆಲ್ಲರ ಯುವ ನಾಯಕರು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಜನಮೆಚ್ಚಿದ ಶಾಸಕರು ಹಾಗೂ ಕರ್ನಾಟಕ ರಾಜ್ಯದ ನೂತನವಾಗಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ಅನೇಕ ಬದಲಾವಣೆ ಮಾಡುವ ಮೂಲಕ ಹೊಸ ಅಲೆಯ ಸೃಷ್ಟಿಸುತ್ತಿರುವ ಬಿ. ವೈ. ವಿಜಯೇಂದ್ರ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಅಫಜಲಪುರ ತಾಲ್ಲೂಕಿನ ಬಿಜೆಪಿ ಯುವ ಮುಖಂಡರಾದ ರಿತೇಶ್ ಮಾಲಿಕಯ್ಯಾ ಗುತ್ತೇದಾರ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ ಅತಿ ಹೆಚ್ಚಿನ ಸ್ಥಾನ ಗೆಲ್ಲಿಸಿ ದೆಹಲಿಗೆ ಕಳಿಸುವುದು ಚಾಲೆಂಜಾಗಿ ತೆಗೆದುಕೊಂಡಿದ್ದಾರೆ. ಅದಕ್ಕಾಗಿ, ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಪ್ರವಾಸ ಕೈಗೊಂಡು ಸಾಮಾನ್ಯ ಕಾರ್ಯಕರ್ತರನ್ನು ಭೇಟಿಯಾಗಿ ಹಿರಿಯ ಮುಖಂಡರು ಹಾಗೂ ಯುವ ನಾಯಕರನ್ನು
ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪಕ್ಷ ಬಲಪಡಿಸುತ್ತಿರುವ ರಾಜ್ಯಾದ್ಯಕ್ಷ ವಿಜಯೇಂದ್ರ ಅವರ ಕಾರ್ಯ ಶ್ಲಾಘನೀಯ ಎಂದು ಗುತ್ತೇದಾರ ಹೇಳಿದರು.

ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂರನೇ (ಹ್ಯಾಟ್ರಿಕ್) ಗೆಲುವು ಬಾರಿಸಿ ದೇಶದ ಚುಕ್ಕಾಣಿ ಹಿಡಿಯಬೇಕೆಂದೇ ನಮ್ಮೆಲ್ಲರ ಅಭಿಲಾಷೆಯಾಗಿದೆ. ಆದ್ದರಿಂದ, ನಮ್ಮ ರಾಜ್ಯಾದ್ಯಕ್ಷರಾದ ಬಿ. ವೈ. ವಿಜಯೇಂದ್ರ ಅವರ ಜೊತೆಯಲ್ಲಿ ನಮ್ಮಂಥ ಲಕ್ಷಾಂತರ ಯುವ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ರಾಜ್ಯದಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸುವ ಕೆಲಸ ಮಾಡುತ್ತೇವೆ ಎಂದು ಗುತ್ತೇದಾರ ತಿಳಿಸಿದರು.
ರಾಜ್ಯದಲ್ಲಿ ದಿನೇ, ದಿನೇ ಬಿಜೆಪಿ ಪಕ್ಷ ಸದೃಢವಾಗಿ ಬೆಳಯುತ್ತಿರುವ ಬೆಳವಣಿಗೆ ತುಂಬಾ ಹೆಮ್ಮೆಯ ವಿಷಯ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿ (ಮನೆಗೆ) ಪಕ್ಷಕ್ಕೆ ಕರೆತರುವ ಮೂಲಕ ವಿಜಯೇಂದ್ರ ಅವರು ತಮ್ಮ ಸಾಮಥ್ರ್ಯ ಏನೆಂಬುದನ್ನು ಇಡೀ ರಾಜ್ಯಕ್ಕೆ ಸಾಬೀತು ಪಡಿಸಿದರು. ಜಗದೀಶ್ ಶೆಟ್ಟರ್ ಪಕ್ಷ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಹಾಗೂ ರಾಜ್ಯಾದ್ಯಕ್ಷರಿಗೆ ಒಂದು ರೀತಿಯಲ್ಲಿ ಆನೆ ಬಲ ಬಂದಂತಾಗಿದೆ ಎಂದು ಯುವ ಮುಖಂಡ ರಿತೇಶ್ ಗುತ್ತೇದಾರ ಅವರು ಹರ್ಷ ವ್ಯಕ್ತಪಡಿಸಿದರು.

ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಹಾಗೂ ಇನ್ನಿತರ ಪಕ್ಚಕ್ಕೆ ಸೇರ್ಪಡೆಯಾದ ಹಲವಾರು ಮುಖಂಡರು ರಾಜ್ಯಾದ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವುದರಲ್ಲಿ ಸಂಶವಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಯುವಕರನ್ನು ಗುರುತಿಸಿ ಜವಾಬ್ದಾರಿ ಸ್ಥಾನ ನೀಡುವ ಮೂಲಕ ರಾಜ್ಯದ ಬಿಜೆಪಿ ಪಕ್ಷದಲ್ಲಿ ಹೊಸ ರೀತಿಯ ಅಲೆ ಪ್ರಾಂರಂಭ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಈ ಭಾಗದಲ್ಲಿರುವ ಬಿಜೆಪಿ ಹಿರಿಯ ನಾಯಕರು ಹಾಗೂ ಪಕ್ಷದ ಯುವ ಮುಖಂಡರು ಒಟ್ಟಾಗಿ ಸೇರಿ ಪಕ್ಷ ಸಂಘಟನೆ ಮಾಡುವುದರ ಮೂಲಕ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕೈ ಬಲ ಪಡಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಬಿಜೆಪಿ ಯುವ ನಾಯಕರಾದ ರಿತೇಶ ಮಾಲಿಕಯ್ಯಾ ಗುತ್ತೇದಾರ ಅವರು ತಿಳಿಸಿದರು.