ರಾಜಕೀಯ ಕೀಲಿ ಎಲ್ಲದಕ್ಕೂ ಪರಿಹಾರ:ಸಿ.ಕೆ. ತೊರವಿ

ವಿಜಯಪುರ,ಫೆ.13:ಈ ದೇಶದ ಮೊದಲ ಚಳವಳಿಗಾರ ಜ್ಯೋತಿಬಾಪುಲೆ ಅವರಿಗೂ ಅಸ್ಪೃಶ್ಯತೆಯ ಅಪಮಾನ ಅಂಟಿತ್ತು. ಇದಕ್ಕೆಲ್ಲ ಶಿಕ್ಷಣವೇ ಪರಿಹಾರ ಎಂದು ಪ್ರಪ್ರಥಮ ಬಾರಿಗೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ದೇಶದಲ್ಲಿ ತೆಗೆದ ಮಹಾತ್ಮ ಜ್ಯೋತಿಬಾ ಫುಲೆ ಮಹನೀಯರು ಎಂದು ಬಿಎಸ್ ಪಿ ರಾಜ್ಯ ವಕ್ತಾರ ಸಿ.ಕೆ. ತೂರವಿ ಅವರು ಹೇಳಿದರು.

ವಿಜಯಪುರ ನಗರದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸಮೀಪದ ಐಬಿಯಲ್ಲಿ ಇತ್ತೀಚೆಗೆ ದಲಿತ ಸಮರ ಸೇನೆ-ಕರ್ನಾಟಕ ಜಿಲ್ಲಾ ಶಾಖೆ ವಿಜಯಪುರ ವತಿಯಿಂದ ಹಮ್ಮಿಕೊಂಡಿದ್ದ ದಲಿತ ಚಳವಳಿಯ ಐವತ್ತು ವರ್ಷಗಳು ಹಾಗೂ ಜಿಲ್ಲಾ ಸಂಚಾಲನ ಸಭೆಯ ಉದ್ದೇಶಿಸಿ ಮಾತನಾಡಿದರು.

1974ರಲ್ಲಿ ಪೆÇ್ರ. ಬಿ ಕೃಷ್ಣಪ್ಪ, ದೇವನೂರು ಮಹಾದೇವ, ಡಾ. ಸಿದ್ದಲಿಂಗಯ್ಯ, ಮಂಗಳೂರು ವಿಜಯ ಇನ್ನು ಮುಂತಾದ ಮಹನೀಯರಿಂದ ಸಂಘಟನೆಗೊಂಡ ಡಿಎಸ್‍ಎಸ್ ಹಕ್ಕು ವಂಚಿತರಿಗೆ, ನ್ಯಾಯ ವಂಚಿತರಿಗೆ, ಅಸಹಾಯಕರಿಗೆ, ಭೂ ರಹಿತರಿಗೆ ರಕ್ಷಾ ಕವಚವಾಗಿ ಕೆಲಸ ಮಾಡಿದ್ದು ಮಾನನೀಯ ಎಂದು ಹೇಳಿದರು.
ಸಾಹಿತಿ ಪತ್ರಕರ್ತ ಅನಿಲ್ ಹೊಸಮನಿ ಮಾತನಾಡಿ, ಬೂಸಾ ಚಳವಳಿ ಡಿಎಸ್‍ಎಸ್ ಹುಟ್ಟಿಗೆ ಕಾರಣ, ಅಂದಿನ ಪೌರಾಡಳಿತ ಸಚಿವರಾಗಿದ್ದ ಬಿ. ಬಸಲಿಂಗಪ್ಪನವರು ಕನ್ನಡ ಸಾಹಿತ್ಯ ಬೂಸಾ ಎಂದು ಹೇಳಿದ್ದಕ್ಕೆ ಅಂದಿನ ಸಮಾನತ ವಿರೋಧಿಗಳು ಅವರ ಹೇಳಿಕೆಯನ್ನು ಖಂಡಿಸಿ ಅಶಾಂತಿ ಸೃಷ್ಟಿಸಿದರು.. ಅದರ ಪ್ರತಿರೋಧವೆ ಡಿಎಸ್ ಎಸ್ ಹಳ್ಳಿಹಳ್ಳಿಗೂ ಕ್ರಾಂತಿಕಾರಿ ಕೆಲಸಗಳನ್ನು ಸೃಷ್ಟಿಸಿದ್ದು ಇತಿಹಾಸವೆಂದರು. ಅಂದಿನ ಹಿರಿಯ ತಲೆಮಾರಿನ ಡಿಎಸ್ ಎಸ್ ಕಾರ್ಯಕರ್ತರು ಸೈನಿಕರಂತೇ ಭೂಮಿ ಮತ್ತು ಸ್ವಾಭಿಮಾನಕ್ಕಾಗಿ ಕಂಕಣಭದ್ಧರಾಗಿದ್ದರು ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಉತ್ತಮ್, ಆನಂದ್ ರವರು ಜಾಗೃತರಾಗಿ, ಚಿಂತಿಸಿ, ಒಂದಾಗಿ ಎಂದ ಬಾಬಾ ಸಾಹೇಬರ ನುಡಿಗಳೆ ನಮಗೆ ದಾರಿದೀಪಗಳು. ನ್ಯಾಯ ಪಡೆಯಬೇಕಾದ ನಾವುಗಳು ನ್ಯಾಯ ನೀಡುವಂತಾಗಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸೂಚಿಸಿದ ಶಕ್ತಿ ಶಿಕ್ಷಣವೇ ಕಾರಣ ಎಂದರು.

ಸಮಿತಿಯ ಜಿಲ್ಲಾಧ್ಯಕ್ಷ ಗೌಡಪ್ಪ ಬಸಪ್ಪ, ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯಗಳಾದ ಸ್ಲಂ ನಿವಾಸಿಗಳಿಗೆ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸುವುದು, ವಿಜಯಪುರ ಜಿಲ್ಲೆಯಲ್ಲಿರುವ 139 ಸ್ಲಂ ಗಳಿಗೆ ಅಗತ್ಯ ಸೂರುಗಳನ್ನು ಕಲ್ಪಿಸಲು ಕ್ರಿಯಾ ಯೋಜನೆ ಕೈಗೊಳ್ಳುವುದು, ಸ್ಲಂ ಜನರಿಗೆ ವಂತಿಕೆ ರಹಿತ ಮನೆ ನಿರ್ಮಾಣಗೊಳಿಸುವುದು, ಖಾಸಗಿ ಮಾಲಿಕತ್ವದ ಕೊಳಚೆ ಪ್ರದೇಶಗಳಿಗೂ ಹಕ್ಕು ಪತ್ರ ಒದಗಿಸುವುದು, ಪ್ರತಿ ತಾಲೂಕಿನಲ್ಲೂ 50 ಎಕರೆ ಸ್ಲಂ ನಿವಾಸಿಗಳಾಗಿ ಜಾಗೆ ಕಾಯ್ದಿರಿಸುವುದು, ಸ್ಲಂ ನಲ್ಲೇ ಕಡ್ಡಾಯವಾಗಿ ಪಡಿತರ ಚೀಟಿ ವಿತರಣಾ ಹಾಗೂ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಸಭೆಯಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಈ ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕು, ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಅಮೃತ ಅವರು ಸಮಿತಿಯ ಕಾರ್ಯ ಸಾಧನೆಗಳು ಹಾಗೂ ಸುಸಂಘಟನಾತ್ಮಕ ಹೋರಾಟಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಸಭೆಯಲ್ಲಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಮುಖಂಡರುಗಳಾದ ಯಾಸಿನ್, ಸಂಗಮೇಶ್, ಸಾಗರ್, ಪರಶುರಾಮ್, ಉದಯ್, ಕಿರಣ ಮುಂತಾದವರು ಹಾಜರಿದ್ದರು.