ರಾಜಕೀಯದಲ್ಲಿ ಸ್ತ್ರೀಯರ ಪ್ರಮಾಣ ಹೆಚ್ಚಾದರೆ, ಹಿಂಸಾಚಾರ ಕುಗ್ಗುವುದು

ಹೊಸಪೇಟೆ ಮಾ24: ರಾಜಕೀಯದಲ್ಲಿ ಸ್ತ್ರೀಯರ ಪ್ರಮಾಣ ಹೆಚ್ಚಾದಷ್ಟು ರಾಜಕೀಯ ಹಿಂಸಾಚಾರಗಳ ಪ್ರಮಾಣ ಕಡಿಮೆಯಾಗುವುದರಲ್ಲಿ ಯಾವುದೆ ಅನುಮಾನಗಳಿಲ್ಲಾ ಎಂದು ಕನ್ನಡದ ಖ್ಯಾತ ವಿಮರ್ಶಕಿ ಡಾ. ಸುಮಿತ್ರಬಾಯಿ ಬಿ.ಎನ್ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಲೋಹಿಯಾ ಅವರ ಜನ್ಮದಿನದ ಪ್ರಯುಕ್ತ ಆನ್‍ಲೈನ್ ಮೂಲಕ ಹಮ್ಮಿಕೊಂಡಿದ್ದ ಲೋಹಿಯಾ ಮತ್ತು ಮಹಿಳೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ತ್ರೀಯರು ಸಾರ್ವಜನಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೇ ಸ್ತ್ರೀಯರ ಶಕ್ತಿ-ಸಾಮಥ್ರ್ಯ ನಾಶವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಲೋಹಿಯಾ ಮಹಿಳಾವಾದಿ ಗುಂಪುಗಳು ಸಂಯೋಜನೆಗೊಳ್ಳುವಲ್ಲಿ ವಿಫಲವಾಗಿವೆ ಎಂದು ವಿಷಾಧಿಸಿದರು.ಲಿಂಗ ತಾರತಮ್ಯ ಜಾತಿ, ವರ್ಗ, ಮತ್ತು ಸಂಸ್ಕøತಿ ಎಲ್ಲಾ ಅಂಶಗಳನ್ನು ದಾಟಿ ಸರ್ವ ವ್ಯಾಪಿಯಾಗಿವೆ ಮತ್ತು ವಿಭಿನ್ನ ಆಯಾಮಗಳಲ್ಲಿ ಮಹಿಳೆಯರನ್ನು ನಿಯಂತ್ರಿಸುತ್ತಿವೆ ಎಂದರು.
ಮಹಿಳೆಯರ ಆದ್ಯತೆ ಪ್ರಮಾಣಕ್ಕನುಗುಣವಾಗಿ ಮೀಸಲಾತಿ ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಮುಖ್ಯ ಎಂಬ ಅಂಶವನ್ನು ಪ್ರತಿಪಾದಿಸಿದ್ದರು. ಲೋಹಿಯಾ ಅವರು ಅಂತರ್ಜಾತಿ ಮತ್ತು ಪ್ರೇಮ ವಿವಾಹ ಮತ್ತು ಸರಳ ವಿವಾಹಗಳಿಗೆ ಒತ್ತು ನೀಡಿದ್ದರು ಎಂದರು.
ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಮಾತನಾಡಿ, ಲೋಹಿಯಾ ಅವರ ವಿಚಾರಗಳು ಚಿಂತನೆಗಷ್ಟೇ ಮೀಸಲಾಗಿರಲಿಲ್ಲ. ಅವುಗಳನ್ನು ಕಾರ್ಯರೂಪಕ್ಕೂ ತಂದಿದ್ದರು. ಮಹಿಳೆಯರ ಸಮಸ್ಯೆಗಳು ಕಾಲ-ಕಾಲಕ್ಕೆ ಬದಲಾಗುತ್ತಿವೆಯೇ ಹೊರತು ನಿರ್ಮೂಲನಗೊಳ್ಳುತ್ತಿಲ್ಲ. ಆಧುನಿಕ ಸಮಾಜದಲ್ಲಿ ಮಹಿಳೆಯರ ಸಮಸ್ಯೆಗಳು ಹೊಸ ಆಯಾಮವನ್ನೇ ಪಡೆದುಕೊಂಡಿವೆ ಎಂದರು.
ಲೋಹಿಯಾ ಅಧ್ಯಯನ ಪೀಠದ ಸಂಚಾಲಕ ಡಾ.ಎರಿಸ್ವಾಮಿ ಪ್ರ್ತಾವಿಕವಾಗಿ ಮಾತನಾಡಿ, ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಮೋಹನ್ ಕುಂಟಾರ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಲೋಕೇಶ್ ಎಸ್.ಕೆ. ಉಪಸ್ಥಿತರಿದ್ದರು. ದರ್ಪಣ ಕೇಂದ್ರದ ಉಪ ನಿರ್ದೇಶಕ ವಿಜಯೇಂದ್ರ ತಾಂತ್ರಿಕ ಸಹಕಾರ ನೀಡಿದರು.