ರಾಜಕೀಯದಲ್ಲಿ ವರ್ತೂರ್ ಪ್ರಕಾಶ್ ಎರಡನೇ ವರಸೆ

ಕೋಲಾರ,ಜ.೪:ವಿಧಾನಸಭಾ ಚುನಾವಣೆ ನಂತರ ಸದ್ದಿಲ್ಲದೆ ಇದ್ದ ಮಾಜಿ ಸಚಿವ ವರ್ತೂರ್? ಪ್ರಕಾಶ್? ಇತ್ತೀಚೆಗೆ ತಮ್ಮ ಅಪಹರಣ ಪ್ರಕರಣದ ಮೂಲಕವೇ ಮತ್ತೆ ಸುದ್ದಿಯಾಗಿದ್ರು, ಸದ್ಯ ಅದನ್ನೇ ಬಂಡವಾಳ ಮಾಡಿಕೊಂಡ ವರ್ತೂರ್? ಪ್ರಕಾಶ್? ಸದ್ಯ ಗ್ರಾಮ ಪಂಚಾಯ್ತಿ ಚುನಾವಣೆ ಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡು ತಮ್ಮ ಕಾರ್ಯಕರ್ತರಿಗೆ ಇಂದು ಬರ್ಜರಿ ಬಿರಿಯಾನಿ ಪಾರ್ಟಿ ಕೊಟ್ಟರು.
ಕೋಲಾರದ ಹೊರವಲಯದಲ್ಲಿರುವ ಕೊಗಿಲ್ಲಹಳ್ಳಿ ಯ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರ ನಿವಾಸ ಬಳಿ ಇವತ್ತು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ತಮ್ಮ ಬೆಂಬಲಿಗರಿಗೆ ಅಭಿನಂದನೆ ಮತ್ತು ಭರ್ಜರಿ ಬಾಡೂಟ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಮಾಜಿ ಸಚಿವ ವರ್ತೂರ್ ಪ್ರಕಾಶ್ ಸದ್ಯ ಒಂದಿಲ್ಲೊಂದು ಒಂದು ವಿವಾದದಲ್ಲಿ ಸಿಲುಕುವಂತಹ ವ್ಯಕ್ತಿ, ಇತ್ತೀಚಿಗೆ ವರ್ತೂರ್ ಪ್ರಕಾಶ ಅವರ ಅಪಹರಣದ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸುದ್ದು ಮಾಡಿದ ವಿಷಯ, ಅಪರಹರಣ ಪ್ರಕರಣ ಸುಖ್ಯಾಂತವಾಗುತ್ತಿದ್ದಂತೆ ಗ್ರಾಮ ಪಂಚಾಯತ್ ನಲ್ಲಿ ತಮ್ಮ ಬೆಂಬಲಿಗ ರನ್ನು ಭರ್ಜರಿಯಾಗಿ ಗೆಲ್ಲಿಸಿಕೊಂಡಿರುವ ವರ್ತೂರ್ ಪ್ರಕಾಶ್, ಆ ಗೆಲುವಿನ ಸಂಭ್ರಮಿಸಲು ತಮ್ಮ ಕಾರ್ಯಕರ್ತರಿಗೆ ಭರ್ಜರಿ ಬರಿಯಾನಿ ಬಾಡೂಟ ಹಾಕಿಸಿದರು.
ಈವೇಳೆ ಮಾತನಾಡಿದ ವರ್ತೂರ್ ಪ್ರಕಾಶ್ ಕೋಲಾರ ವಿಧಾನಸಭೆ ವ್ಯಾಪ್ತಿಯಲ್ಲಿ ೧೯ ಗ್ರಾಮ ಪಂಚಾಯತ್ ನಲ್ಲಿ ೧೫ ಗ್ರಾಮ ಪಂಚಾಯ್ತಿಗಳನ್ನು ತಮ್ಮ ವಶಕ್ಕೆ ಬಂದಿದೆ, ಎಲ್ಲಾ ಪಂಚಾಯತ್ ಗಳಲ್ಲಿ ನಮ್ಮ ಮತಗಳು ಸಂಖ್ಯೆ ಹೆಚ್ಚಾಗಿದ್ದು, ಮುಂದೆ ಇಂದು ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು ಅಲ್ಲದೆ ಈ ಚುನಾವಣೆಯಲ್ಲಿ ನಮಗೆ ಆರ್ಥಿಕ ನೆರವು ನೀಡಿದ ಕಾಂಗ್ರೇಸ್? ಪಕ್ಷ ಹಾಗೂ ಕೆಹೆಚ್? ಮುನಿಯಪ್ಪರಿಗೆ ಧನ್ಯವಾದ ಹೇಳಿದ ಅವರು ತಾವು ಕಾಂಗ್ರೇಸ್? ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು.ಉಳಿಗಾಲವಿಲ್ಲ ಎಂದರು.
ಇನ್ನು ಕೋಲಾರದ ೧೯ ಗ್ರಾಮ ಪಂಚಾಯತಿಗಳಲ್ಲಿ ಗೆಲುವು ಸಾಧಿಸಿರುವ ಸುಮಾರು ೨೦೨ ತಮ್ಮ ಬೆಂಬಲಿತ ಸದಸ್ಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಸುಮಾರು ೨೦೦೦ ಮಂದಿಗೆ ೫೦೦ ಕೆಜಿ ಚಿಕನ್ ಮತ್ತು ೫೦೦ ಕೆಜಿ ಮಟನ್ ಬಿರಿಯಾನಿ ಮಾಡಿಸಲಾಗಿತ್ತು. ಇನ್ನು ಕಾರ್ಯಕ್ರಮದಲ್ಲಿ ಬಿರಿಯಾನಿ ಊಟ ಮಾಡಲು ಕಾರ್ಯಕರ್ತರು ಮುಗ್ಗಿಬಿದ್ದರು.ಇನ್ನು ವಿಧಾನಸಭೆ ಚುನಾವಣೆ ಸೋತ ನಂತರ ಮೂಲೆ ಗುಂಪಾಗಿದ ವರ್ತೂರ್ ಪ್ರಕಾಶ್, ಅಪಹರಣ ಪ್ರಕರಣ ನಂತರ ಮತ್ತೆ ಮುನ್ನಲೆಗೆ ಬಂದು ಗ್ರಾಮ ಪಂಚಾಯತ್ ನಲ್ಲಿ ಒಳ್ಳೆಯ ಫಲಿತಾಂಶ ಕಂಡಿದ್ದಾರೆ. ಹಾಗಾಗಿ ಎಂದಿನಂತೆ ತಮ್ಮದೇ ಸ್ಟೈಲ್?ನಲ್ಲಿ ಕಾರ್ಯಕರ್ತರಿಗೆ ಬಿರಿಯಾನಿ ಪಾರ್ಟಿ ಕೊಡುವ ಮೂಲಕ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣದ ಮೂಲಕವೇ ಒಳ್ಳೆಯ ಕಮ್ ಬ್ಯಾಕ್ ಮಾಡಿದ್ದಾರೆ.
ಒಟ್ಟಾರೆ ಮಾಜಿ ಸಚಿವ ವರ್ತೂರ್ ಪ್ರಕಾಶ್‌ಗೆ ತಮ್ಮ ಅಪಹರಣ ಪ್ರಕರಣವೇ ಒಳ್ಳೆಯ ಅದೃಷ್ಟವಾಗಿ ಪರಿಣಮಿಸಿದ್ದು ರಾಜಕೀಯದಿಂದ ದೂರ ಉಳಿದಿದ್ದ ವರ್ತೂರ್? ಪ್ರಕಾಶ್? ಈಗ ಮತ್ತೆ ರಾಜಕೀಯದಲ್ಲಿ ತಮ್ಮ ಎರಡನೇ ವರಸೆ ಶುರುಮಾಡಿದ್ದಾರೆ. ಇದು ಮುಂದಿನ ಚುನಾವಣೆ ಹೊತ್ತಿಗೆ ಏನೆಲ್ಲಾ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ..