ರಾಜಕೀಯಕ್ಕೆ ದಾಳವಾದ ಅಣ್ಣತಮ್ಮಂದಿರ ಜಮೀನು ಹಂಚಿಕೆ

ಹೊಸಕೋಟೆ, ಆ. ೩೦-ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ರಾಜಕೀಯ ವ್ಯಕ್ತಿಗಳು ಮಧ್ಯಪ್ರವೇಶಿಸಿ ಜಮೀನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಗೊಣಕನಹಳ್ಳಿ ಮೆಹಬೂಬ್ ಸಾಬ್ ಆರೋಪ ಮಾಡಿದ್ಧಾರೆ.
ಗೊಣಕನಹಳ್ಳಿ ಗ್ರಾಮದ ಮೆಹಬೂಬ್ ಪಾಷ ಬೆಂಗಳೂರಿನ ನಾಗವಾರದಲ್ಲಿ ವಾಸವಿದ್ದು, ಕರೋನಾ ಲಾಕ್ ಡೌನ್ ಹಿನ್ನಲೆ, ಗ್ರಾಮದಲ್ಲಿನ ತಮ್ಮ ಪಾಲಿನ ಜಮೀನಿನಲ್ಲಿ ವ್ಯವಸಾಯ ಮಾಡಿಸಲು ಗ್ರಾಮಕ್ಕೆ ಬಂದಾಗ, ಅಣ್ಣ ಹಸೇನ್ ಸಾಬ್ ಜಮೀನು ಒತ್ತುವರಿ ಮಾಡಿಕೊಂಡು ಟಮೊಟೊ ಬೆಳೆ ಬೆಳೆದಿದ್ದರು. ಈ ವೇಳೆ ಅವರ ಪಾಲಿನ ಜಮೀನಿನಲ್ಲಿ ಬೆಳೆದಿದ್ದ ಟೊಮೊಟ ಬೆಳೆಗೆ ಕಟ್ಟಿದ್ದ ಕಡ್ಡಿಗಳನ್ನು ಕಿತ್ತುಹಾಕಲಾಗಿತ್ತೆ, ವಿನಃ ಬೆಳೇಯನ್ನು ನಾಶ ಮಾಡಿರಲಿಲ್ಲ.
ನನ್ನ ಅಣ್ಣನಿಗೆ ತಲೆಕೆಡಿಸಿ ಜಮೀನು ಕಬಳಿಸಲು ಹುನ್ನಾರ ನಡೆಸಿರುವ ರಾಜಕೀಯ ಮುಖಂಢರಾದ ಜಯಣ್ಣ, ಸಮಿವುಲ್ಲಾ, ಮುನಿಯಪ್ಪ ಎಂಬುವವರು ನನ್ನ ಭಾಗದ ಜಮೀನನ್ನು ನನಗೆ ಕೊಡಿಸುವುದನ್ನು ಬಿಟ್ಟು, ಬೆಳೆ ನಾಶಮಾಡಿರುವುದಾಗಿ ಹೊಸಕೋಟೆ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ್ದಲ್ಲದೆ, ಠಾಣೆಯಲ್ಲಿ ಜಮೀನು ಹಂಚಿಕೆ ವಿಚಾರ ಮಾಡುವುದಾಗಿ ಕರೆಯಿಸಿ, ಪೊಲೀಸರಿಂದ ಹಲ್ಲೆ ಮಾಡಿಸಿ, ಠಾಣೆಯಲ್ಲಿ ಕೂಡಿ ಹಾಕಿ, ಮಧ್ಯರಾತ್ರಿ ಠಾಣೆಯಿಂದ ಮನೆಗೆ ಕಳುಹಿಸುವಂತೆ ಮಾಡಿದ್ದಾರೆ. ನನ್ನ ಜಮೀನನ್ನು ನನಗೆ ಕೊಡಿಸದೆ ನನಗೆ ನನ್ನ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ಧಾರೆ.
ದಾಖಲೆ ಪರಿಶೀಲನೆ ನಡೆಸಿ ನ್ಯಾಯ ಒದಗಿಸಲು ಬಂದ ಪೊಲೀಸರಿಗೂ ಸೊಪ್ಪು ಹಾಕದೆ, ದೌರ್ಜನ್ಯ ದಬ್ಬಾಳಿಕೆ ಮಾಡುವ ಕೆಲಸ ಮಾಡುತ್ತಿದ್ಧಾರೆ. ನಮ್ಮ ಪಿತ್ರಾರ್ಜಿ ಆಸ್ತಿ ಪಡೆಯಲು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.