ರಾಜಕೀಯಕ್ಕಾಗಿ ಜಾತಿ ವಿಷ ಬೀಜ ಬಿತ್ತುವುದುಸರಿಯಲ್ಲ

ಮಂಗಳೂರು, ಮಾ.೨೨- ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಜನತಾದಳ ಮಹಿಳಾ ಘಟಕದ ವತಿಯಿಂದ ಮಹಿಳಾ ಸಮಾವೇಶ ಮಹಿಳಾ ದಿನಾಚರಣೆ ಮತ್ತು ಸಾಮರಸ್ಯ ಸಂಗಮ ಕಾರ್ಯಕ್ರಮ ಮಂಗಳೂರಿನ ಕದ್ರಿಪಾರ್ಕ್ ಬಳಿಯ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಮಾಜಿ ಸಚಿವೆ, ಜೆಡಿಎಸ್ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಲೀಲಾವತಿ ಆರ್ ಪ್ರಸಾದ್ ದೀಪಬೆಳಗಿ ಚಾಲನೆ ನೀಡಿದರು. ಬಳಿಕ ಗ್ರಾಮಾಪಂಚಯತ್ ಚುನಾವಣೆಯಲ್ಲಿ ಗೆದ್ದ ಜೆಡಿಎಸ್ ಅಭ್ಯರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ಕು ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.
ಬಳಿಕ ಮಾತನಾಡಿದ ಮಾಜಿ ಸಚಿವೆ, ಜೆಡಿಎಸ್ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಲೀಲಾವತಿ ಆರ್ ಪ್ರಸಾದ್ ಜೆಡಿಎಸ್ ರಾಷ್ಟ್ರೀಯ ಪಕ್ಷ ಅಲ್ಲ ಇದೊಂದು ಸ್ಥಳೀಯ ಪಕ್ಷ ಆಗಿದೆ ಆದ್ರೂ ನಮ್ಮ ಪಕ್ಷದ ತತ್ವ ಸಿದ್ದಾಂತವನ್ನು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಬಿಜೆಪಿ ಅನುಸರಿಸುತ್ತಾ ಬಂದಿದೆ.
ಇದಲ್ಲದೆ ರಾಜ್ಯ ಮತ್ತು ಕೇಂದ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಾಂಗ್ರೆಸ್ಗ್ ಬೇಕಾಗುವ ಪಕ್ಷ ಇದ್ದರೆ ಅದು ಜ್ಯಾತ್ಯಾತೀತ ಜನತಾ ದಳ ಯಾವುದೇ ಪಕ್ಷದವರಿಗೆ ಕಷ್ಟ ಕಾಲದಲ್ಲಿ ಬೇಕುವ ಒಂದು ಪಕ್ಷ ನಮ್ಮದಾಗಿದೆ.
ಜಿಲ್ಲೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸಮಾಜ ಸೇವೆಯ ಮೂಲಕ ಸಾಮರಸ್ಯ ಮತ್ತು ಸೌಹಾರ್ದ ಜೀವನದ ಹಾದಿಯಲ್ಲಿ ಹೋಗುತ್ತಿದ್ದಾರೆ ಆದ್ರೆ ರಾಜಕೀಯಕ್ಕಾಗಿ ಕೆಲ ಪಕ್ಷಗಳು ಜನ್ರ ಮಧ್ಯೆ ಪರಸ್ಪರ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ. ಇದ್ರ ವಿರುದ್ಧ ಜ್ಯಾತ್ಯಾತೀತ ಜನತಾ ದಳ ನಿಲ್ಲಲಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಜ್ಯಾತ್ಯಾತೀತ ಜನತಾ ದಳದ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞ, ಬೆಂಗಳೂರು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೂತ್ ಮನೋರಮ, ಜೆಡಿಎಸ್ ಮುಖಂಡರಾದ ಎಂ.ಬಿ ಸದಾಶಿವ, ವಸಂತ ಪೂಜಾರಿ, ಸುನೀಲ್ ನೊರೊನ್ಹಾ, ಪ್ರವೀಣ್ ಚಂದ್ರ ಜೈನ್, ಅಕ್ಷಿತ್ ಸುವರ್ಣ, ರಾಜಶ್ರೀ ಹೆಗ್ಡೆ, ರತ್ನಾಕರ್ ಸುವರ್ಣ,ಪುಷ್ಪ ರಾಜ್, ಮುನೀರ್, ದ.ಕ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಎಸ್ ಹೆಗ್ಡೆ, ಉಪಾಧ್ಯಕ್ಷೆ ಚೂಡಾಮಣಿ, ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರೇಮಾನಂದ, ಮತ್ತಿತರರು ಉಪಸ್ಥಿತರಿದ್ದರು.