ರಾಜಕೀಯಕ್ಕಾಗಿ ಆಶ್ವಾಸನೆ ನೀಡಲ್ಲ- ಜೋಶಿ

ಧಾರವಾಡ.ಜೂ.೨೭: ನಮ್ಮ ಸರ್ಕಾರ ರಾಜಕೀಯ ಕಾರಣಕ್ಕಾಗಿ ಯಾವುದೇ ಆಶ್ವಾಸನೆ ಕೊಡುವುದಿಲ್ಲ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಧಾರವಾಡ-ಬೆಂಗಳೂರು ಸೇರಿದಂತೆ ದೇಶದಲ್ಲಿ ಒಟ್ಟು ಐದು ವಂದೇ ಭಾರತ್ ರೈಲುಗಳಿಗೆ ಭೋಪಾಲ್‌ನ ರಾಣಿ ಕಮಲಪತಿ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ ನಂತರ ಇಲ್ಲಿನ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಂದೇ ಭಾರತ ರೈಲು ಉದ್ಘಾಟನೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ. ನಾವು ಕೆಲಸ ಮಾಡಿ ತೋರಿಸುವವರು. ಧಾರವಾಡದಿಂದ ವಂದೇ ಭಾರತ ರೈಲು ಆರಂಭ ಆಗಬೇಕೆಂಬ ಬೇಡಿಕೆ ಬಹುದಿನಗಳಿಂದ ಇತ್ತು. ಅದು ಈಗ ಈಡೇರಿದೆ ಎಂದು ಅವರು ನುಡಿದರು.
ಹುಬ್ಬಳ್ಳಿಯಲ್ಲಿ ವಂದೇ ಭಾರತ ರೈಲು ನಿರ್ವಹಣೆ ಮಾಡಲು ಟೆಂಡರ್ ಪ್ರಕ್ರಿಯೆ ನಡೆದಿದೆ ಅದು ಆದನಂತರ ವಂದೇ ಭಾರತ ರೈಲು ಸಮಯವನ್ನ ಬದಲಾವಣೆ ಮಾಡಲಾಗುತ್ತದೆ ಎಂದರು.ಈ ರೈಲು ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ರೈಲು, ಸ್ವದೇಶಿ ನಿರ್ಮಾಣ ರೈಲು ಆಗಿದ್ದುಮುಂದಿನ ಮೂರುವರ್ಷಗಳಲ್ಲಿ ೪೦೦ ವಂದೇ ಭಾರತ ರೈಲು ಓಡಿಸುವ ಗುರಿ ಇದೆ ಎಂದು ಜೋಶಿ ತಿಳಿಸಿದರು.
ಬೆಳಗಾವಿಯಿಂದ ಈ ರೈಲು ಓಡಿಸಬೇಕೆಂಬ ಬೇಡಿದೆ ಸಹ ಇದ್ದು ಅದನ್ನು ಸಹ ನಮ್ಮ ಸರ್ಕಾರ ಈಡೇರಿಸುತ್ತದೆ ಎಂದು ಅವರು ಭರವಸೆ ನೀಡಿದರು.