ರಾಜಕಾಲುವೆ ಸ್ವಚ್ಛತಾ ಕಾರ್ಯ:ಶಾಸಕ ವೀಕ್ಷಣೆ

ರಾಯಚೂರು.ಜು.೦೫.ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ನಗರದಲ್ಲಿ ಮಳೆಗಾಲದ ಪ್ರವಾಹ ನಿಯಂತ್ರಿಸಲು ರಾಜ ಕಾಲುವೆ ಸ್ವಚ್ಛತೆ ಕಾರ್ಯವನ್ನು ಇಂದು ವೀಕ್ಷಿಸಿದರು.
ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ನಗರದಲ್ಲಿ ದೊಡ್ಡ ಪ್ರಮಾಣದ ಮಳೆ ಬಂದರೆ ಹಲವು ಕಡೆ ರಾಜ ಕಾಲುವೆ ತುಂಬಿ ಪ್ರವಾಹ ಉದ್ಭವಿಸುವ ಸಾಧ್ಯತೆ ಇದ್ದು ಅದರಿಂದ ನಗರದ ಶಾಸಕ ಡಾ.ಎಸ್. ಶಿವರಾಜ ಪಾಟೀಲ್ ಅವರು ಮುಂಜಾಗೃತಾ ಕ್ರಮವಾಗಿ ನಗರದಲ್ಲಿ ಯಲ್ಲಿಯೂ ಮಳೆಯಿಂದಾಗಿ ತೊಂದರೆ ಯಾಗಬರದೆಂದು ಮುಂಜಾಗ್ರತಾ ಕ್ರಮವಾಗಿ ವಾರ್ಡ್ ನಂ.೩೧ರಲ್ಲಿ ರಾಜ ಕಾಲುವೆಯನ್ನು ವೀಕ್ಷಣೆ ಮಾಡಿ ಹಲವು ಕಡೆ ಉದ್ಭವಿಸುವ ಪ್ರವಾಹ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ರಾಜಕಾಲುವೆ ಸ್ವಚ್ಛತೆಯ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದಾರೆ ಅದರಿಂದು ಇಂದು ಕಾರ್ಯವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಯಾಪಚೆಟ್ಟು ಗೋಪಾಲ್ ರೆಡ್ಡಿ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೇಶವರೆಡ್ಡಿ,
ಬಿ.ಜಿ.ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.