ರಾಜಕಾಲುವೆಗೆ ಬಿದ್ದಿದ್ದ ಕುಡುಕನ ರಕ್ಷಣೆ

ಬೆಂಗಳೂರು, ಡಿ.೪-ಮಡಿವಾಳ ಕೆರೆಯ ಬಳಿಯ ರಾಜಕಾಲುವೆಯ ಕೊಳಚೆ ನೀರಿನಲ್ಲಿ ಸಿಕ್ಕಿಕೊಂಡು ಹೊರಬಾರಲಾರದೇ ಒದ್ದಾಡುತ್ತಿದ್ದ ಕುಡಕನೊಬ್ಬನನ್ನು ರಕ್ಷಿಸುವಲ್ಲಿ ಆಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಆಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ ಜಯನಗರದ ಮೋಹನ್ ಕೃಷ್ಣ (೪೬)ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಡಿವಾಳ ಕೆರೆಯ ಬಳಿಯ ರಾಜಕಾಲುವೆಯಲ್ಲಿ ವ್ಯಕ್ತಿಯೊಬ್ಬರು ಸಿಕ್ಕಿ ಹಾಕಿಕೊಂಡು ಹೊರಬಾರಲಾರದೇ ಒದ್ದಾಡುತ್ತಿರುವುದನ್ನು ಇಂದು ಬೆಳಿಗ್ಗೆ ೧೦.೪೦ರ ವೇಳೆ ನೋಡಿದ ಸ್ಥಳೀಯರು ಮಾಹಿತಿಯನ್ನು ನೀಡಿದ ತಕ್ಷಣವೇ ಜಯನಗರ ಅಗ್ನಿಶಾಮಕ ಠಾಣೆ ಠಾಣಾಧಿಕಾರಿ ಕೃಷ್ಣ ಶೆಟ್ಟಿಯವರ ನೇತೃತ್ವದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡು ಸುರಕ್ಷಿತವಾಗಿ ಹೊರಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಕುಡಿದ ಅಮಲಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮೋಹನ್ ಕೃಷ್ಣ ರಾಜ ಕಾಲುವೆಗೆ ಇಳಿದು ಮೇಲೆ ಬರಲಾಗದೇ ಒದ್ದಾಡುತ್ತಿದ್ದ ಎಂದು ತಿಳಿದುಬಂದಿದೆ.