ರಾಜಕಾರಣಿಗಳು ನಂಬಿಸಿ ಮತ ಪಡೆದು ನಮ್ಮನ್ನು ಮರೆಯುತ್ತಾರೆ

ಬೀದರ,ಜ.3- ಕರ್ನಾಟಕ ಸ್ವಾಭಿಮಾನಿ ಎಸ್.ಸಿ. ಎಸ್.ಟಿ. ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಆಯೋಜಿಸಿದ್ದ ಭೀಮಾ ಕೋರೆಗಾಂವ ವಿಜಯೋತ್ಸವ ಹಾಗೂ ಎಸ್.ಸಿ. ಎಸ್.ಟಿ.ಗಳು ಏಕೆ ಒಂದಾಗಬೇಕು? ಎಂಬ ವಿಚಾರ ಸಂಕಿರಣಕ್ಕೆ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಜೀ ಅವರು ಚಾಲನೆ ನೀಡಿದರು.

205ನೇ ಭೀಮಾ ಕೋರೆಗಾಂವ ವಿಜಯೋತ್ಸವ ನಿಮಿತ್ಯ ಮತ್ತು ಎಸ್.ಸಿ. ಎಸ್.ಟಿ.ಗಳು ಏಕೆ ಒಂದಾಗಬೇಕು ಎಂಬ ವಿಚಾರ ಸಂಕಿರಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ, ಪೂಜ್ಯರು, ಚುನಾವಣೆಯ ಮೊದಲು ನಮ್ಮ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹತ್ತಿರ ಬಂದು ನಮ್ಮನ್ನು ನಂಬಿಸಿ ಮೋಸದಿಂದ ಮತವನ್ನು ಪಡೆದುಕೊಂಡು, ನಮ್ಮನ್ನು ಮರೆಯುತ್ತಾರೆ ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಜ್ಞಾನಪ್ರಕಾಶ ಸ್ವಾಮಿಜೀ, ಉರಲಿಂಗ್ ಪೆದ್ದಿ ಮಠ ಮೈಸೂರು ಇವರು, ಬೇರೆ-ಬೇರೆ ಸಮುದಾಯದ ಸ್ವಾಮಿಜೀಗಳು ತಮ್ಮ ಮಠಗಳಿಗೆ ಅನುದಾನ ಕೇಳಲು ಹೋಗುತ್ತಾರೆ. ಆದರೆ ನಾವು ನಮ್ಮ ಸಮುದಾಯದ ಹಕ್ಕುಗಳನ್ನು ಕೇಳಲು ರಾಜ್ಯದ ತುಂಬಾ ಸಂಚಾರ ಮಾಡುತ್ತಿದ್ದೇವೆ. ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ದೇಶದ ಪ್ರಜೆಗಳು ರಾಜರಾಗಿರುತ್ತಾರೆ. ಮತ ಇದ್ದವರು ದೇಶ ಆಳುವರಾಗಬೇಕಾದಾಗ ಮತ ಪಡೆದವರು ನಮ್ಮನ್ನು ವಂಚಿತರನ್ನಾಗಿ ಮಾಡುತ್ತಿದ್ದಾರೆ.
ಈ ದೇಶದ ಮೂಲ ನಿವಾಸಿಗಳಾದ ಎಸ್.ಸಿ. ಎಸ್.ಟಿ. ಜನಾಂಗವನ್ನು ಸಂವಿಧಾನದ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ಹಾಗಾಗೀ ನಾವು ಒಂದಾಗುವ ಅವಶ್ಯಕತೆ ಇದೆ ಎಂದು ಹೇಳಿದರು. ಸಂವಿಧಾನದ ಸಮಾನತೆಯ ಹಕ್ಕುಗಳನ್ನು ಎಳೆ-ಎಳೆಯಾಗಿ ತೆಗೆದು ಹಾಕುತ್ತಿದ್ದಾರೆ. ನಾವು ಎಚ್ಚರಗೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ಇನ್ರ್ನೋವ ಬಸವನಾಗಿದೇವ ಶರಣರು, ಚಿತ್ರದುರ್ಗ ಇವರು ಮಾತನಾಡಿ, ದೇಶದ ರಾಜ್ಯ ಅಧಿಕಾರ ನಾವು ಹಿಡಿದು ನಮ್ಮ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸುವ ಅವಶ್ಯಕತೆ ಇದೆ, ನಮ್ಮನ್ನು ಹತ್ತಿಕ್ಕಲು ಆರ್ಥಿಕವಾಗಿ ಮುಂದುವರೆದ ಸಮಾಜದ ಜನಾಂಗಕ್ಕೆ 10% ಮೀಸಲಾತಿ ನೀಡಿ ಈಗಾಗಲೇ ನಮ್ಮನ್ನು ವಂಚಿಸಿದ್ದಾರೆ ಎಂದು ಹೇಳಿದರು.
ಇನ್ರ್ನೋವ ಸ್ವಾಮಿಜೀಗಳಾದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯಾ ಸ್ವಾಮಿಜೀ, ಚಿತ್ರದುರ್ಗ ಮಾತನಾಡಿ, ಆಳುವ ಸರ್ಕಾರಗಳೂ ಈ ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡದೇ ನಮ್ಮ ಬಹುಜನ ಸಮಾಜವನ್ನು ದಿಕ್ಕು ತಪ್ಪಿಸಿ ಅಧೋಗತಿಗೆ ತಳ್ಳುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿರುವ ಪರಮಪೂಜ್ಯ ಭಂತೆ ಸಂಘ ರಕ್ಷಿತ್, ಧಮ್ಮ ದರ್ಶನ ಭೂಮಿ, ವೈಶಾಲಿ ನಗರ, ಆಣದೂರು-ಬೀದರ ಇವರು ಆರ್ಶಿವಾದ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅನೀಲಕುಮಾರ ಬೆಲ್ದಾರ್ ರವರು ಸ್ವಾಮಿಗಳ ಈ ಸ್ವಾಭಿಮಾನದ ಹೋರಾಟಕ್ಕೆ ನಾವೆಲ್ಲ ಎಸ್.ಸಿ.ಎಸ್.ಟಿ. ಸಮುದಾಯದ ಯುವಕರು, ಬುದ್ಧಿಜೀವಿಗಳು, ಮಹಿಳೆಯರು ತಿಳಿದುಕೊಂಡು, ಅರ್ಥಮಾಡಿಕೊಂಡು ಅವರ ವಿಚಾರಗಳಿಂದ ಪ್ರೇರೆಪಿತರಾದ ರಾಜ್ಯ ಅಧಿಕಾರಿ ಹಿಡಿಯಲು ಒಂದಾಗಬೇಕಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಸರ್ದಾರ ಸೇವಾಲಾಲ್ ಸ್ವಾಮಿಜೀ, ಚಿತ್ರದುರ್ಗ, ಶ್ರೀ ಸಂಬಾಜೀ ಮಹಾರಾಜ್, ಶ್ರೀ ಮಾರಸಂದ್ರ ಮುನಿಯಪ್ಪ, ಶ್ರೀ ಎಂ. ಗೋಪಿನಾಥ, ಶ್ರೀ ಬಸವರಾಜ ಕೌಠಾ ಇವರುಗಳು ವೇದಿಕೆಯ ಮೇಲೆ ಉಪಸ್ಥಿತರದ್ದರು. ಕಾರ್ಯಕ್ರಮದ ಸಂಘಟನೆಯ ಸಂಯೋಜಕರಾದ ಬಾಬು ಪಾಸ್ವಾನ, ರಾಜಕುಮಾರ ಮೂಲಭಾರತಿ, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ದತ್ತು ಸೂರ್ಯವಂಶಿ, ದಶರಥ ಜಮಾದಾರ, ಸಂತೋಷ ಏಣಕೂರೆ, ಬಾಬುರಾವ ಮಿಠಾರೆ, ರಾಜಕುಮಾರ ಗುನ್ನಳ್ಳಿ, ಅಂಬಾದಾಸ ಗಾಯಕವಾಡ, ಶಂಕರ ಪುರಂಗೆ, ಲಕ್ಷ್ಮೀಪುತ್ರ ಮಾಳಗೆ, ಅಶೋಕ ಸಂಗಮ ಇನ್ನಿತರ ಮುಖಂಡರು ವೇದಿಕೆಯ ಮೇಲೆ ಹಾಜರಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ. ಕಾರ್ಯಕ್ರಮದ ನಿರೂಪಣೆಯನ್ನು ಸಂದೀಪ ಕಾಂಟೆ ನಡೆಸಿಕೊಟ್ಟರು.