ರಾಜಕಾರಣಿಗಳಿಗೆ ಚಾರಿತ್ರ್ಯ- ಪ್ರಾಮಾಣಿಕತೆ ಬಹುಮುಖ್ಯ- ಸಿಎಂ ಬೊಮ್ಮಾಯಿ

ದಾವಣಗೆರೆ. ನ.೨೬; ಸಾರ್ವಜನಿಕ ರಂಗದಲ್ಲಿ ಚಾರಿತ್ರ್ಯತೆ ಕಾಪಾಡಿಕೊಂಡು ಬರುವವರು ಉತ್ತಮ ನಾಯಕರಾಗುತ್ತಾರೆ ಈ ನಿಟ್ಟಿನಲ್ಲಿ ಹಿರಿಯರಾದ ಎಸ್ ಎ ರವೀಂದ್ರನಾಥ್ ಆದರ್ಶಪ್ರಾಯರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಣ್ಣಿಸಿದರು.
ನಗರದ ಹದಡಿರಸ್ತೆಯಲ್ಲಿರುವ ಎಸ್ ಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಮಾಜಿ ಸಚಿವರಾದ ಎಸ್ ಎ ರವೀಂದ್ರನಾಥ್ ಅವರ ಅಮೃತ ಮಹೋತ್ಸವ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಎಸ್ ಎ ರವೀಂದ್ರನಾಥ್
ಹಿರಿಯರು ಉತ್ತಮ  ಮಾರ್ಗದರ್ಶಕರು. ಅವರನ್ನು
ಮೊದಲು ನೊಡಿದ್ದು  ನನ್ನ ತಂದೆಯವರ ಕಾಲದಲ್ಲಿ ದಾವಣಗೆರೆಯ ಮಾಯಕೊಂಡ ಸೇರಿದಂತೆ ಸುತ್ತಮುತ್ತಲಿನ ರೈತರೊಂದಿಗೆ  ಭದ್ರಾ ಕಾಲುವೆ ನೀರು ಹರಿಸಲು ಹೋರಾಟ ಮಾಡಿ ಯಶಸ್ವಿಯಾದವರು.
ದಿಟ್ಟ ಹೊರಾಟಗಾರ ಸ್ಪಷ್ಟತೆ ಇರುವವರು.ಯಾವುದಾದರು ಹೋರಾಟ ಕೈಗೆತ್ತುಕೊಂಡರೆ ಅದಕ್ಕೆ ಅಂತಿಮ ರೂಪ ಕೊಡುವ ಸಂಕಲ್ಪ ಹೊಂದಿದವರು. ಅವರ ಹೋರಾಟ ಆಡಳಿತ  ವ್ಯವಸ್ಥೆ ಮೇಲೆದೊಡ್ಡ ಪರಿಣಾಮ ಬೀರಿತ್ತು.ಆದರೆ
ಇಂದು ಹೊರಾಟಗಾರರ ಕೊರತೆ ಇದೆ. ಎಸ್ ಎ ಆರ್ ರೈತರಿಗೆ ಬೆಂಬಲವಾಗಿದ್ದವರು. ರೈತರ ಕಷ್ಟದಲ್ಲಿ ಅವರ ಹಕ್ಕಿಗಾಗಿ ಹೊರಾಟ ಮಾಡಿದವರು.ಸಾರ್ವಜನಿಕ ಜೀವನದಲ್ಲಿ ಸ್ವಚಾರಿತ್ರ್ಯ ಪ್ರಾಮಾಣಿಕ ಮೌಲ್ಯ ಎತ್ತಿ ಹಿಡಿದವರು ಹಾಗೂ ಇಂದಿನ ಪೀಳಿಗೆಗೆ ಆದರ್ಶಪ್ರಾಯವಾದವರು ಎಂದು ನುಡಿದರು. ಒಬ್ಬ ರಾಜಕಾರಣಿಗೆ ಮುಂದಿನ ಚುನಾವಣೆಯತ್ತ ಗಮನವಿರುತ್ತದೆ. ಒಬ್ಬ ಮುತ್ಸದಿಗೆ ಮುಂದಿನ ಜನಾಂಗದ ಬಗ್ಗೆ ಸಂಕಲ್ಪ ಇರುತ್ತದೆ ಅಂತಹ  ಮುತ್ಸದಿ ಎಸ್ ಎ ಆರ್.ಅವರ ಕೆಲವೊಂದು ಮಾತುಗಳು ಅರ್ಥಗರ್ಭಿತ. ತಮ್ಮ ಮಾತಿನಿಂದಲೇ ಚಾಟಿ ಬೀಸುವ, ಸತ್ಯವನ್ನು ಬಹಳ ಅರ್ಥಗರ್ಭಿತವಾಗಿ ಹೇಳುವ ಕಲೆ ಅವರಿಗಿದೆ.  ಅವರ ಬದುಕು ಸ್ವಚ್ಚವಾಗಿದೆ ಅದಕ್ಕೆ ಅವರು ಪ್ರಸನ್ನರಾಗಿರುತ್ತಾರೆ. 
ರಾಜಕಾರಣದಲ್ಲಿದ್ದರು ಅಧಿಕಾರಕ್ಕೆ ಎಂದು ಹಪಹಪಿಸಲಿಲ್ಲ.ಆದರೆ ಅಧಿಕಾರಕ್ಕೆ ಬಂದಾಗ ಸಾಧಿಸಲು ಶ್ರಮವಹಿಸಿದ ಧೀಮಂತ ನಾಯಕ.
ಸರಳ ವ್ಯಕ್ತಿ ವಿಚಾರದಲ್ಲಿ ಗುಣದಲ್ಲಿ ಸರಳತೆ.
ಗೊಂದಲವಿಲ್ಲದ ರಾಜಕಾರಣಿ, ಅದಕ್ಕೆ ದಾವಣಗೆರೆ ಜಿಲ್ಲೆಯ ಜನ ಅವರಿಗೆ ಹೃದಯದಲ್ಲಿ ವಿಶೇಷ ಸ್ಥಾನ ನೀಡಿದ್ದಾರೆ.ಜನೋಪಯೋಗಿಯಾಗಿ ಸಾರ್ವಜನಿಕ ಜೀವನ ನಡೆಸಿದ್ದಾರೆ. ಸಮನ್ವಯತೆ,ಉತ್ತಮ ಆಚರಣೆ ಮತ್ತು ಚಾರಿತ್ರ್ಯಿಕ ಈ ಮೂರು ಎಸ್ ಎ ಆರ್ ಬಳಿ ಇದೆ. ಅವರ ಹಲವಾರು ಕನಸುಗಳಿವೆ ಅವರಿಗೆ ಬಡವರ ರೈತರ ಚಿಂತನೆಯಾಗಿದೆ.ತಮ್ಮ ಕ್ಷೇತ್ರದ‌೨೦ ಸಾವಿರಕ್ಕೂ ಹೆಚ್ಚು ಬಡವರಿಗೆ ನಿವೇಶನ ನೀಡುವ ಪಣ ತೊಟ್ಟಿದ್ದಾರೆ ೧೭೩ ಎಕರೆ ಸ್ವಾಧೀನ ಪಡಿಸಿಕೊಂಡು ೧೫ ಸಾವಿಕ್ಕೂ ಹೆಚ್ಚು ಜನರಿಗೆ ಮನೆ ನಿರ್ಮಿಸಿಕೊಡುವ ಅಭಿಲಾಷೆ ಹೊಂದಿದ್ದಾರೆ.ಅದು ಅವರ ಹೃದಯ ಶ್ರೀಮಂತಿಗೆ.ಅವರ ಎಲ್ಲಾ ಕನಸು ನನಸುವ ಮಾಡುವ ಪ್ರಯತ್ನ ಮಾಡುತ್ತೇನೆ.  ನಮಗಾಗಿ ಬದುಕುವುದು ದೊಡ್ಡ ಕೆಲಸ ನಮ್ಮ ಬದುಕು ಇತರರಿಗೂ ನೆರಳು ಕೊಡುವ ಬದುಕು ಇರಬೇಕು ಇದನ್ನು ಎಸ್ ಎ ಆರ್ ಮಾಡಿದ್ದಾರೆ  ಸಮಾಜದಿಂದ ಶಕ್ತಿ ಪಡೆದು ಬೆಳೆಯುತ್ತೇವೆ ಸಮಾಜದ ಋಣ ನಮ್ಮ ಖಾತೆಯಲ್ಲಿರುತ್ತದೆ ಮುಂದೆ ನಮ್ಮ ಬದುಕಿಗಾಗಿ ಕಾಯಕ ಮಾಡುವ ಮೂಲಕ ಕುಟುಂಬದ ಋಣ ತೀರಿಸುತ್ತೇವೆ ಎಲ್ಲಾ ಕರ್ತವ್ಯ ಮುಗಿದ ಮೇಲೆ ನಮ್ಮ ಸಮಾಜಕ್ಕೆ ನೀಡುವ ಕೆಲಸ ಮಾಡಿ ಸಮಾಜಕ್ಕೆ ಏನೆಲ್ಲ ಸಹಾಯ ಮಾಡಲು ಸಾಧ್ಯವೋ ಅದನ್ನು ನೀಡಬೇಕು. ಇದರಿಂದ ಬದುಕಿನ ಬ್ಯಾಲೆನ್ಸ್ ಶೀಟ್ ಸರಿಸಮವಾಗುತ್ತದೆ ವ್ಯಾಪಾರದಲ್ಲಿ ಲಾಭ ನಷ್ಟ ಇದೆ ಧರ್ಮದಲ್ಕಿ ಪಾಪ ಪುಣ್ಯ ಇದೆ ಜೀವನದಲ್ಲಿ ಎರಡೂ ಅಳವಡಿಸಿಕೊಂಡವರು ಶ್ರೀಮಂತರಾಗಿ ಬದುಕು ಬಾಳಿದವರು ಎಸ್ ಎ ಆರ್ ಅವರು ಶತಮಾನ ಪೂರೈಸಲಿ ನಮಗೆಲ್ಲ ಮಾರ್ಗದರ್ಶನ ನೀಡಲಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಲು ಎಸ್ ಎ ಆರ್ ಕಾರಣಿಕರ್ತರು.ಅವರು ಹೆಚ್ಚು ಮಾರ್ಗದರ್ಶನ ನೀಡಲಿ.ಅವರ ಸರಳಜೀವನ ನಮಗೆಲ್ಲಾ ಮಾದರಿಯಾಗಲಿ ಎಂದರು.
ಸಂಸದ ಜಿ.ಎಂ ಸಿದ್ದೇಶ್ವರ ಮಾತನಾಡಿ ಮೊನಚು ಮಾತು ನೇರತನ ಎಸ್ ಎ ಆರ್ ಅವರದು ಮುಂದಿನ ಚುನಾವಣೆಯಲ್ಲಿ ಅವರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರಾಗಬೇಕು. ಪಕ್ಷದಲ್ಲಿ ಹಿರಿಯರಿಗೆ ಅವಕಾಶ ಇಲ್ಲ ಎನ್ನುತ್ತಾರೆ ಆದರೆ ಗೆಲ್ಲುವ ವ್ಯಕ್ತಿ ಎಸ್ ಎ ಆರ್ ಅವರಿಗೆ ಟಿಕೇಟ್ ನೀಡಿದರೆ ಬಿಜೆಪಿ ಗೆಲುವು ಪಡೆಯಲಿದೆ.ದಾವಣಗೆರೆ ಬಿಜೆಪಿ ಭದ್ರಕೊಟೆ ಎಂದರು.
ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ,ಮೇಯರ್ ಎಸ್.ಟಿ ವಿರೇಶ್,ಎಂ.ಬಿ ಬಾನುಪ್ರಕಾಶ್ ಶಾಸಕರುಗಳಾದ ಎಂ.ಪಿ ರೇಣುಕಾಚಾರ್ಯ,ಮಾಡಾಳು ವಿರೂಪಾಕ್ಷಪ್ಪ,ಎಸ್.ವಿ ರಾಮಚಂದ್ರಪ್ಪ, ಕರುಣಾಕರರೆಡ್ಡಿ, ಪ್ರೊ.ಲಿಂಗಣ್ಣ, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್,ಡಾ.ಎ.ಹೆಚ್ ಶಿವಯೋಗಿಸ್ವಾಮಿ,ಬಿ.ಪಿ ಹರೀಶ್ , ಸುಧಾ ಜಯರುದ್ರೇಶ್,ಮಾಜಿ ಮೇಯರ್ ಬಿ.ಜಿ ಅಜಯ್ ಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ,ಬಿ.ಎಸ್ ಜಗದೀಶ್ ಮತ್ತಿತರರಿದ್ದರು.
ಇದೇ ವೇಳೆ ವೇದಿಕೆಯಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಎಸ್.ಎ ರವೀಂದ್ರನಾಥ್ ಹಾಗೂ ಶ್ರೀಮತಿ ರತ್ನಮ್ಮ ದಂಪತಿಗೆ ಅಭಿನಂದನೆ ಜರುಗಿತು.