ರಾಜಕಾರಣಕ್ಕೆ ಜೀವ ತುಂಬಿದ ಡಾ.ಕೆ.ಕೆಂಪರಾಜು

ಗೌರಿಬಿದನೂರು.ಜ೨-ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಗೌರಿಬಿದನೂರು ತಾಲ್ಲೂಕಿನಲ್ಲಿ ಕಳೆದ ಒಂದು ವರ್ಷದಿಂದ ಪ್ರತೀ ಹಳ್ಳಿಗೆ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಅರಿತು ಕಾಲಕಾಲಕ್ಕೆ ಸ್ಪಂಧಿಸುವ ಮೂಲಕ ತಮ್ಮ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಕ್ಷೇತ್ರದ ಸೇವಾಕಾಂಕ್ಷಿ ಡಾ.ಕೆ.ಕೆಂಪರಾಜು ಇತ್ತೀಚೆಗೆ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಕ್ಷೇತ್ರದಲ್ಲಿ ಸಂಚರಿಸಿ ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ೧೧೦ ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುವ ಮೂಲಕ ಸ್ಥಳೀಯ ರಾಜಕಾರಣಕ್ಕೆ ಜೀವ ತುಂಬಿದ್ದಾರೆ.
ಕೋವಿಡ್ ಸಂಕಷ್ಟದ ಪರಿಸ್ಥಿಯಲ್ಲಿ ಬಡ ಕುಟುಂಬಗಳಿಗೆ ಸುಮಾರು ೫೦ ಸಾವಿರಕ್ಕೂ ಅಧಿಕ ಆಹಾರದ ಕಿಟ್ ವಿತರಿಸಿ, ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಮಾದರಿಯಲ್ಲಿ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿ ಯುವಕರಿಗೆ ಸ್ಪೂರ್ತಿಯಾಗಿದ್ದರು. ಏಳೆಂಟು ತಿಂಗಳಿನಿಂದ ಕೈಯಲ್ಲಿ ಕೆಲಸವಿಲ್ಲದೆ ಕಂಗಾಲಾಗಿದ್ದ ೫೦೦ ಕ್ಕೂ ಹೆಚ್ಚು ಖಾಸಗೀ ಶಾಲಾ ಶಿಕ್ಷಕರಿಗೆ ಮತ್ತು ಅಂಗವಿಕಲರಿಗೆ ಆರ್ಥಿಕ ಸಹಕಾರ ನೀಡಿ ಅವರ ಬಾಳಿಗೆ ಬೆಳಕಾಗಿದ್ದರು.
ಈ ಎಲ್ಲ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನದಲ್ಲಿ ಬೇರೂರಿದ್ದ ಡಾ.ಕೆ.ಕೆಂಪರಾಜು ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ತಮ್ಮ ಮೈತ್ರಿ ಬಣದ ವತಿಯಿಂದ ಸುಮಾರು ೨೫೦ ಕ್ಕೂ ಹೆಚ್ಚು ಸ್ಥಾನಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲು ಕಾರಣರಾಗಿದ್ದರು. ಕ್ಷೇತ್ರದಲ್ಲಿನ ಯುವಕರ ಉತ್ಸಾಹ, ಹಿರಿಯ ಮಾರ್ಗದರ್ಶನ ಮತ್ತು ಸಂಘಟನೆಯಿಂದ ನಿರೀಕ್ಷೆಗೂ ಮೀರಿದ ಸ್ಥಾನಗಳನ್ನು ಪಡೆಯುವ ಮೂಲಕ ತಾಲ್ಲೂಕಿನ ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ಭದ್ರ ಬುನಾಧಿ ಹಾಕಿದ್ದಾರೆ.
ಶೂನ್ಯದಲ್ಲಿದ್ದ ಬಣದ ಕಾರ್ಯಕರ್ತರು ಕೇವಲ ಒಂದು ವರ್ಷದ ಪ್ರಾಮಾಣಿಕ ಪ್ರಯತ್ನದಲ್ಲಿ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಕಾರ್ಯಕರ್ತರ ಅವಿರತ ಸೇವೆ ಮತ್ತು ಒಗ್ಗಟ್ಟಿನಿಂದ ನಿರ್ಧಿಷ್ಟ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ವಿಜೇತ ಹಾಗೂ ಪರಾಜಿತವಾಗಿರುವ ಎಲ್ಲ ಕಾರ್ಯಕರ್ತರು ಧೃತಿಗೆಡದೆ ತಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳದೆ ನಿರ್ಭೀತಿಯಿಂದ ಮುನ್ನುಗ್ಗುತ್ತಾ ತಮ್ಮ ಗ್ರಾಮಗಳಲ್ಲಿ ಕೈಲಾದಷ್ಟು ಮಟ್ಟಿಗೆ ಜನರ ಸೇವೆ ಮಾಡಲು ಪ್ರಯತ್ನಿಸಿ ಕನಿಷ್ಟ ಅಂತರದಲ್ಲಿ ಸೋತಿರುವ ಎಲ್ಲ ಅಭ್ಯರ್ಥಿಗಳೂ ಕೂಡ ಜಯದ ನಗೆ ಬೀರಿ ಜನರ ವಿಶ್ವಾಸ ಮತ್ತು ಪ್ರೀತಿಯನ್ನು ಪಡೆಯಲು ಪ್ರಯತ್ನಿಸಿ ದೊಡ್ಡವರ ಮಾತಿನಂತೆ ’ ಪ್ರತಿಯೊಬ್ಬರ ಜೀವನದಲ್ಲಿ ಸೋಲಿನ ಮೆಟ್ಟಿಲುಗಳೇ ಗೆಲುವಿಗೆ ಸೋಪಾನ’ ವಾದೀತು ಎಂಬುದನ್ನು ಮರೆಯದಿರಿ ಎನ್ನುತ್ತಾರೆ ಡಾ.ಕೆ.ಕೆಂಪರಾಜು.