ರಾಚೋಟೇಶ್ವರ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ ಗಲ್ಲದಿಂದ ತೂರಿದ 1008 ಅಡಿ ಹಗ್ಗ

ಶಹಾಬಾದ:ಸೆ.21:ನಗರದ ವಡ್ಡರ ಸಂಘ ಬಡಾವಣೆಯಲ್ಲಿ ಶ್ರೀ ರಾಚೋಟೇಶ್ವರ ವೀರಭದ್ರೇಶ್ವರ ಆಶ್ರಮದಲ್ಲಿ ಪೂಜ್ಯ ಶಂಕ್ರಯ್ಯ ಸ್ವಾಮಿ ನೇತೃತ್ವದಲ್ಲಿ ನಡೆದ ಶ್ರೀ ರಾಚೋಟೇಶ್ವರ ವೀರಭದ್ರೇಶ್ವರರ 7ನೇ ವರ್ಷದ ಪಲ್ಲಕ್ಕಿ ಉತ್ಸವದಲ್ಲಿ 1008 ಅಡಿ ಉದ್ದದ ಹಗ್ಗ, 12 ಅಡಿ ಉದ್ದದ ಸರಳನ್ನು ಗಲ್ಲದಿಂದ ತೂರಿಸುವ ಮೂಲಕ ಪುರವಂತರ ಸೇವೆ ನಡೆಯಿತು. ಬೆಳಗ್ಗೆ ಆಶ್ರಮದಲ್ಲಿ ಶ್ರೀ ರಾಚೋಟೇಶ್ವರ ವೀರ ಭದ್ರೇಶ್ವರ ದೇವರಿಗೆ ಶರಣಯ್ಯ ಸ್ವಾಮಿ ಹಿರೇಮಠ ರೇವನೂರ ಅವರ ವೈದಿಕತ್ವದಲ್ಲಿ ರುದ್ರಾಭೀಷೇಕ, ಬಿಲ್ವಾರ್ಚನೆ ನಡೆಯಿತು. ನಂತರ ಬಸವಣ್ಣ ದೇವಸ್ಥಾನದಿಂದ ಲಕ್ಷ್ಮೀ ಗಂಜನ ರೇಣುಕಾಚಾರ್ಯ ದೇವಸ್ಥಾನದವರೆಗೆ ವಿವಿಧ ವಾಧ್ಯ ವೃಂದ, ಪುರವಂತರ ಸೇವೆ, ಭಜನೆ, ಕೋಲಾಟದೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು.
ಪುರವಂತರಾದ ಮಲ್ಲಿಕಾರ್ಜುನ ಮರತೂರ, ಚಿದಾನಂದ ಸ್ವಾಮಿ ವಿಜಯಪುರ ಅವರಿಂದ 1008 ಅಡಿ ಉದ್ದದ ಹಗ್ಗ ಗಲ್ಲದಿಂದ ತೂರಿಸುವ ಸೇವೆ, ಸೊನ್ನದ ನಿಂಗಯ್ಯ ಸ್ವಾಮಿ, ಲಕ್ಷ್ಮೀಕಾಂತ ಖಣದಾಳ ಅವರಿಂದ 12 ಅಡಿ ಉದ್ದದ ಶಸ್ತ್ರ ಸೇವೆ ನಡೆಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಮೃತ್ಯುಂಜಯ ಸ್ವಾಮಿ ಹಿರೇಮಠ, ಶಂಕ್ರಯ್ಯ ಸ್ವಾಮಿ ಮರತೂರ, ಡಾ.ಗುಂಡಣ್ಣ ಬಾಳಿ, ವಿಹಿಂಪ ಅಧ್ಯಕ್ಷ ಬಸವರಾಜ ಸಾತಿಹಾಳ, ಚನ್ನಬಸಯ್ಯ ಸ್ವಾಮಿ ಮಠಪತಿ, ಅಣವೀರಯ್ಯ ಸ್ವಾಮಿ ಮಠಪತಿ, ಶರಣಯ್ಯ ಸ್ವಾಮಿ, ಕನಕಪ್ಪ ದಂಡಗುಲಕರ್, ಸಿದ್ರಾಮ ಕುಸಾಳೆ, ರಾಕೇಶ ಪವಾರ, ಸಿದ್ರಾಮ ಗುಂಜಾಳಕರ, ರಾಜು ಮೇಸ್ತ್ರಿ, ರವಿ ಮೇಸ್ತ್ರಿ, ರಾವೂರನ ಸಿದ್ದಯ್ಯ ಸ್ವಾಮಿ ನಂದಿಕೋಲ, ಶಂಬುಲಿಂಗಯ್ಯ ಸ್ವಾಮಿ, ಜಗದೀಶ ದೇಸಾಯಿ, ದೇವಿಂದ್ರ, ಮಲ್ಲು ಬಾಳಿ, ಶಿವುಗೌಡ ಕಣ್ಣೂರ, ಶಿವುಕುಮಾರ ಕಾರಂಜಿ, ಶರಣಗೌಡ ರೇವೂನೂರ, ಮಲ್ಲಿನಾಥ ದಾಸೋಹಿ, ಸಿದ್ದಲಿಂಗ ದಾಸೋಹ, ಭೀಮರಾಯ ರಸ್ತಾಪೂರ, ಶಿವಲಿಂಗಪ್ಪ ತುಪ್ಪದ, ಈಶಣ್ಣ ಸಜ್ಜನಶೆಟ್ಟಿ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು. ಮಹಾ ಪ್ರಸಾದ ವಿತರಣೆ, ಭಕ್ತರಿಗೆ ಗುರುರಕ್ಷೆ ನಡೆಯಿತು.