ರಾಚೋಟೇಶ್ವರ ಜಾತ್ರಾ ಮಹೋತ್ಸವ

ಕೊಲ್ಹಾರ:ಏ.7: ಪಟ್ಟಣದ ಆರಾಧ್ಯ ದೈವ ರಾಚೋಟೇಶ್ವರ ದೇವರ ಜಾತ್ರಾ ಮಹೋತ್ಸವ ಎಪ್ರಿಲ್ 9 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಪ್ರಿಲ್ 9 ರಂದು ಮುಂಜಾನೆ 4 ಗಂಟೆಗೆ ಕೊಲ್ಹಾರ ಹಾಗೂ ಬೇಲೂರು ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹುಲಗೇರಿ ಕಾಡಸಿದ್ದೇಶ್ವರ ಮಠದ ಗುರುದೇವ ಶಾಸ್ತ್ರೀಗಳು ಇವರ ನೇತೃತ್ವದಲ್ಲಿ ಹೋಮ, ಹವನ ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ಜರುಗುವವು.
ಮುಂಜಾನೆ 10 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಕಳಶ ಮೆರವಣಿಗೆ.
ಮಧ್ಯಾಹ್ನ 1 ಗಂಟೆಗೆ ಪುರವಂತರ ಸೇವೆ, ಅಗ್ನಿ ಪ್ರವೇಶ, ಅನ್ನಸಂತರ್ಪಣೆ ಹಾಗೂ ಹಿರೇಮಠದ ಮುರುಗೇಂದ್ರ ಮಹಾಸ್ವಾಮಿಗಳು ಹಾಗೂ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಇವರಿಂದ ಕಲ್ಯಾಣ ಮಂಟಪ ಉದ್ಘಾಟನೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.