ರಾಘವ ಲಾರೆನ್ಸ್ ಚಿತ್ರದಿಂದ ಹೊರಬಂದ ನಯನತಾರಾ

ಹೈದರಾಬಾದ್,ಅ.೮-ನಯನತಾರಾ ದಕ್ಷಿಣ ಭಾರತದ ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರು. ಜವಾನ್ ನಂತರ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರತ್ನ ಕುಮಾರ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಯನತಾರಾ ಮೊದಲ ಬಾರಿಗೆ ರಾಘವ ಲಾರೆನ್ಸ್ ಅವರೊಂದಿಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಆದರೆ, ಇತ್ತೀಚಿನ ವರದಿಯ ಪ್ರಕಾರ, ನಟಿ ಈಗ ಈ ಯೋಜನೆಯಿಂದ ಹಿಂದೆ ಸರಿದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ದಿನಾಂಕಗಳ ಹೊಂದಾಣಿಕೆ ಆಗದೇ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಈಗ ರತ್ನ ಕುಮಾರ್ ಅವರು ರಾಘವ್ ಲಾರೆನ್ಸ್ ಅವರೊಂದಿಗೆ ತಮ್ಮ ಚಿತ್ರಕ್ಕಾಗಿ ಹೊಸ ಸ್ಕ್ರಿಪ್ಟ್ ತಯಾರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಪ್ರಿ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತವನ್ನು ತಲುಪಿದ ನಂತರ ಅದರ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ರತ್ನ ಕುಮಾರ್ ಆರಂಭದಲ್ಲಿ ರಾಘವ್ ಲಾರೆನ್ಸ್ ಮತ್ತು ನಯನತಾರಾ ಅವರೊಂದಿಗೆ ಹಾರರ್ ಥ್ರಿಲ್ಲರ್ ಮಾಡಲು ಯೋಜಿಸಿದ್ದು, ಲೋಕೇಶ್ ಕನಕರಾಜ್ ಚಿತ್ರದ ಕಥೆ ಬರೆಯಲಿದ್ದಾರೆ ಎನ್ನಲಾಗಿತ್ತು. ಮಾಹಿತಿ ಪ್ರಕಾರ, ರತ್ನ ಕುಮಾರ್ ಅವರ ಮುಂದಿನ ನಿರ್ದೇಶನದ ಚಿತ್ರದ ಹೊಸ ಸ್ಕ್ರಿಪ್ಟ್‌ನಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ ಸಹ ಸಹಾಯ ಮಾಡುತ್ತಿದ್ದಾರೆ.
ರಾಘವ್ ಲಾರೆನ್ಸ್ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ನಟನ ಚಿತ್ರ ಚಂದ್ರಮುಖಿ ೨ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು. ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಿ ವಾಸು ನಿರ್ದೇಶನದ ಈ ಚಿತ್ರದ ಗಳಿಕೆಯ ವೇಗ ತುಂಬಾ ನಿಧಾನವಾಗಿದ್ದು, ರಜನಿಕಾಂತ್ ಸಿನಿಮಾದಂತಹ ಮ್ಯಾಜಿಕ್ ಸೃಷ್ಟಿಸಲು ಸಾಧ್ಯವಾಗಿಲ್ಲ. ಅದೇ ಸಮಯದಲ್ಲಿ, ನಯನತಾರಾ ಅವರ ಎರಡು ಚಿತ್ರಗಳು ಜವಾನ್ ಮತ್ತು ಇರೈವನ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದೆ. ನಯನತಾರಾ ಜವಾನ್ ಚಿತ್ರದ’ ಮೂಲಕ ಹಿಂದಿಗೆ ಪಾದಾರ್ಪಣೆ ಮಾಡಿದ್ದು ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗಿನ ಅವರ ಜೋಡಿಯು ಪ್ರೇಕ್ಷಕರನ್ನು ರಂಜಿಸಿತು. ಜವಾನ್ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಎಂದು ಘೋಷಿಸಲಾಗಿದೆ. ಆದರೆ ’ಇರೈವನ್ ಸರಾಸರಿಗಿಂತ ಕೆಳಗಿದೆ.