ರಾಘವ ಕಲಾ ಮಂದಿರದಲ್ಲಿ ಪಂಚಾಂಗ ಪಠಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮಾ,24-  ಯುಗಾದಿ ಹಬ್ಬದ ಅಂಗವಾಗಿ  ನಗರದ ರಾಘವ ಕಲಾಂದಿರದಲ್ಲಿ ಶ್ರೀ ಶುಭಕೃತ್ ನಾಮ ಸಂವತ್ಸರ ನೂತನ ವರ್ಷದ ಶುಭ ಸಂದರ್ಭದಲ್ಲಿ ನಗರ ನಾಗರೀಕರಿಗೆ ಪಂಚಾಂಗ ಶ್ರವಣ ಕಾರ್ಯಕ್ರಮ ಮೊನ್ನೆ ಸಂಜೆ ನಡೆಯಿತು.
ಪಂಚಾಂಗ ಕರ್ತ ಬಳ್ಳಾರಿಯ ನಾಗಲ ಕೇರಿ ನಿವಾಸಿ ಡಾಕ್ಟರ್ ಎ. ಮಹೇಶ್ ಶರ್ಮಾ ಮತ್ತು ಸಂಸ್ಥೆಯ ಗೌರವಾಧ್ಯಕ್ಷ ಕೆ.  ಚನ್ನಪ್ಪ ಅಧ್ಯಕ್ಷ ಕೆ‌ ಕೊಟೆಶ್ವರ ರಾವ್ ಉಪಾಧ್ಯಕ್ಷರಗಳಾದ ರಮೇಶ್ ಗೌಡ ಪಾಟೀಲ್,  ವಿಷ್ಣುವರ್ಧನ್ ರೆಡ್ಡಿ, ಗೌರವ ಕಾರ್ಯದರ್ಶಿ ಎನ್, ಪ್ರಕಾಶ್ ಮತ್ತು ಜಂಟಿ ಕಾರ್ಯದರ್ಶಿ  ಎಂ ರಾಮಾಂಜನೇಯಲು ಮೊದಲಾದವರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ  ನೂತನ ವರ್ಷದ ಯುಗಾದಿ ಪಂಚಾಂಗ ಪಠಣ ನಡೆಯಿತು. ಮಹೇಶ್ ಶರ್ಮಾ ಅವರು ಈ ವರ್ಷದ ರಾಶಿ ಪಲಗಳ ಬಗ್ಗೆ ಮತ್ತು ಮಳೆ ಮತ್ತು ರಾಜಕೀಯ ಬಗ್ಗೆ ವಿವರಣೆ ನೀಡಿದರು.
ನಂತರ ಮೆಮೋರಿಯಲ್ ಅಸೋಶಿಯೇಶನ್ ಸಂಸ್ಥೆಯ ಅಮೃತ ಮಹೋತ್ಸವ ಪ್ರಯುಕ್ತ ಧಾರವಾಡದ ಸಮುದಾಯ ತಂಡದವರಿಂದ “ಬುದ್ದ ಪ್ರಬುದ್ಧ”  ನಾಟಕ ಪ್ರದರ್ಶನ ಶ್ರೀ ವಾಸುದೇವ ಗಂಗೇರ ಇವರ ನೇತೃತ್ವದಲ್ಲಿ ನಡೆಯಿತು.