ರಾಘವ ಕಲಾಮಂದಿರದಲ್ಲಿ ಸ್ವಾತಂತ್ರ್ಯೋತ್ಸವ


ಬಳ್ಳಾರಿ, ಆ.15: ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್ ನಿಂದ ರಾಘವ ಕಲಾಮಂದಿರದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಸ್ಥೆಯ ಅಧ್ಯಕ್ಷ ಕೆ ಕೋಟೆಶ್ವರ ರಾವ್ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಮೇಶ್ ಗೌಡ ಪಾಟೀಲ್, ಜಂಟಿ ಕಾರ್ಯದರ್ಶಿ ಶ್ರೀ ಎಂ ರಾಮಾಂಜನೇಯಲು, ಕೆ ಕೃಷ್ಣ, ಕೆ ಶ್ಯಾಮ ಸುಂದರ, ದೇವಣ್ಣ,ಜಿ ಆರ್ ವೆಂಕಟೇಶಲು, ಟಿ ವಿರುಪಾಕ್ಷಗೌಡ,ಜೆ ಪ್ರಭಾಕರ, ಗಾದೆಂ ಗೋಪಾಲ್ ಕೃಷ್ಣ,ವಿ ರಾಮಚಂದ್ರ, ಶೇಷ ರೆಡ್ಡಿ ಬಿ ಎಂ ಬಸವರಾಜ್, ಹೆಚ್ ರಘುನಾಥ,ಪಿ ಶ್ರೀನಿವಾಸಲು, ರಮಣಪ್ಪ ಭಜಂತ್ರಿ ಉಪಸ್ಥಿತರಿದ್ದರು.