ರಾಘವ ಕಲಾಮಂದಿರದಲ್ಲಿಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್  ನಿನ್ನೆ  ಸಂಜೆ ರಾಘವ ಕಲಾಮಂದಿರದಲ್ಲಿ  ಸಂಸ್ಥೆಯ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಹಮ್ಮಿಕೊಂಡಿತ್ತು. 
ಡ್ರೀಮ್ ವರ್ಲ್ಡ್ ಸ್ಕೂಲ್ ನಿಂದ  ಅನ್ನಮಯ್ಯ, ವಿಜಯದಾಸರ, ಪುರಂದರದಾಸರು ಮೊದಲಾದವರ ಕೀರ್ತನೆಗಳ ಗಾಯನ ನಡೆಯಿತು.
 ಎನ್ ಬಸವರಾಜ್, ಡಾ. ಎನ್ ಶ್ರೀನಿವಾಸ ರೆಡ್ಡಿ, ಡಾ‌. ಎನ್. ಎಸ್. ವೇಣುಗೋಪಾಲ್, ಕೆ ಬಿ ಸಿದ್ದಲಿಂಗಪ್ಪ,  ದಾಕ್ಷಾಯಿಣಿ,  ಬದರಿನಾಥ,  ಅಶ್ವಿನಿ  ಅವರು ಹಾಡುಗಳ ಭಾವ ಅರ್ಥವನ್ನು ವಿವರಿಸಿದರು.
ನಂತರ ನಗರದ ಸರ್ಕಾರಿ ಮಾಡಲ್ ಹಿರಿಯ ಪ್ರಾಥಮಿಕ ಶಾಲೆ, ಎಂ ಬಿ ಎಸ್ ಎಲ್ ಹೈಸ್ಕೂಲ್ , ಚೈತನ್ಯ ಜ್ಯೂನಿಯರ್ ಕಾಲೇಜು , ಸರ್ಕಾರಿ ಆದರ್ಶ ವಿದ್ಯಾಲಯ , ಎಂ ಎ ಕೆ ಎ , ಎಸ್ ಜಿ ಟಿ,ಮದರ್ ಥೇರಸ್,ಲಾಲ್ ಬಹದ್ದೂರ್ ಶಾಸ್ತ್ರಿ ಹೈಸ್ಕೂಲ್ ಗಳ  ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಮತ್ತು ಕುಮಾರಿ ಸಹಜ ದೀಪ ನೃತ್ಯ ನಡೆಸಿಕೊಟ್ಟರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್ ಪ್ರಕಾಶ್, ಗೌರವಾಧ್ಯಕ್ಷ  ಕೆ. ಚನ್ನಪ್ಪ, ಅಧ್ಯಕ್ಷ  ಕೆ. ಕೋಟೇಶ್ವರ ರಾವ್, ಉಪಾಧ್ಯಕ್ಷರುಗಳಾದ  ರಮೇಶ್ ಗೌಡ ಪಾಟೀಲ್,  ಹೆಚ್ ವಿಷ್ಣುವರ್ಧನ್ ರೆಡ್ಡಿ, ಖಜಾಂಚಿ  ಪಿ ಧನಂಜಯ, ಜಂಟಿ ಕಾರ್ಯದರ್ಶಿ ಎಂ ರಾಮಾಂಜನೇಯಲು, ಕೆ ರಾಮಾಂಜನೇಯಲು ,ಕೆ ಕೃಷ್ಣ, ಕೆ ಶ್ಯಾಮ ಸುಂದರ, ಬಿ ಎಂ ಬಸವರಾಜ್, ಜಿ ಪ್ರಭಾಕರ, ಜಿ ಆರ್ ವೆಂಕಟೇಶಲು, ಸುರೇಂದ್ರ ಬಾಬು,ಎನ್ ಬಸವರಾಜ್, ಕನಗೋಲು ಅನಿಲ್ ಬಾಬು , ಪಿ ಶ್ರೀನಿವಾಸಲು, ರಮಣಪ್ಪ ಭಜಂತ್ರಿ ಮೊದಲಾದವರು ಇದ್ದರು.