ರಾಘವ ಕಲಾಮಂದಿರದಲ್ಲಿದೇಶಭಕ್ತಿ ಗೀತೆಗಳಿಗೆ ನೃತ್ಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.16: ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್ ನಿಂದ 77ನೇ ಸ್ವಾತಂತ್ರೋತ್ಸವ ಮಹೋತ್ಸವದ ಅಂಗವಾಗಿ ನಿನ್ನೆ ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನವನ್ನು  ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಂಡಿತ್ತು.
ಡ್ರೀಮ್ ವರ್ಲ್ಡ್ ಸ್ಕೂಲ್ ,  ನಂದಾ ರೆಸಿಡೆನ್ಸಿಯಲ್ ಸ್ಕೂಲ್  ಮತ್ತು ಸರ್ಕಾರಿ ಆದರ್ಶ ವಿದ್ಯಾಲಯ  ಮಕ್ಕಳಿಂದ ನಮೋ ನಮೋ ಭಾರತಾಂಬೆ,ದೇಶಮಂಟೆ ಮಟ್ಟಿಕಾದೊಯ್, ಭರತನಾಟ್ಯ,ಜೋಷ್ ಗೀತೆ, ತೇರಿ ಮಾತ, ಸಲಾಂ ಸೋಲ್ಜರ್ ಗೀತೆಗಳಿಗೆ ನೃತ್ಯ ಮತ್ತು ನಾಟಕ ಪ್ರದರ್ಶನ ನಡೆಸಿಕೊಟ್ಟರು.
ಎನ್. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.
ಅಸೋಸಿಯೇಷನ್  ಗೌರವಾಧ್ಯಕ್ಷ  ಕೆ. ಚನ್ನಪ್ಪ, ಅಧ್ಯಕ್ಷಕೆ ಕೋಟೇಶ್ವರ ರಾವ್, ಉಪಾಧ್ಯಕ್ಷ ರಮೇಶ್ ಗೌಡ ಪಾಟೀಲ್,  ಜಂಟಿ ಕಾರ್ಯದರ್ಶಿ ಎಂ ರಾಮಾಂಜನೇಯಲು, ಕೆ ರಾಮಾಂಜನೇಯಲು ,ಕೆ ಕೃಷ್ಣ, ಕೆ ಶ್ಯಾಮ ಸುಂದರ, ಬಿ ಎಂ ಬಸವರಾಜ್, ಜಿ ಪ್ರಭಾಕರ, ಜಿ ಆರ್ ವೆಂಕಟೇಶಲು, ಆರ್ ದೇವಣ್ಣ, ವಿ ರಾಮಚಂದ್ರ, ರಮಣಪ್ಪ ಭಜಂತ್ರಿ ಹಾಗೂ ಕಲಾವಿದರು ಭಾಗವಹಿಸಿದ್ದರು.