ರಾಘವೇಂದ್ರ ಹಿಪ್ಪರಗಿ ರಾಷ್ಟ್ರ ಮಟ್ಟದ ಯೋಗಾ ಸ್ಪರ್ಧೆಗೆ ಆಯ್ಕೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.4: ಕೇಂದ್ರಿಯ ವಿದ್ಯಾಲಯದ 10ನೇ ತರಗತಿಯ ವಿಜಯಪುರ ವಿದ್ಯಾರ್ಥಿ ದಿನಾಂಕ 2-7-2023 ರಂದು ಮಲ್ಲೇಶ್ವರಂ ಬೆಂಗಳೂರುನಲ್ಲಿ ನಡೆದ ರಾಜ್ಯ ಮಟ್ಟದ ಯೊಗಾ ಯು 17 ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಯೋಗಾ ಸ್ಪರ್ಧೆಗೆ ಆಯ್ಕೆಯಾಗಿ ವಿಜಯಪುರ ಜಿಲ್ಲೆಯ ಕೀರ್ತಿ ಬೆಳಗಿಸಿದ್ದಾನೆ.
ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಜ್ಞಾನಯೋಗಾಶ್ರಮದ ಸ್ವಾಮಿಗಳಾದ ಶ್ರೀ ನೀಲಕಂಠ ಸ್ವಾಮಿಗಳು ಆಶೀರ್ವಚನ ನೀಡುತ್ತಾ ಇಚ್ಛಾ ಶಕ್ತಿ ಇದ್ದರೆ ಮಾತ್ರ ಏನಾದರೂ ಸಾಧಿಸಬಹುದು. ಇಲ್ಲದಿದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದರು. ಮತ್ತು ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು ತಿಳಿಸುತ್ತ ಅವರು 10ನೇ ತರಗತಿಯಲ್ಲಿ ಇಂಗ್ಲೀಷ ವಿಷಯ ಅನುತ್ತೀರ್ಣ ಹೊಂದಿದಾಗ ಬೇರೆ ದಾರಿಯಲ್ಲದೇ ಆಶ್ರಮಕ್ಕೆ ಸೇವೆ ಸಲ್ಲಿಸಲು ಹೋದರು. ಆದರೆ ಅಲ್ಲಿದ್ದ ಸ್ವಾಮಿಗಳು ನೀನು 10ನೇ ತರಗತಿಯನ್ನು ಪಾಸು ಮಾಡಿದರೆ ಮಾತ್ರ ಇಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವದು ಎಂದರು. ಆಗ ಅಲ್ಲೇ ಇದ್ದ ಒಬ್ಬ ನಿವೃತ್ತಿ ಹೊಂದಿದ ಶಿಕ್ಷಕರಿಂದ ಇಂಗ್ಲೀಷ ಕಲಿತು 10ನೇ ತರಗತಿಯನ್ನು ಪಾಸು ಮಾಡಿದರು. ಮುಂದೆ ಕಾಲೇಜು ಶಿಕ್ಷಣದಲ್ಲಿ 05 ವರ್ಷ ಡಾ: ಸುರೇಶ ಬಿರಾದಾರರವರು ಇತಿಹಾಸವನ್ನು ಬೋಧಿಸಿದರು ಎಂದರು.
ಇದೆ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ: ಸುರೇಶ ಬಿರಾದಾರರವರು ಮಾತನಾಡುತ್ತಾ ಶ್ರೀ ನೀಲಕಂಠ ಸ್ವಾಮಿಗಳು ಕಾಲೇಜಿನಲ್ಲಿದ್ದಾಗ ನನ್ನ ಶಿಷ್ಯರಾಗಿದ್ದರು. ಆದರೆ ಈಗ ಅವರು ನನಗೆ ಮತ್ತು ಇಡೀ ಸಮಾಜಕ್ಕೆ ಗುರುಗಳಾಗಿದ್ದಾರೆ. ಶಿಷ್ಯ ಗುರುವನ್ನು ಮೀರಿಸಿದಾಗ ಮಾತ್ರ ಗುರುವಿಗೆ ಸಂತೋಷವಾಗುತ್ತದೆ ಎಂದರು. ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಭಾರತೀಯ ಸಂಸ್ಕøತಿ ಸಂಪ್ರದಾಯ ಮಾಯವಾಗುತ್ತಿದೆ. ಪಾಲಕರಲ್ಲಿ ತಮ್ಮ ಮಕ್ಕಳ ಬಗ್ಗೆ ಪ್ರೀತಿ ಕಾಳಜಿ ಇರಬೇಕು. ಅದೇ ತರನಾಗಿ ಶಿಕ್ಷಕರಲ್ಲಿಯೂ ಕೂಡಾ ಆ ಗುಣ ಇರಬೇಕು. ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎ.ಎಚ್. ಸಗರ, ಸದಾಶಿವ ಹುಗ್ಗಿ, ದೀಪಾ ತಿಳಗೂಳ, ಶ್ರೀದೇವಿ, ಸುರೇಖಾ, ಮಧುಮತಿ ಪಡತರೆ, ಮುಂತಾದವರು ಉಪಸ್ಥಿತರಿದ್ದರು.