ರಾಘವೇಂದ್ರ ಸ್ವಾಮಿ ವೈಭವದ ಆರಾಧನಾ ಮಹೋತ್ಸವ 

ಸಂಜೆವಾಣಿ ವಾರ್ತೆ

 ಹಿರಿಯೂರು ಆ. 30 – ನಾಳೆಯಿಂದ ಸೆ.೨   ರ ಶನಿವಾರದವರೆಗೆ ಮೂರು ದಿನಗಳ ಕಾಲ ಹಿರಿಯೂರಿನ ಹೆಸರಾಂತ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಯ ಆರಾಧನಾ ಮಹೋತ್ಸವದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಮಂಜುನಾಥ್ ಆಚಾರ್ಯ ಹಾಗೂ ಬೃಂದಾವನ ಮಿತ್ರಕೂಟದ ಪದಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಪೂರ್ವರಾಧನೆ ಮಧ್ಯಾರಾಧನೆ ಉತ್ತರಾರ್ಧನೆ  ಲೋಕ ಕಲ್ಯಾಣಕ್ಕಾಗಿ ಮತ್ತು ವರುಣನ ಕೃಪೆಗಾಗಿ ಗಣಪತಿ ಪೂಜೆ ನವಗ್ರಹ ಪೂಜೆ ಕಲಶ ಪಾದ ಪೂಜೆ ಪ್ರತೀದಿನ ಸಂಜೆ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೃಂದಾವನ ಮಿತ್ರ ಕೂಟದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ