ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವನಮನ ಅಕಾಡೆಮಿಯಿಂದ ನೃತ್ಯ ಪ್ರದರ್ಶನ

ಸಂಜೆವಾಣಿ ವಾರ್ತೆ

ದಾವಣಗೆರೆ. ಸೆ.೪; ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಪ್ರಯುಕ್ತ ನಗರದ ಕೆ.ಬಿ.ಬಡಾವಣೆಯ ರಾಯರ ಮಠದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಗರದ ನಮನ ಅಕಾಡೆಮಿಯ ಗುರು ವಿದುಷಿ ಮಾಧವಿ ಡಿ.ಕೆ. ಮತ್ತು ಶಿಷ್ಯ ವೃಂದದವರು ವಿಶೇಷ ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಗಣೇಶ ವಂದನ, ನಟರಾಜ ಸ್ತುತಿ, ಪುಷ್ಪಾಂಜಲಿ, ದಶಾವತಾರ ಸೇರಿದಂತೆ ಇನ್ನೂ ಅನೇಕ ಶಾಸ್ತ್ರೀಯ ನೃತ್ಯಗಳನ್ನು ಮತ್ತು ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಆಧಾರಿತ “ಕಲ್ಪವೃಕ್ಷ” ಎಂಬ ನೃತ್ಯರೂಪಕವನ್ನು ಅತಿ ಸುಂದರವಾಗಿ ಪ್ರಸ್ತುತಪಡಿಸಿದರು. ನಮನ ಅಕಾಡೆಮಿಯ ಗುರುಗಳೊಂದಿಗೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ನೃತ್ಯ ಪ್ರದರ್ಶನ ನೀಡಿದರು.