ರಾಘವೇಂದ್ರ ಸಾವಿನ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಬಳ್ಳಾಪುರ, ಜ.೧೩- ಮೀಟರ್ ಬಡ್ಡಿ ದಂಧೆಕೋರರ ಕಾಟ ತಡೆಯಲಾರದೆ ನೇಣು ಬಿಗಿದು ಅಸತ್ಮಹತ್ಯೆ ಮಾಡಿಕೊಂಡಿದ್ದ ಸುಲ್ತಾನ್ ಪೇಟೆ ಗ್ರಾಮದ ಅರ್ಚ ಕೆ.ವಿ.ರಾಘವೇಂದ್ರ ಅವರ ಸಾವಿನ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು ಹಾಗೂ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೊಹಿತ ಪರಿಷತ್ ಸೇರಿದಂತೆ ವಿವಿಧ ಬ್ರಾಹ್ಮಣ ಸಂಘಟನೆಗಳ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ ಸದರಿ ಪ್ರಕರಣವನ್ನು ತೀವ್ರವಾಗಿ ಖಂಡಿಸಲಾಯಿತು.
ಆತ್ಮಹತ್ಯೆಗೂ ಮುನ್ನ ಮೃತ ರಾಘವೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟ ವೀಡಿಯೋದಲ್ಲಿ ಪ್ರಸ್ತಾಪಿಸಿರುವ ಮೀಟರ್ ಬಡ್ಡಿ ದಂಧೆಕೋರರ ಹೆಸರುಗಳುಳ್ಳವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಹೆಚ್. ಅಮರೇಶ್ ಅವರಿಗೆ ಮನವಿ ಪತ್ರ ನೀಡಿದರು.
ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೊಹಿತರ ಪರಿಷತ್ ಜಿಲ್ಲಾದ್ಯಕ್ಷ ವಿ.ವಿಕ್ರಂ, ಕರ್ನಾಟಕ ಜನಪರ ವೆರಧಿಕೆ ಅದ್ಯಕ್ಷ ಚಂದ್ರಶೇಖರ್, ಪ್ರಮುಖ ಪುರೊಹಿತಗಳಾದ ಎಸ್.ಎನ್.ರಮೇಶ್, ಎಸ್.ಎನ್.ವಾಸುದೇವ್, ನವನೀತ, ರಾಮಮೊಹನ್ ಶಾಸ್ತ್ರಿ, ಮೃತ ರಾಘವೇಂದ್ರ ಅವರ ತಾಯಿ ಸಾವಿತ್ರಮ್ಮ ಒಳಗೊಂಡಂತೆ ಸುಲ್ತಾನಪೇಟೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಹೊಂಡಿದ್ದರು.