ರಾಘವೇಂದ್ರ ಶ್ರೀಗಳ ಮಧ್ಯಾರಾಧನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.02: ಶ್ರೀರಾಘವೇಂದ್ರಸ್ವಾಮಿಗಳ 352ನೇಆರಾಧನಾಮಹೋತ್ಸವದ ಮಧ್ಯಾರಾಧನೆ ಯನ್ನು  ಕೌಲ್ ಬಜಾರ್ ಮಾರವಾಡಿ ಗಣೇಶ ದೇವಸ್ಥಾನದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿ ಶ್ರದ್ಧಾಭಕ್ತಿಯಿಂದ  ಆಚರಿಸಿತು.
ಬೆಳಿಗ್ಗೆ ವಾಯುಸ್ತುತಿ,ವೆಂಕಟೇಶ್ವರ ಸ್ತೋತ್ರ, ಶ್ರೀರಾಘವೇಂದ್ರ ‌ಸ್ವಾಮಿಗಳ ಅಷ್ಟೋತ್ತರ ಜರುಗಿತು ನಂತರಪಂಚಾಮೃತ ಅಭಿಷೇಕ, ಕನಕಾಭಿಷೇಕ ನಡೆಯಿತು. ಪಂಡಿತ ಶ್ರೀವಿಜೇಂದ್ರಾಚಾಯ೯ಫಸಗಿ ಯವರು ಶ್ರೀರಾಘವೇಂದ್ರ ಸ್ವಾಮಿ ಗಳಜೀವನ ಹಾಗೂ ‌ಅವರ ಕೃತಿಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ
ದರು. ಶ್ರೀ ವ್ಯಾಸರಾಜ ಮಹಿಳಾ ಭಜನಾ ಮಂಡಳಿ  ಸದಸ್ಯರುವಿವಿಧ ದಾಸರ ಹಾಗೂದೇವರ ಸಂ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು
ಮಹಾಮಂಗಳಾರತಿ, ತೀರ್ಥ ಪ್ರಸಾದ ಜರುಗಿತು.
ಶ್ರೀ ರಾಜೇಂದ್ರ ಆಚಾರ್ಯ ಆಲೂರು ಮತ್ತು ಮೋಹನದಾಸ ಅವರು ಪೂಜಾ ಕೈಂಕರ್ಯಗಳನ್ನು ನೇರವೇರಿಸಿದರು. ಶ್ರೀರಾಘವೇಂದ್ರ ಸ್ವಾಮಿಗಳ ಭಾವಚಿತ್ರಕ್ಕೆ ವಿವಿಧ ಹೂವುಗಳಿಂದ ಅಲಂಕರಿಲಾಗಿತ್ತು ಕಾರ್ಯಕ್ರಮದಲ್ಲಿ ಗುರುರಾಜ ಸೇವಾ ಸಮಿತಿ ಯು ಕಾರ್ಯಕಾರಿ ಮಂಡಳಿಯ ಸದಸ್ಯರಾದ ಹೆಚ್.ವೇಣುಗೋಪಾಲ್. ಬಿ.ಅನಂತ ಆಚಾರ್ಯ, ಎಂ.ಭೀಮರಾವ್
ಕುಲಕರ್ಣಿ, ಜಿ.ಎಂ.ನರಸಿಂಹ ಮೂರ್ತಿ, ಹೆಚ್.ಎಸ್.ಕೇಶವ ಮತ್ತು ಡಿ.ಎಸ್.ವಸಂತಮಾಧವ,ವಿಜಯರಾವ್,ಜೆ.ರಾಮರಾವ್ ಡಿ.ಎಚ್.ರಘುನಾಥ .ಪ್ರಭಂಜನಮುಂತಾದವರು ಉಪಸ್ಥಿತರಿದ್ದರು.