ರಾಘವೇಂದ್ರಸ್ವಾಮಿ ಮಠದಲ್ಲಿ ಕಾರ್ತಿಕೋತ್ಸವ

ಹಿರಿಯೂರು.ಡಿ.3: ನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುವಾರ ಸಂಜೆ ಭಕ್ತಿಭಾವದ ಕಾರ್ತೀಕೋತ್ಸವ ಹಾಗೂ ದೀಪೋತ್ಸವ ಪೂಜಾ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ಶ್ರೀಮತಿ ಗೀತಾ ರಾಧಾಕೃಷ್ಣ ಮತ್ತು ತಂಡದವರಿAದ ಭಜನೆ ಹಾಗೂ ಭಕ್ತಿಗೀತೆಗಳ ಗಾಯನ, ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಗುರುಸ್ವಾಮಿಯವರಾದ ಶ್ರೀಸದಾನಂದ ಸ್ವಾಮಿ ಮತ್ತು ವೃಂದದವರಿAದ ಭಕ್ತಿಗೀತೆಗಳ ಗಾಯನ ಹಾಗು ಅಯ್ಯಪ್ಪ ಸ್ವಾಮಿಯ ಭಜನೆ ಏರ್ಪಡಿಸಲಾತ್ತು. ದೇವಾಲಯದ ತುಂಬಾ ಝಘ ಮಘಿಸುವ ವಿದ್ಯುದ್ದೀಪಗಳು ಹಾಗೂ ಬಣ್ಣ ಬಣ್ಣದ ಹೂವಿನ ಅಲಂಕಾರ ಮಾಡಲಾಗಿತ್ತು ದೀಪೋತ್ಸವ ಕಣ್ಮನ ಸೆಳೆಯುವಂತಿತ್ತು ಶ್ರೀರಾಘವೇಂದ್ರ ಸ್ವಾಮಿ ಬೃಂದಾವನವನ್ನು ವಿವಿಧ ಹೂವುಗಳಿಂದ ಹೂಮಾಲೆಗಳಿಂದ ಸಿಂಗರಿಸಲಾಗಿತ್ತು ಪುಷ್ಪಾರ್ಚನೆ ಪಂಚಾಮೃತ ಅಭಿಷೇಕ ಹಾಗೂ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಮಹಾ ಮಂಗಳಾರತಿ ನಡೆಯಿತು. ಭಕ್ತರಿಗೆ ತೀರ್ಥ ಪ್ರಸಾದ ಅಕ್ಷತೆ ವಿತರಣೆ ಮಾಡಲಾಯಿತು. ನಂತರ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ನಗರದ ನೂರಾರುಜನ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೃಂದಾವನ ಮಿತ್ರಕೂಟದ ಪದಾಧಿಕಾರಿಗಳು ಹಾಗೂ ಅರ್ಚಕ ವೃಂದದವರು ಭಾಗವಹಿಸಿ ಕಾರ್ತಿಕೋತ್ಸವ ಪೂಜಾಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದರು.