ರಾಘವರು ತಮಗೆ ಕೊಟ್ಟ ಪಾತ್ರಕ್ಕೆ ಜೀವ ತುಂಬುತ್ತಿದ್ದರು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.17: ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ಟಿ. ರಾಘವಾಚಾರ್ಯರ ಸ್ಮಾರಕ ದತ್ತಿ ಕಾರ್ಯಕ್ರಮ ನಿನ್ನೆ ಜರುಗಿತು.
ರಾಘವ ಮೆಮೋರಿಯಲ್ ಅಸೋಸಿಯೇಷನ್ ನ ಗೌರವ ಕಾರ್ಯದರ್ಶಿ ಎನ್ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ,  . ಬಳ್ಳಾರಿ ಹಲವಾರು ರಂಗ ಕಲಾವಿದರನ್ನು ಈ ನಾಡಿಗೆ ಕೊಟ್ಟಂತಹ ಪ್ರದೇಶವಾಗಿದೆ, ನೀವು ವಿದ್ಯೆಯ ಜೊತೆಗೆ ವಿನಯವನ್ನು ಬೆಳೆಸಿಕೊಂಡು ನಾಡಿಗೆ ಕೀರ್ತಿ ತರುವ ಮಕ್ಕಳಾಗಿ ಎಂದರು
ದತ್ತಿ ಉಪನ್ಯಾಸ ನೀಡಿದ ವಶಿಷ್ಠ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರ ಡಿ. ಕರಿಯಪ್ಪ,  ಬಳ್ಳಾರಿ ರಾಘವರ ಸಾಧನೆ ಅವರು ಬೆಳೆದು ಬಂದ ದಾರಿ,  ಕಲಾ ಶಾರದೆ ಒಲಿದು ಬಂದ ಪರಿಯನ್ನು ತಿಳಿಸಿ.  ರಾಘವರು ತಮಗೆ ಕೊಟ್ಟ ಪಾತ್ರಕ್ಕೆ ಜೀವ ತುಂಬುತ್ತಿದ್ದರು, ನಟನ ಕೌಶಲ್ಯವನ್ನು ಹೊಂದಿದ  ಸರಳ ಮತ್ತು ಸಜ್ಜನಿಕೆಯ ವ್ಯಕ್ತಿಯಾಗಿದ್ದರೆಂದರು.‌
ಆದರ್ಶ ವಿದ್ಯಾಲಯದ ಪ್ರಭಾರಿ ಮುಖ್ಯ ಗುರು  ಕುಮಾರಸ್ವಾಮಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಮಣಪ್ಪ ಭಜಂತ್ರಿ, ನಿವೃತ್ತ ಉಪನ್ಯಾಸಕ  ಎಂ. ರಾಮಾಂಜನೇಯಲು ಹಾಗು ರಂಗ ಕಲಾವಿದರಾದ ಪುರುಷೋತ್ತಮ ಹಂದಿಹಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾಗರೆಡ್ಡಿ ಕೆ.ವಿ. ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಪರಿಷತ್ತಿನ ಗೌರವ ಕಾರ್ಯದರ್ಶಿ ಕಾರ್ತಿಕ್ ಮರಿಸ್ವಾಮಿ ಮಠ  ಸ್ವಾಗತ, ಪ್ರಸ್ತಾವಿಕ ನುಡಿಗಳನ್ನಾಡಿದರು,  ಆರ್. ವೀಣಾ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು, ತಾಲೂಕು ಘಟಕದ ಕೋಶಾಧ್ಯಕ್ಷ ಶರಣಬಸವ  ವಂದಿಸಿದರು.