ರಾಗ್ ರಂಗ್ ನಲ್ಲಿ ಪಾಂಡುರಂಗಪ್ಪಗೆ ಸನ್ಮಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ನ,14- ನಗರದ ಸಿರುಗುಪ್ಪ ರಸ್ತೆಯ ಹವಂಬಾವಿ ಪ್ರದೇಶದ ಗಾನಯೋಗಿ ಕಲಾ ಕೇಂದ್ರದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯಿಂದ  23ನೇ ರಾಗರಂಗ ಮಾಸಿಕ ಸಂಗೀತ ಕಾರ್ಯಕ್ರಮ
ನಿನ್ನೆ ನಡೆಯಿತು.
ಕಾರ್ಯಕ್ರಮದಲ್ಲಿ ಈ ವರ್ಷದ ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತ ಪಾಂಡುರಂಗಪ್ಪ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪೊಲೀಸ್ ಜಿಮ್ ಖಾನ್ ದ  ಟೇಬಲ್ ಟೆನ್ನಿಸ್ ತರಬೇತುದಾರ ಶಿವಾನಂದ ಕಥಕನಹಳ್ಳಿ ಮತ್ತು ದೊಡ್ಡ ಬಸವ ಗವಾಯಿ ಡಿ ಕಗ್ಗಲ್ ಆಗಮಿಸಿದ್ದರು.
ಅಂಗವಿಕಲರ ಸಂಘದ  ಮುಖಂಡ ಕುಮಾರ್ ಬೇವಿನಹಳ್ಳಿ ಹಾಗೂ ವೀರೇಶ್ ಸ್ವಾಮಿ ತೆಕ್ಕಲಕೋಟೆ ಮತ್ತು ಕಲಾವಿದರಾದ ಎರೇಗೌಡ ಗಣಿಕೆ ಹಾಳ್, ಸುಧಾಕರ, ಸಂತೋಷ್ ಕುಮಾರ್ ಭಾಗವಹಿಸಿದ್ದರು ನಂತರ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು