ರಾಗಿ ಹೆಲ್ತ್‍ಮಿಕ್ಸ್ ಹಾಲು ವಿತರಣೆ

ನವಲಗುಂದ,ಫೆ24: ಕ್ಷಿರಭಾಗ್ಯ ಯೋಜನೆಯಡಿ ಕೆನೆಭರಿತ ಹಾಲಿನಲ್ಲಿ ರಾಗಿ ಮಾಲ್ಟ್ ಮಿಶ್ರಣ ಮಾಡಿ ಶಾಲಾ ಮಕ್ಕಳಿಗೆ ನೀಡುವಂತಹ ಸರ್ಕಾರದ ನೂತನ ಕಾರ್ಯಕ್ರಮದಿಂದ ಶಾಲಾ ಮಕ್ಕಳು ಉತ್ತಮ ಆರೋಗ್ಯ ಹೊಂದುತ್ತಾರೆ ಎಂದು ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕ ಎಂ.ಎಸ್ ಹುಗ್ಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಂ-3ರಲ್ಲಿ ತಾಲೂಕಾ ಮಟ್ಟದ ಸಾಯಿಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಹಾಲು ವಿತರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ರಾಗಿ ಮಾಲ್ಟ್ ಮಕ್ಕಳಲ್ಲಿ ಪೌಷ್ಟಿಕ ಅಂಶವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವಾಗಿರುವಂತೆ ಮಾಡುತ್ತದೆ, ಮಕ್ಕಳು ಆ ರಾಗಿ ಮಿಶ್ರಿತ ಹಾಲನ್ನು ಕುಡಿಯುವುದರ ಮೂಲಕ ಉತ್ತಮ ಆರೋಗ್ಯ ಹೊಂದಬೇಕೆಂದು ಸಲಹೆ ನೀಡಿದರು.

ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಮಾತನಾಡಿ ರಾಜ್ಯ ಸರ್ಕಾರ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳ ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾರದಲ್ಲಿ ಮೂರು ದಿನ ರಾಗಿ ಬೆರೆಸಿದ ಹಾಲು ನೀಡುತ್ತಿರುವಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ, ಇದು ಶಾಲಾ ಮಕ್ಕಳ ಶಿಕ್ಷಣದ ಜೊತೆಯಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿರುವಂತಹ ಉತ್ತಮ ಕಾರ್ಯಕ್ರಮವಾಗಿದೆ ಎಂದರು.

ಈ ಸಂದರ್ಭದಲ್ಲಿ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕ ಎಂ.ಎಸ್ ಹುಗ್ಗಿ,, ಎಸ್. ಕೆ.ಕುರಹಟ್ಟಿ, ಭಾಗಿರಥಿ ಮಳಲಿ, ಎಸ್. ಎಂ. ಬೆಂಚಿಕೇರಿ, ವಿ.ಎಚ್.ಚಾಕಲಬ್ಬಿ, ನಿವೃತ್ತ ಶಿಕ್ಷಕ ಎನ್.ಎನ್ ಹಾಲಿಗೇರಿ, ರಿಯಾಜಅಹ್ಮದ ನಾಶಿಪುಡಿ,, ಎಸ್. ಎಸ್. ಜೋಶಿ, ವೀರಣ್ಣ ಶಿರೋಳ, ರಜಿಯಾಬೇಗಂ ಕೊಪ್ಪಳ, ಕಾಶೀಮಸಾಬ ಮಚಲಿಬಂದರ, ಮಹಮ್ಮದ ತಾಜುದ್ದೀನ ಹುನಗುಂದ, ಮುತ್ತಪ್ಪ ಬಿಸನಾಳ, ಹಜರೆಸಾಬ ಗೋವನಕೊಪ್ಪ, ಶೈಲಾ ದುತಾರಿ, ಲತಾ ಪುಗಶೆಟ್ಟಿ, ದೀಪಾದೇವಿ ಪಾಲಿರೆಚಾ, ಅಕ್ಕಮಹಾದೇವಿ ಹಾಲವರ, ಅನ್ನಪೂರ್ಣ ದೊಡ್ಡಮನಿ, ಬಸಮ್ಮ ಚಿಕ್ಕಣ್ಣವರ, ಸಹ ಶಿಕ್ಷಕರಾದ ಆರ್.ಬಿ ಹಳ್ಳಿಕೇರಿ, ಟಿ.ಎಫ್.ಮರೆಪ್ಪಗೌಡ್ರ, ಎಂ.ಸಿ ಚನ್ನಪ್ಪಗೌಡ್ರ, ಶಿವಯೋಗಿ ಜಂಗಣ್ಣವರ, ಎ.ಎಸ್.ಹುಂಡೆಕಾರ, ಕೆ.ಎಚ್.ಕರೆಭರಮಣ್ಣವರ, ಕೆ.ಕೆ.ಮಂಕಣಿ, ಕೆ.ಎಫ್.ಬಂಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.