ರಾಗಿ ಹಲ್ವಾ

ಬೇಕಾಗುವ ಸಾಮಾಗ್ರಿಗಳು
೧ ಕಪ್ ರಾಗಿ ಹಿಟ್ಟು
೪ ಚಮಚ ತುಪ್ಪ
ಒಂದೂವರೆ ಕಪ್ ಬಿಸಿ ಹಾಲು
೧ ಕಪ್ ಸಕ್ಕರೆ
೨ ಏಲಕ್ಕಿ ಪುಡಿ
ಬಾದಾಮಿ ೫-೬
೫-೬ ಗೋಡಂಬಿ
೭-೮ ಒಣದ್ರಾಕ್ಷಿ
ಮಾಡುವ ವಿಧಾನ
ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ೩ ಚಮಚ ತುಪ್ಪ ಹಾಕಿ. ತುಪ್ಪ ಸಂಪೂರ್ಣವಾಗಿ ಕರಗಿ ಬಿಸಿಯಾದ ನಂತರ ಅದರಲ್ಲಿ ೧ ಕಪ್ ರಾಗಿ ಹಿಟ್ಟು ಸೇರಿಸಿ. ಕಡಿಮೆ ಉರಿಯಲ್ಲಿ ೪ ನಿಮಿಷಗಳ ಕಾಲ ಹಿಟ್ಟನ್ನು ಬೆರೆಸಿ. ಮಿಶ್ರಣದಲ್ಲಿ ಯಾವುದೇ ಉಂಡೆಗಳಿರದಂತೆ ನೋಡಿಕೊಳ್ಳಿ ಮತ್ತು ತುಪ್ಪ ಹಿಟ್ಟು ಚೆನ್ನಾಗಿ ಮಿಶ್ರಣವಾಗಿದೆಯೇ ಗಮನಿಸಿ. ಗ್ಯಾಸ್ ಆಫ್ ಮಾಡಿ ಮತ್ತು ಬಿಸಿ ಹಾಲನ್ನು ಮಿಶ್ರಣಕ್ಕೆ ಸೇರಿಸಿ. ನೀವು ಹಾಲನ್ನು ಮಿಶ್ರಣಕ್ಕೆ ನಿಧಾನವಾಗಿ ಸೇರಿಸುತ್ತಾ ಕಲಸುತ್ತಾ ಬನ್ನಿ. ಹಾಲನ್ನು ಸೇರಿಸುವಾಗ ಸಹ ಮಿಶ್ರಣದಲ್ಲಿ ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ ಈಗ ಮತ್ತೆ ಗ್ಯಾಸ್ ಆನ್ ಮಾಡಿ ಕಡಿಮೆ ಉರಿಯಲ್ಲಿ ನಿಧಾನವಾಗಿ ಬೆರೆಸಿ. ಹಿಟ್ಟು ಸ್ವಲ್ಪ ಗಟ್ಟಿ ಆಗುವವರೆಗೆ ಇದನ್ನೇ ಮುಂದುವರೆಸಿ. ಈಗ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ೨-೩ ನಿಮಿಷ ಬೇಯಿಸಿ. ಮಿಶ್ರಣ ಪ್ಯಾನ್‌ನಿಂದ ಸುಲಭವಾಗಿ ಹೊರಬರುವವರೆಗೆ ಮಿಶ್ರಣವನ್ನು ಬೇಯಿಸಿ. ನಂತರ ಗ್ಯಾಸ್ ಆಫ್ ಮಾಡಿ ಹಲ್ವಾವನ್ನು ೨-೩ ನಿಮಿಷಗಳ ಕಾಲ ಪಕ್ಕಕ್ಕೆ ಇಡಿ. ಅಂತಿಮವಾಗಿ ಹಲ್ವಾವನ್ನು ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳಿಂದ ಅಲಂಕರಿಸಿ. ಈಗ ರುಚಿಕರ ಬಿಸಿಬಿಸಿ ಹಲ್ವಾ ಸವಿಯಲು ಸಿದ್ಧ.