ರಾಗಿ ಬಗ್ಗೆ ಹಾಡು ಬರೆದ ಗ್ರ್ಯಾಮಿ ಗಾಯಕಿ: ಪ್ರಧಾನಿಯಿಂದ ಮೆಚ್ಚುಗೆ

ವಾಷಿಂಗ್ಟನ್,ಜೂ.23-  2023ರ ವರ್ಷವನ್ನು  ಅಂತರರಾಷ್ಟ್ರೀಯ ರಾಗಿ ವರ್ಷ ಎಂದು ವಿಶ್ವಸಂಸ್ಥೆ ಘೋಷಿಸಿರುವ ಹಿನ್ನೆಲೆಯಲ್ಲಿ ರಾಗಿ ಕುರಿತು ರಚಿಸಿದ ಹಾಡಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗ್ರ್ಯಾಮಿ ವಿಜೇತ ಫಲ್ಗುಣಿ ಶಾ ಅವರು ಭಾರತದ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ,  “ರಾಗಿ ಮೇಲೆ ಹಾಡು ಬರೆಯುವಂತೆ ಪ್ರಧಾನಿ ಸೂಚಿಸಿದ್ದರು.  ಅದರಂತೆ ಹಾಡು ಬರೆದು ಹಾಡಿ ಪ್ರಧಾನಿ ಮೆಚ್ಚುಗೆ ಪಡೆದಿದ್ದಾರೆ.

ಅಮೇರಿಕಾ ಭೇಟಿ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ  ಮೋದಿ  ಅವರು ‘ಅಬಂಡೆನ್ಸ್ ಇನ್ ಮಿಲೆಟ್ಸ್’ ಅನ್ನು ಬಿಡುಗಡೆ ಮಾಡಿ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿಂದಿ ಮತ್ತು ಇಂಗ್ಲಿಷ್ ಮಿಶ್ರಿತ ಹಾಡನ್ನು ಬರೆಯುವಲ್ಲಿ ಪ್ರಧಾನ ಮಂತ್ರಿ ಫಲ್ಗುಣಿ ಅವರೊಂದಿಗೆ ಸಹಕರಿಸಿದ್ದಾರೆ. ಫಾಲ್ಗುಣಿ ಮತ್ತು ಆಕೆಯ ಪತಿ ಗೌರವ್ ಹಾಡಿದ್ದಾರೆ. “

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಲ್ಗುಣಿ ,ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಹಾಡಿನ ಕಲ್ಪನೆ ಬಂದಿತು. ಅವರು ನನಗೆ ಹೇಳಿದರು, ‘ರಾಗಿ ಮೇಲೆ ಹಾಡು ಬರೆಯಬೇಕೆಂದು ಬಯಸುತ್ತೀರಾ ಎಂದು ಕೇಳಿದರು. ಖುಷಿಯಿಂದ ಒಪ್ಪಿಕೊಂಡು ಹಾಡು ಬರೆದಿದ್ದೇವೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಂಗೀತ ಪ್ರೇಮಿ,, ಸಣ್ಣ ಹಳ್ಳಿಗಳಲ್ಲಿ ರಾಗಿ ಬೆಳೆಯುವ ರೈತರಿಗೆ ಹಾಡು ತಲುಪುತ್ತದೆ. ಸಣ್ಣ ರೈತರಿಗೆ ಪ್ರಯೋಜನವಾಗುತ್ತದೆ. ಕಡಿಮೆ ಮಳೆಯಲ್ಲಿ, ಉತ್ಪನ್ನಗಳನ್ನು ರಫ್ತು ಮಾಡಬಹುದು ಮತ್ತು ಇದು ಹಸಿವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ”, ಎಂದು  ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂಗೀತ ಪ್ರೇಮಿ. ರಾಗಿ ಬೆಳೆಯಲು ರೈತರಿಗೆ ಸಂದೇಶವನ್ನು ಕಳುಹಿಸಲು ಸಂಗೀತ ಬಳಸುವುದು ಅವರ ಯೋಜನೆಯಾಗಿದೆ. ಅದು ಪ್ರಪಂಚದ ಹಸಿವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ. ಈ ಎರಡೂ ಕೆಲಸಗಳನ್ನು ಮಾಡಲು ಅವರು ಸಂಗೀತವನ್ನು ಶಕ್ತಿ ಕೇಂದ್ರವಾಗಿ ಬಳಸಲು ಬಯಸುತ್ತಾರೆ ಎಂದಿದ್ದಾರೆ.

ಕೇಂದ್ರ ಕೃಷಿ ಸಚಿವಾಲಯ ಹೊರತಂದಿರುವ ರಾಗಿ ಪುಸ್ತಕವನ್ನು ಪ್ರಧಾನಿ ತನಗೆ ಕಳುಹಿಸಿದ್ದಾರೆ . ಇಡೀ ಪುಸ್ತಕವನ್ನು ಓದಿದ್ದೇನೆ .. ಜೋಳ, ಬಜರಾ, ರಾಗಿ, ನಾಚಿನಿ, ಎಲ್ಲಾ ರಾಗಿಗಳ ಬಗ್ಗೆ ನನ್ನ ಸ್ವಂತ ಸಂಶೋಧನೆ ಮಾಡಿದ್ದೇನೆ. ಧಾನ್ಯಗಳ ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ಪ್ರತ್ಯೇಕವಾಗಿ ಸಂಶೋಧನೆ ಮಾಡಿದ್ದೇನೆ, ಏಕೆಂದರೆ ನೀವು ಹಾಡು ಬರೆಯಬೇಕಾದರೆ, ನೀವು ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುವುದು ಉತ್ತಮ, ”ಎಂದು ಅವರು ಹೇಳಿದರು.