ರಾಗಿ ತಿಂದವನೇ ಗಟ್ಟಿವಂತ

ರಾಗಿಯಿಂದ ತಯಾರಿಸಿದ ಸರಿ, ಗಂಜಿ, ಮುದ್ದೆ.. ಇತರೆ ಆಹಾರ ಪದಾರ್ಧಗಳಿಗಿಂತ ಅನೇಕ ಪ್ರಯೋಜನಗಳಿವೆ ಎಂಬುದಾಗಿ ವೈಜ್ಞಾನಿಕ ಸಂಶೋಧನೆಯಿಂದಲೂ ದೃಢಪಟ್ಟಿದೆ. ಹೀಗಾಗಿ ರಾಗಿ ಕೇವಲ ಆಹಾರವಲ್ಲದೇ.. ಅದೊಂದು ದೈಹಿಕ ಆರೋಗ್ಯ ಹೆಚ್ಚಿಸುವಂತದ್ದು ಎಂಬುದಾಗಿ ಅರಿಯಬೇಕಿದೆ.
ಅಡುಗೆಯಲ್ಲಿ ರಾಗಿಯನ್ನು ಬಳಕೆ ಮಾಡುವುದರಿಂದ ಕಬ್ಬಿಣದ ಅಂಶ ನಿಮ್ಮ ದೇಹಕ್ಕೆ ಸಿಗುವ ಮೂಲಕ, ಅನೆ

ಮಿಯಾದಂತ ಖಾಯಿಲೆಯಿಂದ ರಕ್ಷಿಸುತ್ತದೆ
ರಾಗಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಲಭ್ಯವಿರುದುದರಿಂದ, ಮಕ್ಕಳ ಬೆಳವಣಿಗೆಗೆ ಸಹಕಾರಿ.
ಕ್ಯಾಲ್ಸಿಯಂ ಯುಕ್ತ ಆಹಾರ ರಾಗಿಯಾಗಿರುವುದರಿಂದ ಮೂಳೆಗಳ ಬೆಳವಣಿಗೆಗೆ ಉಪಯೋಗಕಾರಿ
ಮಕ್ಕಳಿಗೆ ರಾಗಿಯಿಂದ ತಯಾರಿಸಿದಂತ ಸರಿ, ಗಂಜಿ ಕೊಡೋದ್ರಿಂದ ಇದರಲ್ಲಿರುವ ಡೈಯಟ್ರಿ ಫೈಬರ್ ಅಂಶ ಮಕ್ಕಳಿಗೆ ಸಿಗುವ ಮೂಲಕ, ಮಗುವಿನಲ್ಲಿ ಜೀರ್ಣಕ್ರಿಯೆ ಹೆಚ್ಚುತ್ತದೆ.
ರಾಗಿಯಲ್ಲಿ ಹೆಚ್ಚು ಪೌಷ್ಠಿಕಾಂಶ ಇರೋಂದ್ರಿ.. ಮಕ್ಕಳು ಸೇರಿದಂತೆ ಎಲ್ಲರ ಅನೇಕ ಆರೋಗ್ಯ ಕರ ಸಮಸ್ಯೆಯನ್ನು ದೂರ ಮಾಡುತ್ತದೆ.
ಅಲ್ಲದೇ ಡಯಾಬಿಟಿಸ್ ನಿಂದ ಬಳಲುತ್ತಿರುವವರು ರಾಗಿಯನ್ನು ಬಳಸಿ ಮುದ್ದೆಯನ್ನು ತಯಾರಿಸಿಯೂ ಊಟ ಮಾಡೋದ್ರಿಂದ ಸಕ್ಕರೆಯ ಅಂಶವನ್ನು ಹತೋಟಿಗೆ ತರಬಹುದಾಗಿದೆ. ಹೀಗಾಗಿ ರಾಗಿಯ ಬಳಕೆಯನ್ನು ನಿಮ್ಮ ಮನೆಯಲ್ಲಿ ಇಂದಿನಿಂದಲೇ ಬಳಕೆ ಮಾಡಿ.