ರಾಗಿಮಾಲ್ಟ್ ಯೋಜನೆ ಜಾರಿಗೆ ಶ್ರಮವಹಿಸಿ: ಬಿಇಓ ಯು.ಬಸವರಾಜಪ್ಪ.

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಫೆ.22; ಮಕ್ಕಳಲ್ಲಿನ ಅಪೌಷ್ಟಿಕತೆ ತೊಡೆದು ಹಾಕಲು, ಮದ್ಯಾಹ್ನ ಉಪಹಾರ ಜೊತೆಗೆ ಇದೀಗ ರಾಗಿ ಮಾಲ್ಟ್ ನೀಡಲಾಗುತ್ತಿದ್ದು ಅಪೌಷ್ಟಿಕತೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದುಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ಹೇಳಿದರು.ಪಟ್ಟಣದ ಮೇಗಳಪೇಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ತಾಲೂಕು ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಲ್ಯಾಣ ಕರ್ನಾಟಕ ಬಾಗದಲ್ಲಿ ಸಾಕಷ್ಟು ಮಕ್ಕಳು ಅಪೌಷ್ಟಿಕತೆ ಯಿಂದ ಬಳಲುತ್ತಿದ್ದು ಇದನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ವಿನೂತನವಾಗಿ ಜಾರಿಗೆ ತಂದಿದ್ದು ಮಕ್ಕಳ ಕಲಿಕೆಗೆ ಸದೃಢತೆಗೆ ಮುಂದಾಗಲು ಸರ್ಕಾರದ ಅನೇಕ ಯೋಜನೆಗಳು ಸಹಯಕವಾಗಲಿವೆ. ಯಾವುದೇ ಯೋಜನೆ ಬಂದರು ನೌಕರರು, ಶಿಕ್ಷಕರು ಟೀಕಿಸದೆ ಅವುಗಳನ್ನು ಅನುಷ್ಟಾನಕ್ಕೆ ಮುಂದಾಗಿ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಇದೆ. ಯಾರೇ ಆಗಲಿ ಯೋಜನೆ ಬಗ್ಗೆ ಟೀಕಿ ಮಾಡಿದಲ್ಲಿ ಕ್ರಮವಹಿಸಲಾಗುತ್ತಿದ್ದು ಯಾವುದೇ ಲೋಪ ಬಾರದಂತೆ ಮಕ್ಕಳಿಗೆ ಈ ಯೋಜನೆಯನ್ನು ತಲುಪಿಸಬೇಕು. ಯಾವುದೇ ನಿರ್ಲಕ್ಷ್ಯ ವಹಿಸಬಾರದು ಎಂದು ಶಿಕ್ಷಕರಿಗೆ ಹೇಳಿದ ಅವರು ಇಲಾಖೆಗೆ ಉತ್ತಮ ಹೆಸರು ತರಲು ಮುಂದಾಗಬೇಕು ಎಂದರು.ಅಕ್ಷರದಾಸೋಹ ಸಹಾಯಕ ನಿರ್ದೇಶಕ ಜಯರಾಜ್ ಮಾತನಾಡಿ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರ ವಿನೂತನವಾಗಿ ಹಾಲಿನ ಜೊತೆ ರಾಗಿ‌ಮಾಲ್ಟ್ ಉಚಿತವಾಗಿ ನೀಡಲಾಗುತ್ತಿದ್ದು, ಸದೃಢ ಶರೀರಕ್ಕಾಗಿ ಹಾಗೂ ಆರೋಗ್ಯ ದೃಷ್ಟಿಯಿಂದ ಇದನ್ನು ಇಂದಿನಿಂದ ನೀಡಲಾಗುತ್ತಿದ್ದು ಎಲ್ಲರೂ ಇದರ ಸದುಪಯೋಗ ಮಾಡಿಕೊಳ್ಳಬೇಕು. ವಾರದಲ್ಲಿ ಮೂರು ದಿನ ಬಿಸಿ ಹಾಲಿನೊಂದಿಗೆ ಸಾಯಿ ಶೂರ್ ರಾಗಿ ಮಾಲ್ಟ್ ನ್ನು ಎಲ್ಲಾ ಶಾಲೆಗಳಿಗೂ ನೀಡಲಾಗುವುದು ಎಂದರು.