ರಾಗಿಣಿ ಹೊಸ ಚಿತ್ರ ಗ್ಲಾಮರ್ ನೋಟ ಅನಾವರಣ

ತುಪ್ಪದ ಬೆಡಗಿ ರಾಗಿಣಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಹೊಸ ಚಿತ್ರದ  ಫಸ್ಟ್ ಲುಕ್ ಬಿಡುಗಡೆಯಾಗಿದೆ.ಈ ಚಿತ್ರದಲ್ಲಿ ರಾಗಿಣಿ ಗ್ಲಾಮರ್ ನಲ್ಲಿ ಹದಿಹರೆಯದ  ಹೃದಯಕ್ಕೆ  ಕಿಚ್ಚು ಹಚ್ಚಿದ್ದಾರೆ.

ಫಸ್ಟ್ ಲುಕ್ ನಲ್ಲಿ ಮಾದಕ ಮೈಮಾಟ ಅನಾವರಣ ಮಾಡಿರುವ ರಾಗಿಣಿ ದ್ವಿವೇದಿ ಚಿತ್ರದ ಫಸ್ಟ್ ಲುಕ್ ಅನ್ನು ಅರುಣ್ ಗುರೂಜಿ, ಭಾಸ್ಕರ್ ಗುರೂಜಿ , ಮೋಕ್ಷಗುಂಡಂ ಗುರೂಜಿ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಈ ತಿಂಗಳ 24 ರಂದು ನಟಿ ರಾಗಿಣಿ ಅವರ ಹುಟ್ಟುಹಬ್ಬ ಅದಕ್ಕೂ ಮುನ್ನ ಅವರು ನಟಿಸುತ್ತಿರುವ ಹೊಸ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಮೂಲಕ ಚಿತ್ರದ ಶೀರ್ಷಿಕೆ ಏನು ಇರಬಹುದು ಎನ್ನುವುದಕ್ಕೆ ಕುತೂಹಲ ಹೆಚ್ಚಿಸಿದೆ.

ಚಿತ್ರಕ್ಕೆ ಸದಭಿರುಚಿಯ ನಿರ್ದೇಶಕ ಬಿ.ಎಂ ಗಿರಿರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. “ಹೊಂಬಣ್ಣ” ಚಿತ್ರ ನಿರ್ಮಿಸಿದ್ದ ರಾಮಕೃಷ್ಣ ನಿಗಾಡಿ ಬಂಡವಾಳ ಹಾಕಲು ಮುಂದಾಗಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ ವೇಳೆ ಮಾತನಾಡಿದ ನಟಿ ರಾಗಿಣಿ

ಫಸ್ಟ್ ಲುಕ್ ಸಖತಾಗಿದೆ‌. ಅದಕ್ಕಿಂತ ಚಿತ್ರದ ಶೀರ್ಷಿಕೆ ಹಾಗೂ ಕಥೆ ಇನ್ನೂ ಚೆನ್ನಾಗಿದೆ. ಸದ್ಯದಲ್ಲೇ ಶೀರ್ಷಿಕೆ ಅನಾವರಣವಾಗಲಿದೆ. ಇಡೀ ತಂಡಕ್ಕೆ ಧನ್ಯವಾದಗಳು ಎಂದರು.

ನಿರ್ದೇಶಕ ಬಿಎಂ ಗಿರಿರಾಜ್ ಮಾತನಾಡಿ, ಕೌಂಡಿನ್ಯ ಅವರು ನೆಚ್ಚಿನ ಲೇಖಕರು,ಅವರ ಕಥೆಗಳಿಂದ ಪ್ರೇರಿತನಾಗಿ ಚಿತ್ರ ಮಾಡಿದ್ದೇನೆ. ನಟಿ ರಾಗಿಣಿ ಅವರ ಜೊತೆ ಮೊದಲ ಚಿತ್ರ ಎಂದು ಮಾಹಿತಿ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಜಿ.ಜಿ.ಸ್ಟುಡಿಯೋಸ್ ಎಂಬ ಸಂಸ್ಥೆ ಕೂಡ ಆರಂಭವಾಗಿದೆ. ಇತ್ತೀಚೆಗೆ ಅನೇಕ ಚಿತ್ರ ನಿರ್ಮಾಣವಾಗುತ್ತಿದೆ. ಆದರೆ ಬಿಡುಗಡೆ ಸಮಯದಲ್ಲಿ ಪ್ರಮೋಶನ್ ಹೇಗೆ ಮಾಡಬೇಕೆಂಬುದು ತಿಳಿಯದೆ ಕೆಲವು ಸಿನಿಮಾಗಳು ಸೋತಿದೆ.‌ ನಮ್ಮ‌ ಸಂಸ್ಥೆ ಮುಂಬೈನ ಸಂಸ್ಥೆಯೊಂದರ ಜೊತೆ ಸೇರಿ ಆಸಕ್ತಿಯುಳ್ಳ ಸಿನಿಮಾ ನಿರ್ಮಾಪಕರಿಗೆ ಸಿನಿಮಾ ಪ್ರಮೋಷನ್ ಕುರಿತು ತಿಳಿಸುವ ಕೆಲಸವನ್ನೂ ಜಿಜಿ ಸ್ಟುಡಿಯೋ ಮೂಲಕ ಮಾಡಲು ಉದ್ದೇಶಿಸಿದೆ. ಚಿತ್ರಕ್ಕೆ ಗಿರೀಶ್ ಗೌಡ ಸಾಥ್ ನೀಡಿದ್ದಾರೆ

ಸದ್ಯದಲ್ಲಿಯೇ ಆರಂಭ

 “ಜಟ್ಟ, ” ಮೈತ್ರಿ” ಚಿತ್ರಗಳ ಖ್ಯಾತಿಯ ಬಿ.ಎಂ.ಗಿರಿರಾಜ್ ನಿರ್ದೇಶನದಲ್ಲಿ ನೂತನ ಚಿತ್ರ  ಸದ್ಯದಲ್ಲೇ ಆರಂಭವಾಗಲಿದೆ. ರಾಗಿಣಿ ದ್ವಿವೇದಿ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.ಮೇ 24 ರಂದು ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬ  ಈ ಹಿನ್ನೆಲೆಯಲ್ಲಿ ಚಿತ್ರತಂಡ