ರಾಗಿಣಿ ಜಾಮೀನು ಅರ್ಜಿ ಸುಪ್ರೀಂ ಜ.೧೯ಕ್ಕೆ ಮುಂದೂಡಿಕೆ


ನವದೆಹಲಿ,ಜ.೧೨- ಡ್ರಗ್ಸ್ ಜಾಲ ಪ್ರಕರಣದಲ್ಲಿ ಜಾಮೀನು ಕೋರಿ ನಟಿ ಜೈಲಿನಲ್ಲಿರುವ ಮಾದಕ ನಟಿ ರಾಗಿಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಜ. ೧೯ಕ್ಕೆ ಮುಂದೂಡಿದೆ. ಇದರಿಂದ ಮಕರ ಸಂಕ್ರಾತಿಯನ್ನು ನಟಿ ರಾಗಿಣಿ ಜೈಲಿನಲ್ಲಿಯೇ ಆಚರಿಸುವಂತಾಗಿದೆ.
ನಟಿ ರಾಗಿಣಿ ಪರ ವಕೀಲರು ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸುಪ್ರಿಂ ಕೋರ್ಟ್ ನನ್ಯಾಯಪೀಠವು, ವಿಚಾರಣೆಯನ್ನು ಜನವರಿ ೧೯ಕ್ಕೆ ಮುಂದೂಡಿದೆ. ಇದರಿಂದಾಗಿ ಸದ್ಯಕ್ಕೆ ನಟಿ ರಾಗಿಣಿಗೆ ಜಾಮೀನು ಸಿಗದೇ, ಜೈಲೇ ಗತಿಯಾಗಿದೆ.