ರಾಗಿಣಿ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಕಾರುಗಳ‌ ಮಾರಾಟ

ಬೆಂಗಳೂರು,ನ.12-ಡ್ರಗ್​ ಜಾಲದಲ್ಲಿ ಭಾಗಿಯಾಗಿ ಜೈಲು ಸೇರಿರುವ ನಟಿ ರಾಗಿಣಿ ಕುಟುಂಬದವರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಮನೆ ಹಾಗೂ ಕಾರುಗಳನ್ನು ಮಾರಾಟಕ್ಕಿಟ್ಟಿದ್ದಾರೆ.
ನಟಿ ರಾಗಿಣಿ ಪೋಷಕರು ಹಿಂದೆ ಮನೆಯನ್ನೇ ಮಾರಾಟ ಮಾಡಲು ಹೊರಟಿದ್ದು,ಅದನ್ನು ಯಾರೂ ಖರೀದಿ ಮಾಡದ ಹಿನ್ನೆಲೆಯಲ್ಲಿ ಕಾರುಗಳನ್ನು ಮಾರಲು ಮುಂದಾಗಿದ್ದಾರೆ.
ಹೈಕೋರ್ಟ್​​​ನಲ್ಲಿ ರಾಗಿಣಿ ಜಾಮೀನು ಅರ್ಜಿ ವಜಾ ಆದ ಕಾರಣ ಕಾನೂನು ಹೋರಾಟ ನಡೆಸಲು ರಾಗಿಣಿ ಪೋಷಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಮತ್ತು ಕಾರುಗಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಯಲಹಂಕದಲ್ಲಿರುವ ತಮ್ಮ ಪ್ಲಾಟ್​​ ಅನ್ನ ಮಾರಾಟ ಮಾಡಲು ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಆದ್ರೆ ಅದನ್ನು ಯಾರೂ ಖರೀದಿ ಮಾಡದ ಕಾರಣ ತಮ್ಮ ಮನೆಯಲ್ಲಿದ್ದ, ಇನ್ನೋವಾ ಹಾಗೂ ಮತ್ತೊಂದು ಕಾರನ್ನು ಮಾರಾಟಕ್ಕಿಟ್ಟಿದ್ದಾರೆ. ಇನ್ನೋವಾ ಕಾರಿಗೆ 9 ಲಕ್ಷ ಹಾಗೂ ಮತ್ತೊಂದು ಕಾರಿಗೆ 3 ಲಕ್ಷ ನಿಗದಿಪಡಿಸಿ ಮಾರಾಟ ಮಾಡಲು ಯತ್ನ ಮಾಡುತ್ತಿದ್ದಾರೆ.