ರಾಖಿ ಸಾವಂತ್ ಅಶ್ಲೀಲ ವೀಡಿಯೊಗಳನ್ನು ಸೋರಿಕೆ ಮಾಡಿದ್ದಾರೆಂದು ಆದಿಲ್ ದುರಾನಿ ಆರೋಪ ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತಿದ ರಾಖಿ

ಡ್ರಾಮಾ ಕ್ವೀನ್ ರಾಖಿ ಸಾವಂತ್ ಸಂಕಷ್ಟ ಮತ್ತೊಮ್ಮೆ ಹೆಚ್ಚಾಗಿದೆ. ಆಕೆಯ ಮಾಜಿ ಪತಿ ಆದಿಲ್ ಖಾನ್ “ತನ್ನ ಖಾಸಗಿ ವೀಡಿಯೊಗಳನ್ನು ರಾಖಿ ಸೋರಿಕೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ. ಇದೀಗ ಬಂಧನ ತಪ್ಪಿಸಲು ರಾಖಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ತನಕ ಪರಿಸ್ಥಿತಿ ಬಂದಿದೆ.
ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಯಲ್ಲಿರಲು ಕಾರಣ ಆಕೆಯ ಮಾಜಿ ಪತಿ ಆದಿಲ್ ಖಾನ್ ದುರಾನಿ ಅವರು ರಾಖಿ ಅಶ್ಲೀಲ ವೀಡಿಯೊಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿರುವುದು. ಆಕೆ ತನ್ನ ಖಾಸಗಿ ವಿಡಿಯೋವನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಆದಿಲ್ ರಾಖಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಆದರೆ ಇದನ್ನು ತಪ್ಪಿಸಲು ರಾಖಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದನ್ನು ತಿರಸ್ಕರಿಸಲಾಗಿದೆ. ಇದೀಗ ನಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ವಿಚಾರಣೆ ಏಪ್ರಿಲ್ ೨೨ ರಂದು ಅಂದರೆ ಇಂದು ಸೋಮವಾರ ನಡೆಯಲಿದೆ.


ಡ್ರಾಮಾ ಕ್ವೀನ್ ಸುಪ್ರೀಂ ಕೋರ್ಟ್ ಯಾಕೆ ಮೆಟ್ಟಿಲೇರಿದರು:
ಆದಿಲ್ ಖಾನ್ ದುರಾನಿ ಮತ್ತು ರಾಖಿ ಸಾವಂತ್ ನಡುವಿನ ವಿವಾದ ನಿಲ್ಲುತ್ತಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ದೂಷಿಸುತ್ತಲೇ ಇರುತ್ತಾರೆ. ಆದಿಲ್ ತನ್ನ ಮಾಜಿ ಪತ್ನಿ ರಾಖಿ ತನ್ನ ಖಾಸಗಿ ವೀಡಿಯೊಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು ಮತ್ತು ಈ ವಿಷಯದ ಬಗ್ಗೆ ಎಫ್‌ಐಆರ್ ಕೂಡ ದಾಖಲಿಸಿದ್ದರು. ಆದರೆ ರಾಖಿ ಕೂಡ ಬಾಂಬೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರೂ ಅದು ತಿರಸ್ಕೃತವಾಗಿತ್ತು. ಇದೀಗ ಬಂಧನ ತಪ್ಪಿಸಲು ನಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ವಿಚಾರಣೆ ಏಪ್ರಿಲ್ ೨೨ ರಂದು ನಡೆಯಲಿದೆ. ಈ ಬಾರಿ ಯಾರ ಪರವಾಗಿ ನಿರ್ಧಾರವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.


ರಾಖಿ ವಿರುದ್ಧ ಗಂಭೀರ ಆರೋಪ:
ಬಂಧನದ ಕತ್ತಿ ರಾಖಿ ಸಾವಂತ್ ತಲೆಯ ಮೇಲೆ ತೂಗಾಡುತ್ತಿದೆ. ಆಕೆಯ ವಿರುದ್ಧ ಹಲವು ಗಂಭೀರ ಆರೋಪಗಳಿದ್ದು, ಅದರಲ್ಲಿ ಸಿಕ್ಕಿಬಿದ್ದಿದ್ದಾರೆ. ಮಾನನಷ್ಟಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೫೦೦ ರ ಅಡಿಯಲ್ಲಿ ಮತ್ತು ಕ್ರಿಮಿನಲ್ ಅಪರಾಧಕ್ಕೆ ಸಹಚರರಾಗಿದ್ದಕ್ಕಾಗಿ ಸೆಕ್ಷನ್ ೩೪ ರ ಅಡಿಯಲ್ಲಿ ಅವರ ಮೇಲೆ ಆರೋಪ ಹೊರಿಸಲಾಗಿದೆ. ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ೬೭ ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಟಿವಿ ಟಾಕ್ ಶೋವೊಂದರಲ್ಲಿ ರಾಖಿ ತನ್ನ ಮಾಜಿ ಪತಿ ಆದಿಲ್ ಅವರ ಖಾಸಗಿ ವೀಡಿಯೊವನ್ನು ಪ್ಲೇ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು. ಅವರು ಅದನ್ನು ವಾಟ್ಸಾಪ್‌ನಲ್ಲಿ ಹಂಚಿಕೊಂಡಾಗ ಮಿತಿಯನ್ನು ದಾಟಿದರು. ವಿಡಿಯೋ ತುಂಬಾ ಅಸ್ಪಷ್ಟವಾಗಿದೆ ಮತ್ತು ಅದರ ಗುಣಮಟ್ಟ ತುಂಬಾ ಕೆಟ್ಟದಾಗಿದೆ ಎಂದು ರಾಖಿ ತಮ್ಮ ಸ್ಪಷ್ಟೀಕರಣದಲ್ಲಿ ಹೇಳಿದ್ದಾರೆ.

ಸತತ ೩೫ ಹಿಟ್ ಚಿತ್ರಗಳನ್ನು ನೀಡಿದ ಎವರ್ ಗ್ರೀನ್ ನಟ ’ಜುಬಿಲಿ ಕುಮಾರ್’ ರಾಜೇಂದ್ರ ಕುಮಾರ್

ಬಾಲಿವುಡ್ ನ ಹಿರಿಯ ನಟ ರಾಜೇಂದ್ರ ಕುಮಾರ್ ಅವರ ನಟನೆಯನ್ನು ಎಷ್ಟು ಹೊಗಳಿದರೂ ಸಾಲದು, ಅವರು ಒಂದರ ಹಿಂದೆ ಒಂದರಂತೆ ಸತತ ೩೫ ಹಿಟ್ ಚಿತ್ರಗಳನ್ನು ನೀಡಿದವರು.
ಎವರ್ ಗ್ರೀನ್ ನಟ ರಾಜೇಂದ್ರ ಕುಮಾರ್ ಅವರು ಉದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡವರು. ೬೦-೭೦ರ ದಶಕದಲ್ಲಿ ಇಂಡಸ್ಟ್ರಿಯಲ್ಲಿ ಅದೆಂಥ ಛಾಪು ಮೂಡಿಸಿದರೆಂದರೆ ಅವರ ಬಗ್ಗೆ ಮಾತ್ರವೇ ಎಲ್ಲೆಲ್ಲೂ ಜನ ಮಾತನಾಡುತ್ತಿದ್ದರು. ನಟ ಇಂದು ನಮ್ಮ ನಡುವೆ ಇಲ್ಲದಿರಬಹುದು. ಆದರೆ ಅವರು ತಮ್ಮ ಅಪ್ರತಿಮ ಚಿತ್ರಗಳ ಮೂಲಕ ಯಾವಾಗಲೂ ಜೀವಂತವಾಗಿರುತ್ತಾರೆ.
ಇವರಿಗೆ ಜುಬಿಲಿ ಕುಮಾರ್ ಎಂಬ ಹೆಸರನ್ನೂ ನೀಡಿ ಗೌರವಿಸಲಾಯಿತು. ಇದು ಏಕೆ ಎಂದು ನೀವು ಆಶ್ಚರ್ಯ ಪಡಬಹುದು. ಅದರ ಕಾರಣ ಹೇಳಿದರೆ ಆ ಘಟನೆ ನಿಮ್ಮನ್ನು ಪ್ರೀತಿಸುವಂತೆ ಮಾಡುತ್ತದೆ.


ಜೋಗನ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು:
ರಾಜೇಂದ್ರ ಕುಮಾರ್ ಅವರು ೨೦ ಜುಲೈ ೧೯೨೯ ರಂದು ಸಿಯಾಲ್ಕೋಟ್ ನಲ್ಲಿ ಜನಿಸಿದರು. ಬಾಲ್ಯದಿಂದಲೂ ನಟನೆಯ ಬಗ್ಗೆ ಒಲವು ಹೊಂದಿದ್ದ ಅವರು ೧೯೫೦ ರಲ್ಲಿ ’ಜೋಗನ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಿಂದಲೇ ಅವರು ಎಷ್ಟು ಜನಪ್ರಿಯರಾದರು ಎಂದರೆ ಅವರ ಹೆಸರು ಎಲ್ಲೆಡೆಯೂ ಚರ್ಚೆಯಾಗತೊಡಗಿತು. ನಟ ತಮ್ಮ ಚಿತ್ರರಂಗದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಹಿಟ್ ಚಲನಚಿತ್ರಗಳ ಪಟ್ಟಿಯಲ್ಲಿ ’ಧರ್ಮ’, ’ತಲಾಶ್’, ’ಕಾಲಾ ಗೋರಾ’, ’ಮದರ್ ಇಂಡಿಯಾ’, ’ಧರ್ತಿ’ ಇತ್ಯಾದಿಗಳು ಸೇರಿವೆ.


ಜುಬಿಲಿ ಕುಮಾರ್ ಎಂಬ ಟ್ಯಾಗ್ ನೀಡಲಾಯಿತು:
ಇಂದಿನ ಕಾಲದಲ್ಲಿ ಚಿತ್ರಗಳನ್ನು ಗಳಿಕೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅವುಗಳನ್ನು ಬ್ಲಾಕ್ಬಸ್ಟರ್ ಎಂದು ಕರೆಯಲಾಗುತ್ತದೆ. ಅದೇ ರೀತಿ ಹಿಂದಿನ ಕಾಲದಲ್ಲಿ ಒಬ್ಬ ನಟನ ಯಶಸ್ಸನ್ನು ಬೆಳ್ಳಿಹಬ್ಬ, ಸುವರ್ಣ ಮಹೋತ್ಸವ ಮತ್ತು ವಜ್ರಮಹೋತ್ಸವದ ಮೂಲಕ ಅಳೆಯಲಾಗುತ್ತಿತ್ತು. ಹೀಗಿರುವಾಗ ಒಂದರ ಹಿಂದೆ ಒಂದರಂತೆ ಸತತ ೩೫ ಹಿಟ್ ಚಿತ್ರಗಳನ್ನು ನೀಡಿದ ನಟ ಇವರಾಗಿದ್ದಾರೆ. ಈ ಯಶಸ್ಸಿನಿಂದಾಗಿ ಅವರಿಗೆ ಜುಬಿಲಿ ಕುಮಾರ್ ಎಂಬ ಟ್ಯಾಗ್ ನೀಡಲಾಗಿದೆ. ಇದೇ ಅವಧಿಯಲ್ಲಿ ನಟನಿಗೆ ಪೊಲೀಸ್ ಉದ್ಯೋಗವೂ ಸಿಕ್ಕಿತು, ಆದರೆ ಅವರು ನಟನೆಗೆ ಆದ್ಯತೆ ನೀಡಿ ಪೊಲೀಸ್ ಉದ್ಯೋಗವನ್ನು ತೊರೆದರು.


ಭೂತ್ ಬಂಗ್ಲೆಯನ್ನು ಖರೀದಿಸಿದರು.ಆದರೆ ಅದನ್ನು ಮಾರಾಟ ಮಾಡಲು ಕಷ್ಟವಾಯಿತು:
ರಾಜೇಂದ್ರ ಕುಮಾರ್ ಅವರಿಗೆ ಒಮ್ಮೆ ಕಾರ್ಟರ್ ರಸ್ತೆಯಲ್ಲಿರುವ ಪಾಳುಬಿದ್ದ ಬಂಗಲೆಯ ಮೇಲೆ ಕಣ್ಣು ಬಿದ್ದಿತು. ಅವರು ಅದನ್ನು ಖರೀದಿಸಲು ಮನಸ್ಸು ಮಾಡಿದರು. ಆದರೆ ಅದು ಅವರ ಬಜೆಟ್‌ನಿಂದ ಹೊರಗಿತ್ತು, ಆದರೂ ಅವರು ಹೇಗಾದರೂ ಮಾಡಿ ಆ ಭೂತ್ ಬಂಗಲೆಯನ್ನು ಖರೀದಿಸಿದರು. ನಂತರ ಹಣಕಾಸಿನ ಅಡಚಣೆಯೆದ್ದಾಗ ಅದನ್ನು ರಾಜೇಶ್ ಖನ್ನಾರಿಗೆ ಮಾರಬೇಕಾಯಿತು.
ರಾಜೇಂದ್ರ ಅವರು ಈ ಬಂಗಲೆಯನ್ನು ತುಂಬಾ ಅದೃಷ್ಟವೆಂದು ಪರಿಗಣಿಸಿದ್ದರು ಮತ್ತು ಅವರು ತಮ್ಮ ಬಂಗ್ಲೆಗೆ ತಮ್ಮ ಮಗಳ ಹೆಸರು ಡಿಂಪಲ್ ಹೆಸರನ್ನೇ ಇಟ್ಟಿದ್ದರು ಎಂದು ಹೇಳಲಾಗುತ್ತದೆ.
ಜುಲೈ ೧೨, ೧೯೯೯ ರಂದು ಅವರು ನಿಧನರಾದರು.